ವೈಯಕ್ತಿಕ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಳ್ಳದಿರಿ

KannadaprabhaNewsNetwork |  
Published : Jun 12, 2024, 12:32 AM IST
ಮೊಬೈಲ್ ಟ್ರ್ಯಾಕ್ ಗೆ ಒಳಗಾಗಬಾರದು | Kannada Prabha

ಸಾರಾಂಶ

ಮೊಬೈಲ್ ಟ್ರ್ಯಾಕ್ ಮಾಡುತ್ತಾ ನಮ್ಮೆಲ್ಲಾ ವ್ಯವಹಾರ, ಆಗು ಹೋಗು, ನಾವು ಮೊಬೈಲ್ ಬಳಸುವ ರೀತಿ ನೀತಿಗಳನ್ನು ಅರಿಯುತ್ತಾರೆ.

ಕನ್ನಡಪ್ರಭ ವಾರ್ತೆ ತುಮಕೂರುಮೊಬೈಲ್ ಟ್ರ್ಯಾಕ್ ಮಾಡುತ್ತಾ ನಮ್ಮೆಲ್ಲಾ ವ್ಯವಹಾರ, ಆಗು ಹೋಗು, ನಾವು ಮೊಬೈಲ್ ಬಳಸುವ ರೀತಿ ನೀತಿಗಳನ್ನು ಅರಿಯುತ್ತಾರೆ. ನಮ್ಮನ್ನು ಅತಿಯಾಸೆಗೆ ಒಳಪಡಿಸುತ್ತಾ ಮೋಸ ಮಾಡಿ ನಮ್ಮಲ್ಲಿನ ಹಣವನ್ನು ದೋಚುವ ಒಂದು ವ್ಯವಸ್ಥೆ ಇದೆ ಎಂದು ವಯಾ ವಿಕಾಸ್ ಸಂಸ್ಥೆ ಶಂಕರ್‌ರಂಗನಾಥನ್ ತಿಳಿಸಿದರು. ನಗರದ ನಿವೃತ್ತರ ಸಂಘದಲ್ಲಿ ಏರ್ಪಡಿಸಿದ್ದ `ಡಿಜಿಟಲ್ ಲಿಟರಸಿ’ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯ ನಾಗರಿಕರಿಗೆ ಮೊಬೈಲ್ ಮೂಲಕ ನಡೆಸುವ ಎಲ್ಲಾ ವ್ಯವಹಾರದ ಅರಿವು ಕಡಿಮೆ ಇರುವುದರಿಂದ ತುಂಬಾ ಎಚ್ಚರವಹಿಸಬೇಕು. ಇಂದು ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲೆಡೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬಾರದು. ಕೆಲವು ಮೆಸೇಜ್ ಫೋನ್‌ಕಾಲ್‌ಗಳಿಗೆ ಸ್ಪಂದಿಸಬಾರದು, ತಕ್ಷಣ ಉತ್ತರಿಸದೇ ಪ್ರಮಾಣಿಸಿಕೊಳ್ಳಬೇಕು ಎಂದರು.ಕರ್ನಾಟಕ ಛಾಪ್ಟರ್‌ನ ಅಡ್ವೈಸರ್ ಶ್ರೀನಿವಾಸ್ ಮಾತನಾಡಿ, ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಸರಾಸರಿ ಆಯಸ್ಸಿನ ಪ್ರಮಾಣ 63 ರಿಂದ 78 ವರ್ಷಕ್ಕೆ ಏರಿರುವುದರಿಂದ ಇಂದು ಶೇ.14 ಹಿರಿಯರಿದ್ದಾರೆ. ಆದರೆ ಅವರ ಬಗ್ಗೆ, ಅವರ ಹಿತಾಸಕ್ತಿ ಕಲ್ಯಾಣದ ಬಗ್ಗೆ ಯಾರೂ ಎಲ್ಲಿಯೂ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.ಮನೆಯವರನ್ನು ಮಕ್ಕಳೇ ಮೂಲೆಗುಂಪು ಮಾಡುತ್ತಿದ್ದಾರೆ. ಆದ್ದರಿಂದ ಅಂತಹವರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟಿಸಿ 4-5 ರೀತಿಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಇದುವರೆಗೂ 65 ಸಾವಿರ ಸದಸ್ಯರನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇವರು ಮಾನಸಿಕ ದೂಷಣೆ, ದೈಹಿಕ ದೂಷಣೆ, ಆರ್ಥಿಕ ದೂಷಣೆಗಳಿಗೆ ಒಳಗಾಗುವುದು ಹೆಚ್ಚು. ಇಂತಹವರಿಗೆ ಕಾನೂನು ನಿರ್ವಹಣೆ, ಲೀಗಲ್ ಸರ್ವೀಸ್ ನೀಡುವುದು ಮುಖ್ಯವಾದ ಕೆಲಸ. ಹಾಗೂ ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ದೊರಕುವಂತೆ ಮಾಡುವುದು ಸೇರಿದೆ. ಆದ್ದರಿಂದ ಹೆಚ್ಚು ಜನ ಸದಸ್ಯತ್ವ ಹೊಂದಿದರೆ (ಉಚಿತ) ಸರ್ಕಾರದೊಂದಿಗೆ ಒತ್ತಡ ಹಾಕಿ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಗಿಡಕ್ಕೆ ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಮಂಜುಳಾದೇವಿ, ಭವಾನಮ್ಮ, ಲೀಲಾವತಿ ಮೊದಲಾದವರು ಪರಿಸರ ಗೀತೆ ಹಾಡಿದರು. ಉಪಾಧ್ಯಕ್ಷ ಅನಂತರಾಮಯ್ಯ, ಕುಣಿಗಲ್ ತಾಲೂಕು ಸಂಘದ ಅಧ್ಯಕ್ಷ ಚನ್ನರಾಯಪ್ಪ, ತುರುವೇಕೆರೆ ಅಧ್ಯಕ್ಷ ಶಿವಯ್ಯ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ವಿಶ್ವೇಶ್ವರಯ್ಯ ಪರಿಸರ ಉಳಿಸುವ ಅವಶ್ಯಕತೆ ಕುರಿತು ಮಾತನಾಡಿದರು.

ಬಾ.ಹ. ರಮಾಕುಮಾರಿ, ನಿವೃತ್ತ ಶಿಕ್ಷಕಿ ಲೀಲಾವತಿ, ಸಂಘದ ಪ್ರಧಾನ ಕಾರ್ಯದರ್ಶಿ, ನಿವೃತ್ತ ತಹಸೀಲ್ದಾರ್ ಪುಟ್ಟನರಸಯ್ಯ, ರಾಜ್ಯದ ಸಂಘಟನಾ ಕಾರ್ಯದರ್ಶಿ, ರಾಜ್ಯದ ವಿವಿಧ ತಾಲೂಕುಗಳ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿ, ಸಂಘದ ಖಜಾಂಚಿ ನರಸಿಂಹರೆಡ್ಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ