- ಉಪನ್ಯಾಸ ಕಾರ್ಯಕ್ರಮದಲ್ಲಿ ನರರೋಗ ತಜ್ಞ ಡಾ.ವೀರಣ್ಣ ಗಡದ್ - - -
ಗುರುವಾರ ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಿದ್ದ "ಅಪಸ್ಮಾರ (ಮೂರ್ಛೆ ರೋಗ): ಗಾಬರಿ ಬೇಡ, ಅರಿವಿರಲಿ " ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಿದುಳಿನಲ್ಲಿ ನಂಜು, ಜ್ವರ, ರಕ್ತಸ್ರಾವ, ರಕ್ತಹೀನತೆ (ಪ್ಯಾರಾಲಿಸಿಸ್/ ಲಕ್ವಾ) ಮಿದುಳಿನಲ್ಲಿ ಗಂಟು (ಬ್ರೈನ್ ಟ್ಯೂಮರ್) ಅನುವಂಶೀಯ ಅಪಸ್ಮಾರ ಇತರೆ ಕೆಲವು ಕಾರಣಗಳಿಂದ ಅಪಸ್ಮಾರ ಕಾಯಿಲೆ ಬರುತ್ತದೆ. ಮಾತು ನಿಂತಾಗ, ಕೈ, ಕಾಲು ಕುಣಿಯೋವಾಗ, ಕುತ್ತಿಗೆ ಶಟಿಸಿದಾಗ, ಕಣ್ಣು ಕಟ್ಟಿದಂತಾಗಿ ಎಚ್ಚರ ತಪ್ಪುವುದು ಈ ಕಾಯಿಲೆ ಗುರುತಿನ ಸೂಚನೆಗಳು ಎಂದರು.ಮೂರ್ಛೆ ರೋಗ ಉಂಟಾದಾಗ ಕೈಗೊಳ್ಳುವ ಪ್ರಥಮ ಚಿಕಿತ್ಸೆಗಳು ಮುಖ್ಯವಾಗಿವೆ. ಫಿಟ್ಸ್ ಬರುವ ವ್ಯಕ್ತಿಯನ್ನು ಹೋಳು ಮಗ್ಗುಲಾಗಿಸಬೇಕು, ಸುತ್ತಮುತ್ತಲಿನ ಸಾಮಾನುಗಳನ್ನು ಸರಿಸಿ, ರೋಗಿ ಸುತ್ತಲೂ ಜಾಗ ಕೊಡಬೇಕು. ಬಾಯಲ್ಲಿ ಕೈ/ಕರವಸ್ತ್ರ/ ಕಾಟನ್ ಇಡಬಾರದು. ಬಾಯಿಯಲ್ಲಿ ನೀರು ಹಾಕಬಾರದು. ಶೀಘ್ರವೇ ಹತ್ತಿರ ಇರುವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಎಂ.ಬಿ. ಕೌಜಲಗಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಪೋಷಕರು, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.- - - (* ಈ ಫೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)
-16ಕೆಡಿವಿಜಿ35ಃ:ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ವೀರಣ್ಣ ಗಡದ್ ಮಾತನಾಡಿದರು.