ಅನ್ನ, ಅಕ್ಷರ, ನೀರು, ಜಾತಿಯ ವಿಷದ ಬೀಜಗಳನ್ನು ಬಿತ್ತಬೇಡಿ

KannadaprabhaNewsNetwork |  
Published : Apr 28, 2026, 01:15 AM IST
ಅನ್ನ. ಶಿಕ್ಷಣ, ನೀರಿನ ವಿಷಯಕ್ಕೆ ಜಾತಿಯ ವಿ? ಬೀಜವನ್ನು ಮಕ್ಕಳಿಗೆ ಬಿತ್ತಬೇಡಿ | Kannada Prabha

ಸಾರಾಂಶ

ಅನ್ನ. ಶಿಕ್ಷಣ ಮತ್ತು ನೀರಿನ ವಿಚಾರದಲ್ಲಿ, ಜಾತಿಯ ವಿಷ ಬೀಜವನ್ನು ಮಕ್ಕಳಿಗೆ ಬಿತ್ತುವ ಕೆಲಸವನ್ನು ಯಾರು ಕೂಡ ಮಾಡಬಾರದು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಅನ್ನ. ಶಿಕ್ಷಣ ಮತ್ತು ನೀರಿನ ವಿಚಾರದಲ್ಲಿ, ಜಾತಿಯ ವಿಷ ಬೀಜವನ್ನು ಮಕ್ಕಳಿಗೆ ಬಿತ್ತುವ ಕೆಲಸವನ್ನು ಯಾರು ಕೂಡ ಮಾಡಬಾರದು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮನವಿ ಮಾಡಿದರು.

ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿನ ೫ ನೇ ಸಂಸ್ಕಾರ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಈ ದೇಶವನ್ನ ಮುನ್ನಡೆಸುವ ಮಕ್ಕಳಲ್ಲಿ ಜಾತಿಯ ವಿಷ ಬೀಜವನ್ನ ಬಿತ್ತದೆ ನಾಡಿಗೆ ಮತ್ತು ಸಮಾಜಕ್ಕೆ ಉತ್ತಮ ಸತ್ಪ್ರಜೆಗಳನ್ನು ನೀಡುವಂತಹ ಕೆಲಸವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಮಾಡಬೇಕಿದೆ. ಇಂದು ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳು ಮದ್ಯವ್ಯಸಕ್ಕೆ ದಾಸರಾಗಿರುವ ವಿಚಾರವನ್ನು ಕೇಳಿದರೆ ಆತಂಕವಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರದ ಕೊರತೆಯೇ ಇದಕ್ಕೆ ಕಾರಣ. ಇದಕ್ಕಾಗಿ ಮಠವು ಸಂಸ್ಕಾರ ಶಿಬಿರ ಆಯೋಜಿಸುತ್ತಿದೆ ಎಂದರು.ಮಠಕ್ಕೆ ಭಕ್ತರೇ ಶಕ್ತಿ, ನಾನು ಭಕ್ತರಿರುವರಿಗೆ ಎಂದೂ ಹೆದರುವುದಲ್ಲ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ದಾಸರ ನುಡಿಯಂತೆ ಮಠ ಸಮಾಜ ಕಾರ್ಯಗಳನ್ನು ಮಾಡುವ ಮೂಲಕ ಸರ್ವಜನಾಂಗದ ಶಾಂತಿಯ ತೋಟವಾಗಿರಲಿದ ಎಂದರು. ಬೆಂಗಳೂರಿನ ಗಾಂಧಿ ಭವನದ ಅಧ್ಯಕ್ಷ ನಾಡೋಜ ಡಾ. ವುಡೆ ಪಿ ಕೃಷ್ಣ ಮಾತನಾಡಿ, ಪುಸ್ತಕ ಶಿಕ್ಷಣದಿಂದ ಏನೂ ಸಾಧ್ಯವಿಲ್ಲ ಸಂಸ್ಕಾರಯುತ ಶಿಕ್ಷಣ ಕಲಿಯಬೇಕು, ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಮಕ್ಕಳ ಜಾತ್ಯಾತೀತ, ನೀತಿ ಶಿಕ್ಷಣ ಮತ್ತು ಆದ್ಯಾತ್ಮಿಕ ಶಿಕ್ಷವನ್ನು ಪಠ್ಯದೊಳಗೆ ಸೇರಿಸುವಂತಹ ವ್ಯವಸ್ಥೆಯಾಗಬೇಕು ಎಂದು ಸಲಹೆ ನೀಡಿದರು.ಹಿರಿಯ ಸಾಹಿತಿ ಡಾ.ಮೀರಸಾಬಹಳ್ಳಿ ಶಿವಣ್ಣ ಮಾತನಾಡಿ, ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗಿ ಎಲ್ಲರು ವಿಭಕ್ತ ಕುಟುಬಂಗಳಾಗಿವೆ, ಕಥೆ ಹೇಳುವ ಅಜ್ಜಿಯರು ಇಲ್ಲ,ನಮ್ಮ ಪೂರ್ವಿಕರು ಹೇಳುವ ಕಥೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುವ ಶಕ್ತಿಯಿದೆ. ಮಕ್ಕಳು ಇಂದು ಮೊಬೈಲ್ ಗಳಿಗೆ ದಾಸರಾಗಿದ್ದು ಹಲವು, ಇಲ್ಲಿ ಸೆಲ್ಪಿ ಮತ್ತು ಸಮಾಜಿಕ ಜಾಲತಾಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು , ಮಕ್ಕಳು ಮೊಬೈಲ್ ನಿಂದ ದೂರವಿರುವಂತಹ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕುಮಾರಸ್ವಾಮಿ, ಕೌಶಲ್ಯಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮುರುಳಿಧರ್ ಹಾಲಪ್ಪ, ಸಂಸ್ಕೃತ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಸಿ ನಂಜುಂಡಯ್ಯ, ವಿದ್ವಾನ್ ಗಣೇಶ್, ವಿದ್ವಾನ್ ಕುಮಾರಸ್ವಾಮಿ, ಮುಖಂಡರಾದ ಹೇಮಂತ್, ಪ್ರೊ. ದೊಡ್ಡರಂಗೇಗೌಡ, ಬಸಪ್ಪ,ಹೊಸಕೆರೆ ರಾಜಪ್ಪ ಸೇರಿದಂತೆ ಇತರರು ಇದ್ದರು.

ಕೋಟ್‌..

ಮಕ್ಕಳಲ್ಲಿ ಬಾಲ್ಯದಿಂದಲೇ ಸಂಸ್ಕಾರ ಬೆಳೆಸಿದಲ್ಲಿ ಮಕ್ಕಳು ಹಣಕ್ಕಾಗಿ ಪೋಷಕರನ್ನು ತೊರೆದು ಹೋಗುವ ಸಂಗತಿಗಳು ಕಡಿಮೆಯಾಗುತ್ತವೆ. ಕೇವಲ ಶಿಕ್ಷಣ ನೀಡಿದರೆ ಸಾಲದು ಸಂಸ್ಕಾರ ಹಾಗೂ ಮಾನವೀಯ ಸಂಬಂಧಗಳ ಕುರಿತು ಮಕ್ಕಳಿಗೆ ತಿಳಿಸಬೇಕಿದೆ.

- ಡಾ.ಹನುಮಂತನಾಥ ಸ್ವಾಮೀಜಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕೆಗೆ ಭೂಮಿ: ಅಧಿಕಾರಿಗಳಿಂದ ಸುಳ್ಳು ವರದಿ
ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಶಾಸ್ತಿ