ಸಮಾಜ ಮೆಚ್ಚುವ ಕೆಲಸ ಮಾಡಿ: ಸ್ಪಟಿಕಪುರಿ ಸ್ವಾಮೀಜಿ

KannadaprabhaNewsNetwork |  
Published : Sep 25, 2024, 12:48 AM IST
23ಶಿರಾ1: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಸೋಮವಾರ ನಡೆದ ಪೌರ್ಣಮಿ ದೀಪೂತ್ಸವ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿ ಭಕ್ತರಿಗೆ ಉಪನ್ಯಾಸ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಶಿರಾ: ನಾವು ನಮ್ಮ ಬದುಕನ್ನು ನಮ್ಮ ನಂತರದಲ್ಲಿಯೂ ಕೂಡ ಸಮಾಜ ಒಳ್ಳೆಯ ರೀತಿ ಸ್ಮರಿಸುವಂತಹ ಕೆಲಸಗಳನ್ನು ಮಾಡಬೇಕು. ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಮೌಲ್ಯಯುತ ಜೀವನವನ್ನು ಕಟ್ಟಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿ ಯಾಗಿ ಬದುಕಿದಾಗ ಮನುಷ್ಯನ ಜೀವನ ಸಾರ್ಥಕತೆ ಕಾಣಲಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಶಿರಾ: ನಾವು ನಮ್ಮ ಬದುಕನ್ನು ನಮ್ಮ ನಂತರದಲ್ಲಿಯೂ ಕೂಡ ಸಮಾಜ ಒಳ್ಳೆಯ ರೀತಿ ಸ್ಮರಿಸುವಂತಹ ಕೆಲಸಗಳನ್ನು ಮಾಡಬೇಕು. ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಸಿ ಗೌರವಿಸುವ ಮೌಲ್ಯಯುತ ಜೀವನವನ್ನು ಕಟ್ಟಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿ ಯಾಗಿ ಬದುಕಿದಾಗ ಮನುಷ್ಯನ ಜೀವನ ಸಾರ್ಥಕತೆ ಕಾಣಲಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಸೋಮವಾರ ನಡೆದ ದೀಪೋತ್ಸವ ಹಾಗೂ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಒಳ್ಳೆಯ ಯೋಚನೆ, ಒಳ್ಳೆಯ ಕೆಲಸ ಮನುಷ್ಯನ ಜೀವನದಲ್ಲಿ ಅತಿ ಮುಖ್ಯ. ನಮ್ಮ ಜೀವನದ ಕರ್ಮಗಳ ಬಗ್ಗೆ ಸದಾ ಜಾಗೃತಿಯಿಂದ ಇರಬೇಕು. ನಾವು ಮಾಡುವ ಸಮಾಜ ಮುಖಿ ಕೆಲಸದಲ್ಲಿ ಸ್ವರ್ಗ ಕಾಣಬಹುದು. ಪೂರ್ಣಚಂದ್ರನ ಬೆಳಕಿನಂತೆ ನಾಡಿನ ಎಲ್ಲಾ ಜನರ ಕಷ್ಟ ಕಾರ್ಪಣ್ಯಗಳು ದೂರವಾಗಿ ಜೀವನದಲ್ಲಿ ಬೆಳಕು ಮೂಡಲಿ ಎಂದರು.ಈ ಸಂದರ್ಭದಲ್ಲಿ ಶ್ರೀ ಮಠದ ತಮ್ಮಣ್ಣ, ನಿರಂಜನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಕ್ತರು ಸತ್ಸಂಗ ಕಾರ್ಯಕ್ರಮದಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!