ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ನಗರದ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಮಾಜದ ಆರೋಗ್ಯ ಸುಧಾರಿಸುವಲ್ಲಿ ಇಬ್ಬರ ಪಾತ್ರ ಮಹತ್ತರವಾದದ್ದು. ಮುಂದಿನ ಯಶಸ್ವಿ ಜೀವನಕ್ಕೆ ಪ್ರಾಯೋಗಿಕ ಜ್ಞಾನ ಅತಿ ಮುಖ್ಯವಾಗಿದ್ದು, ನಿಮ್ಮ ಸೇವಾವೃತ್ತಿಯಲ್ಲಿ ಕರುಣೆ, ಪ್ರೀತಿ ಹಾಗೂ ಉತ್ತಮ ಸಂವಹರವನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತರಾದರೆ ರೋಗಿಯ ಶೇ.20 ಕಾಯಿಲೆ ವಾಸಿಯಾಗುವುದರ ಜೊತೆಗೆ ಶ್ರೇಷ್ಠ ವ್ಯಕ್ತಿಗಳಾಗುತ್ತೀರಿ ಎಂದರು.ಕಷ್ಟದಿಂದ ಬರುವ ಪ್ರತಿಯೊಬ್ಬ ರೋಗಿ ಹಾಗೂ ಅವರ ಪೋಷಕರನ್ನು ನಗುಮುಖದಿಂದ ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳನ್ನು ನಗುಮುಖದಿಂದ ಮಾತನಾಡಿಸಿದರೆ ಅವರಿಗೆ ಆತ್ಮಸ್ಥೈರ್ಯ ಬರುತ್ತದೆ ಎಂದರು.
ನರ್ಸಿಂಗ್ ಜಗತ್ತಿನ ಶ್ರೇಷ್ಠ ವೃತ್ತಿ. ಜನರೊಂದಿಗೆ ಬೆರೆಯುವ, ನೋವು ನಲಿವುಗಳಿಗೆ ಸ್ಪಂದಿಸುವ ಸೇವಾಮನೋಭಾವನೆಯ ಶ್ರೇಷ್ಠ ವೃತ್ತಿ. ಪ್ರತಿಜ್ಞಾ ವಿಧಿ ಸ್ವೀಕರಿಸಿ ಅಧ್ಯಯನ ಮಾಡುವ ಯಾವುದಾದರೂ ಕೋರ್ಸ್ ಇದ್ದರೆ ಅದು ನರ್ಸಿಂಗ್ ಎಂದರು.
ಸಮಾರಂಭ ಉದ್ಘಾಟಿಸಿದ ನಗರದ ಸಿಮ್ಸ್ ಬೋಧನಾ ಆಸ್ಪತ್ರೆ ಪ್ರಾಂಶುಪಾಲ ಡಾ. ಗಿರೀಶ್ ವಿ. ಪಾಟೀಲ್, ಪ್ರಸ್ತುತದಲ್ಲಿ ಒತ್ತಡದಿಂದ ಶೇ. 10ರಷ್ಟು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ನರ್ಸಿಂಗ್ ಮಾಡುವಾಗ ಒತ್ತಡಕ್ಕೆ ಒಳಗಾಗಬೇಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ಜೆಎಸ್‌ಎಸ್ ವ್ಯದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರಾದ ಆರ್. ಮಹೇಶ್ ಮಾತನಾಡಿ, ಇಲ್ಲಿ ಸಮರ್ಪಣಾ ಮನೋಭಾವನೆ ಅತಿ ಮುಖ್ಯ. ಫ್ಲಾರೆನ್ಸ್ ನೈಟಿಂಗ್‌ಹೇಲ್ ಅವರ ನಿಸ್ವಾರ್ಥ ಸೇವೆ, ಯುದ್ದದ ಸಮಯದಲ್ಲಿ ರಾತ್ರಿ ವೇಳೆ ವಿದ್ಯುತ್ ಇಲ್ಲದಿದ್ದಾಗ ಕ್ಯಾಂಡಲ್ ಹಿಡಿದು ಗಾಯಾಳುಗಳನ್ನು ಶುಶ್ರೂಷೆ ಮಾಡಿದ ಸೇವೆ ನಿಮಗೆ ಸ್ಫೂರ್ತಿಯಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವಿಗೆ ಮತ್ತು ನಿಸ್ವಾರ್ಥ ಸೇವೆ ಮಾಡುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಪ್ರಾಂಶುಪಾಲ ವಿನಯಕುಮಾರ್ ಬೋಧಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಪರೀಕ್ಷೆಯಲ್ಲಿ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಮಂಜುಳಾ ಹಾಗೂ ಫಾತೀಮಾ ಅವರನ್ನು ಸನ್ಮಾನಿಸಲಾಯಿತು ಉಪನ್ಯಾಸಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಿತಾ, ಮಾಧು, ಇತರರು ಇದ್ದರು.