ಜೋಯಿಡಾ:
ಲೆನ್ಸರ್ ಲೋಬೊ ಜೋಯಿಡಾದ ಇಬ್ರಾಹಿಂ ಎಂಬ ಗೆಳೆಯನೊಂದಿಗೆ ಗೋವಾಕ್ಕೆ ಹೋಗಿ ಬಂದಾಗ ಆರೋಗ್ಯ ಸರಿ ಇರಲಿಲ್ಲ. ತಾವೇ ಸ್ವತಃ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು. ಈ ಸಂದರ್ಭ ಊಟ ಕೂಡ ಮಾಡುತ್ತಿರಲಿಲ್ಲ. ಹೀಗಾಗಿ ಅಸ್ವಸ್ಥರಾಗಿ ಕಾಣುತಿದ್ದರು. ಕಳೆದ ಏ. ೩೦ರಂದು ಚಿಕಿತ್ಸೆಗೆ ಸ್ಪಂದಿಸದೇ ಇದ್ದಾಗ ಅವರು ಸಂಜೆ 6.30ರ ವೇಳೆಗೆ ನಿತ್ರಾಣರಾದರು. ಆಗ ನಾನು ಅವರನ್ನು ಜೋಯಿಡಾ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ಆಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು ಎಂದು ದೂರಿನಲ್ಲಿ ಮೃತರ ಪತ್ನಿ ನಿಖಿತಾ ಲೋಬೋ ತಿಳಿಸಿದ್ದಾರೆ.
ಕುಡಿತ, ಅನಾರೋಗ್ಯ, ವಿಷಾಹಾರ ಸೇವನೆಯೇ ಸಾವಿಗೆ ಕಾರಣವಾಗಿದ್ದು, ವೈದ್ಯರ ಜೊತೆ ಹೋದ ಗೆಳೆಯನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸಿ ಸಾವಿಗೆ ನ್ಯಾಯ ನೀಡುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಜೋಯಿಡಾ ಪಿಎಸ್ಐ ಮಹೇಶ ಮಾಳಿ ಕೈಕೊಂಡಿದ್ದಾರೆ.ಕಾರವಾರ: ತಲೆಮರೆಸಿಕೊಂಡಿದ್ದ ಆರೋಪಿಗೆ 33 ವರ್ಷಗಳ ಬಳಿಕ 5 ವರ್ಷ ಜೈಲು ಶಿಕ್ಷೆಹಳೆಯ ದ್ವೇಷದ ಹಿನ್ನೆಲೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ 1993ರ ಹಳೆಯ ಪ್ರಕರಣದ ಆರೋಪಿಗೆ ಕಾರವಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹7,000 ದಂಡ ವಿಧಿಸಿ ತೀರ್ಪು ನೀಡಿದೆ.ಹಳೆಯ ದ್ವೇಷದ ಹಿನ್ನೆಲೆ ಆರೋಪಿಗಳು ಗುಂಪುಗೂಡಿ ಪ್ರಶಾಂತ್ ಎಂಬ ವ್ಯಕ್ತಿಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು. ಈ ಕುರಿತು 1993ರಲ್ಲಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 149, 504, 302 ಅಡಿ ಪ್ರಕರಣ ದಾಖಲಾಗಿತ್ತು. ಅಂದಿನ ಕದ್ರಾ ವೃತ್ತದ ಸಿಪಿಐ ಆಗಿದ್ದ ಡಿ.ಕೆ. ನಿಕ್ಕಮ್ ಅವರು ಸಮಗ್ರ ತನಿಖೆ ನಡೆಸಿ, ಕಾರವಾರದ ಭಗತವಾಡಾ ಅಸ್ನೋಟಿ ನಿವಾಸಿ ದೀಲಿಪ ಶಾಂತಾ ತಳೇಕರ ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಆರೋಪಿ ದೀಲಿಪ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಪ್ರಕರಣವನ್ನು ಎಲ್.ಪಿ.ಸಿ ಎಂದು ಪರಿಗಣಿಸಲಾಗಿತ್ತು. ತರುವಾಯ, 16-04-2021 ರಂದು ಚಿತ್ತಾಕುಲ ಪಿಎಸ್‌ಐ ಪ್ರವೀಣ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.