ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಭೀಮರಾಯನ ಗುಡಿಯಲ್ಲಿ 2ನೇ ಬಾರಿಗೆ ನಗರ ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ವಸಂತಕುಮಾರ ಸುರಪುರಕರ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ, ಸನ್ಮಾನಿಸಿ ಮಾತನಾಡಿದರು.
ವಸಂತಕುಮಾರ ಸಚಿವರ ಕೆಲವೇ ಕೆಲವು ಪರಮಾಪ್ತರಲ್ಲಿ ಒಬ್ಬರು. ಈ ಮೊದಲ ಬಾರಿಗೆ ನ.30 2020 ರಂದು ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾಗ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು. ಅದರಂತೆ ಈಗ ಎರಡನೇ ಬಾರಿಯೂ ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.ಮರಿಗೌಡ ಹುಲ್ಕಲ್, ಶಿವಮಾಂತಪ್ಪ ಸಾಹು, ಬಸವರಾಜಪ್ಪಗೌಡ ತಂಗಡಗಿ, ವೆಂಕಟೇಶ ಆಲೂರು, ವಿಜಯಕುಮಾರ, ಶಾಂತಪ್ಪ ಕಟ್ಟಿಮನಿ, ರಾಮಣ್ಣ ಸಾದ್ಯಾಪುರ, ರವಿ ಎದುರು ಮನಿ, ಮಲ್ಲೇಶಿ ಮಮದಾಪುರ, ಮಲ್ಲಣ್ಣ ಗೋಗಿ, ಈರಣ್ಣಗೌಡ ಮಲ್ಲಾಬಾದಿ, ಬಸವರಾಗೇರಾ, ಸೇರಿ ಇತರರಿದ್ದರು.