ರಾಜ್ಯ ಸರ್ಕಾರದಿಂದ ಪಂಚಾಯಿತಿ ವ್ಯವಸ್ಥೆ ಹತ್ತಿಕ್ಕುವ ಕುತಂತ್ರ: ಹರಿಪ್ರಕಾಶ ಕೋಣೆಮನೆ

KannadaprabhaNewsNetwork |  
Published : Jul 04, 2025, 11:53 PM IST
ಯಲ್ಲಾಪುರ ತಾಲೂಕಿನ ವಿವಿಧ ಪಂಚಾಯಿತಿಗಳಲ್ಲಿ ರಾಜ್ಯ ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಬಿಜೆಪಿ ಮಂಡಳ ವತಿಯಿಂದ ಇತ್ತೀಚೆಗೆ ಯಲ್ಲಾಪುರ ತಾಲೂಕಿನ ನಂದೊಳ್ಳಿ, ಚಂದಗುಳಿ ಮತ್ತು ಮದನೂರು ಭಾಗದಲ್ಲಿ ಪಂಚಾಯಿತಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಯಲ್ಲಾಪುರ: ಬಿಜೆಪಿ ಮಂಡಳ ವತಿಯಿಂದ ಇತ್ತೀಚೆಗೆ ನಂದೊಳ್ಳಿ, ಚಂದಗುಳಿ ಮತ್ತು ಮದನೂರು ಭಾಗದಲ್ಲಿ ಪಂಚಾಯಿತಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ರಾಜ್ಯ ಸರ್ಕಾರ ದುರಾಡಳಿತ, ಪಂಚಾಯಿತಿ ವ್ಯವಸ್ಥೆ ಹತ್ತಿಕ್ಕುವ ಕುತಂತ್ರ, ಪಂಚಾಯಿತಿ ಸಿಬ್ಬಂದಿ ಕೊರತೆ, ಮನೆ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇವುಗಳ ಕುರಿತು ಸಾರ್ವಜನಿಕರು ಸರ್ಕಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರ ಭಾರತವನ್ನು ಮುಂದಿನ ೧೦೦ ವರ್ಷಕ್ಕೆ ಸಜ್ಜು ಮಾಡುತ್ತಿದ್ದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ೧೦೦ ವರ್ಷ ಹಿಂದಕ್ಕೆ ತಳ್ಳುತ್ತಿದೆ. ಯೋಜನೆಗಳು ಶಾಶ್ವತವಾಗಿ ಜೀವಂತವಾಗಿರಬೇಕೆ ವಿನಃ ಯೋಜನೆಗಳು ಮತ ಗಳಿಕೆಗೆ ಮಾತ್ರ ಸೀಮಿತ ಇರಬಾರದು ಎಂದರು.

ನಂದೊಳ್ಳಿಯ ಪ್ರಮುಖರಾದ ಟಿ.ಆರ್. ಹೆಗಡೆ, ನರಸಿಂಹ ಕೋಣೆಮನೆ, ನಾಗರಾಜ ಕವಡಿಕೇರಿ, ಮಾಧವ ನಾಯ್ಕ ಮಾತನಾಡಿದರು. ಶಕ್ತಿ ಕೇಂದ್ರ ಪ್ರಮುಖರಾದ ಪರಮೇಶ್ವರ ಕೊಂಬೆ, ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ಗಜಾನನ ಹೆಗಡೆ, ದೇವೇಂದ್ರ ನಾಯ್ಕ, ಶ್ರೀಕೃಷ್ಣ ಭಟ್ಟ, ಮಹಾಬಲೇಶ್ವರ ಭಟ್ಟ ಕುಂಟೇಮನೆ, ಪ್ರಭಾ ಭಾಗ್ವತ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಚಂದಗುಳಿ ಪಂಚಾಯಿತಿ ಮುಂಭಾಗದಲ್ಲಿ ಮಂಡಳ ಉಪಾಧ್ಯಕ್ಷ ನಾಗರಾಜ ಕವಡಿಕೇರಿ ಮಾತನಾಡಿ, ಜನಪ್ರತಿನಿಧಿಗಳಿಗೆ ಇವತ್ತು ಬೆಲೆಕೊಡದ ಕಾಂಗ್ರೆಸ್‌ ಸರ್ಕಾರದಿಂದ ಮುಂದಿನ ದಿನಗಳಲ್ಲಿ ರಾಜಕೀಯ ಆರಾಜಕತೆ ಸೃಷ್ಟಿಸಲಿದೆ ಎಂದರು.

ಸುಬ್ಬಣ್ಣ ಉದ್ದಾಬೈಲ, ಅಪ್ಪು ಆಚಾರಿ, ನರಸಿಂಹ ಭಟ್ಟ ಜೂಜನಬೈಲ, ಸುಬ್ರಾಯ ಭಟ್ಟ, ನಾಗಭೂಷಣ ಭಟ್ಟ, ಗೋಪಾಲಕೃಷ್ಣ ಭಟ್ಟ, ಮೋಹನ ಮರಾಠಿ, ಶಾರದಾ ಭಾಗ್ವತ, ಉಮಾ ಹೆಗಡೆ, ರಾಘವೇಂದ್ರ ಭಟ್ಟ ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಮದನೂರು ಪಂಚಾಯಿತಿ: ಪಕ್ಷದ ಪ್ರಮುಖರಾದ ಉಮೇಶ ಭಾಗ್ವತ ಮಾತನಾಡಿ, ಡಾ. ದೀಪಕ ಅವರ ವರ್ಗಾವಣೆ ಆಡಳಿತದ ವೈಫಲ್ಯ. ಪಂಚ ಗ್ಯಾರಂಟಿಯಿಂದ ಬಂದ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ರಾಜ್ಯವನ್ನು ಹಿಂದಕ್ಕೆ ತಳ್ಳುತ್ತಿದೆ ಎಂದರು.

ಮಂಡಳ ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ ಪ್ರತಿಭಟನೆ ಉದ್ದೇಶ ಮತ್ತು ಸಂಘಟನೆ ಮತ್ತು ಪಂಚಾಯಿತಿದಲ್ಲಿರುವ ಲೋಪದೋಷಗಳ ಬಗ್ಗೆ ಮಾತನಾಡಿದರು.

ವಜ್ರಳ್ಳಿ ಶಕ್ತಿ ಕೇಂದ್ರ ಪ್ರಮುಖ ದತ್ತಾತ್ರೇಯ ಭಟ್ಟ, ಪಕ್ಷದ ಪದಾಧಿಕಾರಿಗಳಾದ ವಿಠ್ಠು ಪಾಂಡ್ರಮೀಸೆ, ಮಹೇಶ ದೇಸಾಯಿ, ಪಂಚಾಯಿತಿ ಅಧ್ಯಕ್ಷ ವಿಠ್ಠು ಶೆಲ್ಕೆ, ಪ್ರಕಾಶ ಶಹಾಪುರಕರ, ಪ್ರಭಾ ನಾಯ್ಕ ಬೆಳಕೊಪ್ಪ, ಇಂದಿರಾ ನಾಯ್ಕ, ವಿಜಯಕುಮಾರ, ನವಲು ಜೋರೆ, ರೇಷ್ಮಾ ದೇಸಾಯಿ, ಜನ್ನಾಬಾಯಿ ಬರಾಗಡೆ, ಸುನಂದಾ ವಡ್ಡರ, ಮಂಜುಳಾ ಕಳಸೂರಕರ, ನಿತ್ಯಾನಂದ ಮರಾಠಿ, ವಾಗು ವರಕ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ