ಬಿತ್ತನೆ ಬೀಜ ನಿಗದಿತ ಬೆಲೆಗಿಂತ ಹೆಚ್ಚಿಗೆ ಮಾರಬೇಡಿ

KannadaprabhaNewsNetwork | Published : May 10, 2025 1:09 AM
Follow Us

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬಳಸುವ ಆಲೂಗೆಡ್ಡೆ ಮಾರಾಟ ಪ್ರಕ್ರಿಯೆಗೆ ಶುಕ್ರವಾರದಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವ್ಯಾಪಾರಕ್ಕೆ ಅಧಿಕೃತ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬಳಸುವ ಆಲೂಗೆಡ್ಡೆ ಮಾರಾಟ ಪ್ರಕ್ರಿಯೆಗೆ ಶುಕ್ರವಾರದಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವ್ಯಾಪಾರಕ್ಕೆ ಅಧಿಕೃತ ಚಾಲನೆ ನೀಡಿದರು.

ನಂತರ ಜಿಲ್ಲಾಧಿಕಾರಿ ಮಾತನಾಡಿ, ಆಲೂಗೆಡ್ಡೆ ಬೀಜವನ್ನು ನಾವು ರೈತರಿಗೆ ವಿತರಣೆ ಮಾಡುವುದಕ್ಕಿಂತ ಮೊದಲು ಅದರ ದರವನ್ನು ನಿಗದಿ ಮಾಡಲಾಗುತ್ತಿದೆ. ಜಿಲ್ಲಾಧ್ಯಂತ ಹಾಗೂ ಹೊರ ಜಿಲ್ಲೆಯವರಿಗೂ ಕೂಡ ನಾವು ಬಿತ್ತನೆ ಬೀಜ ಕೊಡುತ್ತೇವೆ. ಈಗಾಗಲೇ ೧೫೦೦ ರಿಂದ ೧೬೦೦ರ ವರೆಗೂ ದರ ನಿಗದಿ ಮಾಡಲಾಗಿದೆ. ಸುಪ್ರಿತ್ ಜ್ಯೋತಿ ಎನ್ನುವ ಬಿತ್ತನೆ ಬೀಜ ತುಂಬ ಪ್ರಸಿದ್ಧವಾದ ಬ್ರಾಂಡ್ ಆಗಿದ್ದು, ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಬಿತ್ತನೆ ಬೀಜ ಪಡೆದುಕೊಂಡ ಮೇಲೆ ೧೫ ದಿನಗಳ ಕಾಲ ಒಣಗಲು ಬಿಡಬೇಕು. ನೀರಿನ ಅಂಶ ಹಾವೆ ಆದ ಮೇಲೆ ಚೆನ್ನಾಗಿ ಒಣಗಿದ ಮೇಲೆ ಬಿತ್ತನೆಗೆ ಸಿದ್ಧವಾಗಿರುತ್ತದೆ. ನಿಯಮಾನುಸಾರವಾಗಿ ಪಾಲಿಸಿ ಒಳ್ಳೆ ಬೆಳೆ ಪಡೆದುಕೊಳ್ಳಿ ಎಂದರು. ಈ ಬಾರಿ ಮುಂಗಾರು ಒಳ್ಳೆ ಮಳೆ ಆಗುತ್ತದೆ. ರೈತರು, ವ್ಯಾಪಾರಸ್ತರು ಎಲ್ಲಾರು ಒಳ್ಳೆ ಶುಭ ಸೂಚನೆಯಾಗಿ ಈಗಾಗಲೇ ಶ್ರೀ ಗಣಪತಿಯನ್ನು ಪ್ರಾರ್ಥನೆ ಮಾಡಲಾಗಿದ್ದು, ಒಳ್ಳೆ ಬೆಳೆ ಬಂದು ಉತ್ತಮ ಆಲೂಗೆಡ್ಡೆ ಬೆಳೆಯಿರಿ ಎಂದು ಶುಭ ಹಾರೈಸಿದರು.

ಈಗಾಗಲೇ ಮೂರು ಲಕ್ಷ ಚೀಲ ಬಂದಿದ್ದು, ಎಲ್ಲಾ ಕಡೆ ಸರಬರಾಜು ಆಗಿದೆ. ಬಿತ್ತನೆ ಬೀಜಕ್ಕೆ ಯಾವ ರೀತಿ ತೊಂದರೆ ಇರುವುದಿಲ್ಲ. ಯಾರಾದರೂ ಬಿತ್ತನೆ ಆಲೂಗೆಡ್ಡೆಗೆ ಹೆಚ್ಚಿನ ಧರ ವಿಧಿಸಿದರೇ ಗಮನಕ್ಕೆ ತರಬೇಕು. ಆಲೂಗೆಡ್ಡೆ ಬೆಳೆಯುವ ವಿಧಾನದ ಬಗ್ಗೆ ಇಲಾಖೆಯಿಂದ ರೈತರಿಗೆ ಮಾಹಿತಿಯನ್ನು ಕೊಡಲಾಗುತ್ತಿದೆ ಎಂದು ಹೇಳಿದರು. ಇದೆ ವೇಳೆ ಪಟೋಟ ಸಂಘದ ಅಧ್ಯಕ್ಷ ಗೋಪಾಲ್, ಕೃಷಿ ಇಲಾಖೆ ಅಧಿಕಾರಿ ಮಂಗಳಾ, ದೇವರಾಜು, ತಹಸೀಲ್ದಾರ್ ಹಾಗೂ ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.