ಬಡವರ ಕೆಲಸ ಜವಾಬ್ದಾರಿಯುತವಾಗಿ ಮಾಡಿ

KannadaprabhaNewsNetwork |  
Published : May 17, 2026, 01:30 AM IST
ಸುದ್ದಿಗೋಷ್ಢಿ | Kannada Prabha

ಸಾರಾಂಶ

94 ಸಿ ಮತ್ತು 94 ಸಿ.ಸಿ.ಗೆ ಸಂಬಂಧಿಸಿದ ಅರ್ಜಿ ಗಳ ವಿಲೇವಾರಿಗೆ ಆದ್ಯತೆ ಮೇಲೆ ಜಂಟಿ ಸರ್ವೆ ಮಾಡಿ ಜನರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಆಗಿದೆ ಆರ್‌.ಆರ್‌.ಟಿ. ಪ್ರಕರಣಗಳು ಸ್ವೀಕಾರ ಆಗುತ್ತಿರುವ ಅರ್ಜಿಗಳನ್ನು ನೋಡಿದರೆ ಇನ್ನೂ ಸಮಸ್ಯೆಗಳು ಬಗೆಹರಿಯದೆ ಇದರ ಆಳ ಅಗಲ ಎಷ್ಟಿದೆ ಎಂದು ತಿಳಿಯಬೇಕಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜನಸ್ಪಂದನಾ ಕಾರ್ಯಕ್ರಮವನ್ನೇ ಕಾಯದೇ ಬಡವರ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡುವ ಮೂಲಕ ಜನರಿಗೆ ಸವಲತ್ತುಗಳನ್ನು ದೊರಕಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ 4538 ಅರ್ಜಿಗಳಲ್ಲಿ 4444 ಅರ್ಜಿಗಳು ವಿಲೇವಾರಿಯಾಗಿದ್ದು, ಇದರಲ್ಲಿ ಕೆಲವು ಅರ್ಜಿ ಸಮರ್ಪಕವಾಗಿ ವಿಲೇವಾರಿಯಾಗಿಲ್ಲ ಎಂದರು. 94 ಸಿ ಮತ್ತು 94 ಸಿ.ಸಿ.ಗೆ ಸಂಬಂಧಿಸಿದ ಅರ್ಜಿ ಗಳ ವಿಲೇವಾರಿಗೆ ಆದ್ಯತೆ ಮೇಲೆ ಜಂಟಿ ಸರ್ವೆ ಮಾಡಿ ಜನರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನಸ್ಪಂದನ ಕಾರ್ಯಕ್ರಮ ನಡೆಸುವುದರಿಂದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿ ಆಗಿದೆ ಆರ್‌.ಆರ್‌.ಟಿ. ಪ್ರಕರಣಗಳು ಸ್ವೀಕಾರ ಆಗುತ್ತಿರುವ ಅರ್ಜಿಗಳನ್ನು ನೋಡಿದರೆ ಇನ್ನೂ ಸಮಸ್ಯೆಗಳು ಬಗೆಹರಿಯದೆ ಇದರ ಆಳ ಅಗಲ ಎಷ್ಟಿದೆ ಎಂದು ತಿಳಿಯಬೇಕಿದೆ ಎಂದು ತಿಳಿಸಿದರು.ಜನ ಸ್ಪಂದನ ಕಾರ್ಯಕ್ರಮಕ್ಕೆ ಪದೆ ಪದೇ ಒಂದೇ ವಿಷಯಕ್ಕೆ ಸಂಬಂಧಿಸಿದಂತಾ ಅರ್ಜಿಗಳು ಬರುತ್ತಿವೆ. ನೀವು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಕಾಟಾಚಾರಕ್ಕೆ ವಿಲೇ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಕಾಶೆಯಲ್ಲಿ ರಸ್ತೆ ಇರುವ ಜಮೀನಿಗೆ ಬಿತ್ತನೆ ಬೀಜ,ರಸಗೊಬ್ಬರ ತೆಗೆದುಕೊಂಡು ಹೋಗಲು ಹಾಗೂ ಬೆಳೆ ಕಟಾವು ಮಾಡಿ ತೆಗೆದು ಕೊಂಡು ಹೋಗಲು ಅವಕಾಶ ಕಲ್ಪಿಸಲು ತಹಸೀಲ್ದಾರ್ ಅವರಿಗೆ ಅಧಿಕಾರ ಇದೆ ಎಂದು ತಿಳಿಸಿದರು.

ಆರ್‌.ಆರ್‌.ಟಿ. ಸಂಬಂದಿಸಿದ ಅರ್ಜಿಗಳನ್ನು ಜನರೆ ನೇರವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಈ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಕೆಲಸ ತಂತಾನೇ ಆಗಬೇಕು ಅವರು ಕಚೇರಿಗೆ ಅಲೆಯುವಂತಾಗ ಬಾರದು ಈ ನಿಟ್ಟಿನಲ್ಲಿ ಅಧಿಕಾರಿಗಳು ಅರ್ಥೈಸಿಕೊಂಡು ಜವಾಬ್ದಾರಿಯಿಂದ ನಿಮ್ಮ ಹಂತದಲ್ಲಿಯೇ ಪರಿಹಾರ ಮಾಡಬೇಕು ಎಂದು ಹೇಳಿದರು.

ದರಖಾಸ್ತು ಪೋಡಿಗೆ ಗರಿಷ್ಟ 5 ದಾಖಲೆಗಳು ಇರಬೇಕು, 24 ಪ್ರಕರಣಗಳಲ್ಲಿ ಅಳತೆ ಕಾರ್ಯವಾಗಿದೆ, 30 ಸಾವಿರ ಪ್ರಕರಣಗಳು ಪ್ರಕಿಯೆಯಲ್ಲಿವೆ ಅದರಲ್ಲಿ ಮಿಸ್ಸಿಂಗ್ ಪ್ರಕರಣಗಳು ಹೆಚ್ಚು ಇದ್ದು, ಅಂತಹ ಪ್ರಕರಣಗಳನ್ನು ಮಿಸ್ಸಿಂಗ್ ಕಮಿಟಿಯಲ್ಲಿ ಇಟ್ಟು ದುರಸ್ತಿ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. 25 ಸಾವಿರ ಪ್ರಕರಣಗಳಲ್ಲಿ 3 ದಾಖಲೆಗಳು ಇಲ್ಲ, 7 ರಿಂದ 8 ಸಾವಿರ ಪ್ರಕರಣಗಳಲ್ಲಿ 2 ದಾಖಲೆಗಳಿವೆ, 9-10 ಸಾವಿರ ಪ್ರಕರಣಗಳಲ್ಲಿ ಒಂದೇ ಒಂದು ದಾಖಲೆ ಇರುವುದು ಕಂಡು ಬಂದಿದೆ ಹಂತ ಹಂತವಾಗಿ ಪೋಡಿ ದುರಸ್ತಿ ಮಾಡಲಾಗುವುದು 50ಕ್ಕೂ ಸಾವಿರ ಹೆಚ್ಚು ಕುಟುಂಬದ ಪೋಡಿ ದುರಸ್ತಿ ಕಾರ್ಯವನ್ನು ಈ ವರ್ಷದಲ್ಲೇ ಪೂರ್ಣ ಗೊಳಿಸಲಾಗುವುದು, ಈಗಾಗಲೇ 24 ಸಾವಿರ ಪೋಡಿಯಾಗಿದೆ ಎಂದು ತಿಳಿಸಿದರು. ಪುರಸಭೆಗಳ ವ್ಯಾಪ್ತಿಯಲ್ಲಿ ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ಓಡಾಡಲು ಜಾಗವಿರಬೇಕು ಪುರಸಭೆಯ ಮುಖ್ಯಾಧಿಕಾರಿ ಕ್ರಮ ವಹಿಸಲು ಸೂಚನೆ ನೀಡಿದರು

ಗೋಮಾಳ, ಕೆರೆ, ಸ್ಮಶಾನ ಒತ್ತುವರಿಯನ್ನು ತೆರವು ಗೊಳಿಸಲು ಪಂಚಾಯತ್ ರಾಜ್ ನಿಂದ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರುಬಿತ್ತನೆಗೆ ಗುಣಮಟ್ಟದ ಮೆಕ್ಕೆಜೋಳ, ಆಲೂಗಡ್ಡೆ ಮತ್ತು ಅಗತ್ಯ ಔಷಧಿಗಳನ್ನು ಕೃಷಿಕರಿ ಗೆ ನಿಗಧಿತ ಸಮಯದಲ್ಲಿ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರ ಲ್ಲದೆ, ರೋಗ ಬರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಿ ನಿರಂತರವಾಗಿ ಮಾನಿಟರಿಂಗ್ ಮಾಡಲು ನಿರ್ದೇಶನ ನೀಡಿದರು.

ಹಾಸನ- ಪಿರಿಯಾಪಟ್ಟಣ ರಸ್ತೆ 10 ರಿಂದ 15 ಕಡೆ ಎರಡು ಕಿಲೋಮೀಟರ್ ಅಂತರದಲ್ಲಿ ಕಿತ್ತು ಹೋಗಿದೆ ಗುಣಮಟ್ಟ ಸರಿಯಾಗಿದ್ದರೆ ಕಿತ್ತು ಹೋಗಲು ಹೇಗೆ ಸಾಧ್ಯ, ಉಳಿದಿರುವ ರಸ್ತೆ ಕಾಮಗಾರಿಯ ಗುಣಮಟ್ಟ ಸರಿಯಾಗಿದೆ ಎಂದು ಪಾಸ್ ಆಗಿರುವುದು ಹೇಗೆ ಸಾಧ್ಯ ಎಂದು ಕೆ.ಆರ್.ಡಿ.ಸಿ.ಎಲ್. ಅಧಿಕಾರಿಯನ್ನು, ಕಿತ್ತುಕೊಂಡು ಹೋಗುತ್ತಿದ್ದರು ಸಹ ಕೆಲಸ ಮುಂದುವರೆಯುತ್ತಿದೆ ನಿಮ್ಮ ಜವಾಬ್ದಾರಿ ಏನ್ ಎಂದು ಸಚಿವರ ಪ್ರಶ್ನಿಸಿದರು.

ಜನರು ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಖಾತೆ ನೀಡಬೇಕು ಎಂದ ಅವರು ಮನೆ ಕಟ್ಟಲು ಪರವಾನಗಿ ತೆಗೆದುಕೊಳ್ಳಲು ಜನರಿಗೆ ಮಾಹಿತಿ ತಲುಪಿಸಲು ನಿಗಾವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮನೆ ಕಟ್ಟಲು ಪರವಾನಿಗೆ ನೀಡುವ ನಿಟ್ಟಿನಲ್ಲಿ ನರೇಗಾ ಎಂಜಿನಿಯರ್ಸ್‌ ಮೂಲಕ ಆನ್‌ಲೈನ್‌ನಲ್ಲಿ ಮನೆ ನಕ್ಷೆಯನ್ನು ಅಪ್ಲೋಡ್ ಮಾಡಲು ಕ್ರಮವಹಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ. ಇ-ಸ್ವತ್ತು ಮಾಡಲು ಕೂಡ ಒಂದು ಡ್ರೈವ್ ಮಾಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಒಪ್ಪಿಗೆ ನೀಡಿರುವ 77 ಶಾಲೆಗಳು ಕೆ.ಪಿ ಎಸ್ ಶಾಲೆಗಳನ್ನು ತೆರೆಯಲು ಸ್ಥಳೀಯ ಶಾಸಕರುಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸಿ, ಗ್ರಾಮಗಳಿಂದ ಮಕ್ಕಳನ್ನು ಕೆ.ಪಿ.ಎಸ್ ಶಾಲೆಗೆ ಕರೆತರಲು ಸ್ಥಳೀಯವಾಗಿ ಲಭ್ಯವಿರುವ ವಾಹನಗಳನ್ನು ಬಳಸಿಕೊಂಡು ಸಾರಿಗೆ ವ್ಯವಸ್ಥೆಗೆ ಕ್ರಮವಹಿಸಲು ಸೂಚಿಸಿದರು.

ಸಂಸದರಾದ ಶ್ರೇಯಸ್ ಎಂ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಶುಕ್ಲ,ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ ಕುಮಾರ್‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಸೇವೆ ಮೂಲಕ ಹೃದಯದಲ್ಲಿ ನೆಲೆಸಿದ ಸುಧಾಕರ್‌
ಚಿಗಟೇರಿ ಆಸ್ಪತ್ರೆಗೆ ಸಂಸದೆ ದಿಢೀರ್ ಭೇಟಿ