ವಿದ್ಯುತ್ ಖಾಸಗೀಕರಣ ರಾಜ್ಯದಲ್ಲಿ ಜಾರಿಗೆ ತರಬೇಡಿ

KannadaprabhaNewsNetwork |  
Published : Jul 23, 2025, 03:10 AM IST
21ಸಿಎಚ್‌ಎನ್‌56ಹನೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಚೈತ್ರ ಅವರ ಮುಖಾಂತರ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ಅವರು  ಸಲ್ಲಿಸಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ಹಾಗೂ ದೇವನಹಳ್ಳಿ ಹೋರಾಟದ ಜಯವನ್ನು ರೈತ ಹುತಾತ್ಮರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಹನೂರು

ಚನ್ನರಾಯಪಟ್ಟಣ ಹಾಗೂ ದೇವನಹಳ್ಳಿ ಹೋರಾಟದ ಜಯವನ್ನು ರೈತ ಹುತಾತ್ಮರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಚೈತ್ರಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆ ಸ್ಥಾಪನೆಯಾಗಿ 45 ವರ್ಷ ಕಳೆಯುತ್ತಿದೆ. ನವಲುಗುಂದ, ನರಗುಂದದಲ್ಲಿ ನಡೆದ ಘಟನೆ ದೊಡ್ಡ ದುರಂತ. ಅಲ್ಲಿ ಮಡಿದ ರೈತರಿಗೆ ಅರ್ಪಣೆಯನ್ನಾಗಿ ಈ ದಿನ ಮಾನಗಳಲ್ಲಿ ಆದಂತಹ ಜಯವನ್ನು ಅರ್ಪಣೆ ಮಾಡುತ್ತಿದ್ದೇವೆ. ಅದರ ಪರಿಣಾಮ ದೇವನಹಳ್ಳಿ ಹಾಗೂ ಚೆನ್ನರಾಯಪಟ್ಟಣದಲ್ಲಿ 13 ಹಳ್ಳಿಗಳ 1777 ಏಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ಕೈ ಬಿಟ್ಟಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜೊತೆಗೆ ತಾವು ಹೇಳಿದ ಹಾಗೆ ಕೆಲವು ಹಕ್ಕುಗಳನ್ನು ಕೊಡಲು ಮುಂದಾಗಬೇಕು ಎಂದರು. ಸರ್ಕಾರ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಗೆಜೆಟ್ ಅದೇಶ ಹೊರಡಿಸಬೇಕು. ಕೊಟ್ಟ ಮಾತಿನಂತೆ ಭೂ ಸುಧಾರಣ ತಿದ್ದು ಪಡಿ ಖಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆಯಬೇಕು. ಕೇಂದ್ರದ ಕೃಷಿ ಮಾರುಕಟ್ಟೆ ನೀತಿಯನ್ನು ತಿರಸ್ಕಾರ ಮಾಡಬೇಕು, ವಿದ್ಯುತ್ ಖಾಸಗೀಕರಣವನ್ನು ರಾಜ್ಯದಲ್ಲಿ ಜಾರಿಗೆ ತರಬಾರದು, ಕಾರ್ಮಿಕ ತಿದ್ದುಪಡಿಯ ಕೋಡ್ ಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು,ರಸಗೊಬ್ಬರ ಕೊರತೆಯನ್ನು ಸರಿಪಡಿಸಬೇಕು,ಹನೂರು ತಾಲೂಕಿನಲ್ಲಿ ಕಾಡಂಚಿನ ಪ್ರದೇಶಗಳು ಹೆಚ್ಚಿದ್ದು ಕಾಡು ಪ್ರಾಣಿಗಳ ಹಾವಳಿ ತಡೆಯಬೇಕು, ಸೋಲಾರ್ ಅಥವಾ ರೈಲ್ವೆ ಬ್ಯಾರಿಕೆಡ್ ಹಾಕಬೇಕು, ಅಲ್ಲದೇ ಹನೂರು ತಾಲೂಕಿನಲ್ಲಿ ಬರುವ ಎಲ್ಲಾ ಜಲಾಶಯಗಳಿಗೂ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂಬ ಹಕ್ಕೋತ್ತಾಯವನ್ನು ಹನೂರು ತಹಸೀಲ್ದಾರ್ ಮೂಲಕ ಸರ್ಕಾರ ಕ್ಕೆ ಮನವಿ ಮಾಡಿದರು.

ಇದೆ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ,ಲೋಕೇಶ್ ಗೌಡ, ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್,ಜಿಲ್ಲಾ ಖಾಯಂ ಸದಸ್ಯ ರವಿ ನಾಯ್ದು, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ರಾಜಮ್ಮಣಿ, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪುಂಗುಡಿ,ಗೌರವ ಅಧ್ಯಕ್ಷ ರಾಜಣ್ಣ,ಹನೂರು ತಾಲೂಕು ಕಾರ್ಯದಕ್ಷ ತಂಗಮಣಿ, ವರದರಾಜು, ಕೂಡಲೂರು ವೆಂಕಟೇಶ್,ಅಜ್ಜೀಪುರ ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Latest Stories

ವಿಯೆಟ್ನಾಮ್‌ಗೆ ಈಗ ಬೆಂಗಳೂರಿಂದಲೇ ನೇರ ವಿಮಾನ
ಡಯಾಬಿಟೀಸ್ ಬಾಧಿತರಿಗಾಗಿ ಹುಟ್ಟಿದ ನಂದಿನಿ ಸ್ವಾದ್‌ ರೊಟ್ಟಿ
ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಆಗಸ್ಟ್‌ನಲ್ಲಿ ಮೆಟ್ರೋ ಸಂಚಾರ ಶುರು