ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿಕಲಚೇತನರ ವಿಶೇಷ ಕುಂದು ಕೊರತೆಗಳ ಸಭೆ ನಡೆಸಿ, ಅವರಿಂದ ಸ್ವೀಕೃತವಾದ ಸಮಸ್ಯೆಗಳಿಗೆ ಸ್ಪಂದಿಸಿ ಮಾತನಾಡಿದ ಅವರು, ವಿಕಲಚೇತನರ ಅಭಿವೃದ್ಧಿಗೆ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಶೇ.5ರಷ್ಟು ಅನುದಾನವನ್ನು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರಿಸಬೇಕು. ಮನರೇಗಾ ಯೋಜನೆಯಡಿ 18ವರ್ಷ ಪೂರೈಸಿದ ವಿಕಲಚೇತನರಿಗೆ ಜಾಬ್‌ಕಾರ್ಡ್ ವಿತರಿಸಬೇಕು ಎಂದರು.
ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಕಾರ್ಡ್‌ಗಳಲ್ಲಿ ಸಮಸ್ಯೆಗಳು ಕಂಡುಬಂದರೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.ವಿಕಲಚೇತನರಿಗಾಗಿಯೇ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತಿದ್ದು, ಅವರು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಗೌಡ ಪಾಟೀಲ್, ಕರ್ನಾಟಕ ರಾಜ್ಯ ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರೆಡ್ಡಿ ರಾಜಕೋಳೂರು, ಜಿಲ್ಲಾಧ್ಯಕ್ಷ ಬಸವರಾಜ ಬೈರಮಡ್ಡಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ವಿಶ್ವನಾಥರೆಡ್ಡಿ ಆರ್. ಅಬ್ಬೆತುಮಕೂರ, ನಾಗೇಂದ್ರ ದೊರಿ ಸುರಪುರ, ಬಾಬು ಜಾನೆ ಶಹಾಪುರ, ರವಿ ಐಕೂರ ವಡಗೇರಾ, ಮಾಳಪ್ಪ ಪೂಜಾರಿ, ರಮೇಶ ಕೂಡ್ಲೂರು, ನಾಗರಾಜ ಶಹಪುರ, ಭೀಮರಾಯ ಯಾದಗಿರಿ ಇತರರಿದ್ದರು.