ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಮಂಗಳವಾರ ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ ಆ್ಯಂಡ್ ರಿಸರ್ಚ್ (ಕೆಎಲ್ಇ ಡೀಮ್ಡ್ ಯುನಿವರ್ಸಿಟಿ) 15ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಸಂಯೋಜಿತ ಸೌಲಭ್ಯಗಳಿಗಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಅಲೋಪತಿ, ಆಯುರ್ವೇದ, ಹೊಮಿಯೋಪತಿ ಸೇರಿದಂತೆ ಹೊಲಿಸ್ಟಿಕ್ ಮೂಲಕ ರೋಗಗಳನ್ನು ತಡೆಗಟ್ಟುವ ಪ್ರಮುಖ ಘಟದಲ್ಲಿ ನಾವು ನಿಲ್ಲಬೇಕಾಗಿದೆ. ಭಾರತದ ವೈದ್ಯಕೀಯ ವಿಜ್ಞಾನದ ಸಮಗ್ರ ಮನೋಭಾವದ ದೃಷ್ಟಿಯಿಂದ ಯೋಚಿಸುತ್ತ ರೋಗಗಳನ್ನು ತಡೆಗಟ್ಟಬೇಕಿದೆ. ಈಗಾಗಲೇ ಅಲೋಪತಿಯೊಂದಿಗೆ ಆಯುರ್ವೇದ ಪದವಿ ಅಳವಡಿಸಿಕೊಳ್ಳಲು ಯೋಚಿಸಲಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಸ್ಪಂದಿಸಬೇಕು ಎಂದರು.ವೈದ್ಯಕೀಯ ವೃತ್ತಿಪರರು ಆಧುನಿಕ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತ ಅಭಿಯಾಂತ್ರಿಕತೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಇದರಿಂದ ವೈದ್ಯಕೀಯ ನವೋದ್ಯಮಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ವೈದ್ಯಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳು ಉದಯೋನ್ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಕ್ಷೇತ್ರಗಳಾಗಿವೆ. ಕಲಿಕೆ ನಿರಂತರವಾಗಿರಬೇಕು. ನಾನೇ ತಿಳಿದವನು ಎಂದರೆ ಅಂದಿಗೆ ನಿಮ್ಮ ಬೆಳವಣಿಗೆ ನಿಂತಂತೆ. ಆದ್ದರಿಂದ ವಿನಮ್ರರಾಗಿರಿ. ಮುಕ್ತವಾಗಿದ್ದು ಹೊಸ ಆಲೋಚನೆಗಳಿಂದ ಎಲ್ಲರಿಂದಲೂ ಕಲಿಯಲು ಸಿದ್ದರಾಗಿರಿ ಎಂದು ಕರೆ ನೀಡಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ, ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಾರತದಲ್ಲಿ ಈ ಹಿಂದೆ 387 ಮಹಾವಿದ್ಯಾಲಯಗಳಿದ್ದವು. ಆದರೆ ಇಂದು 706 ವೈದ್ಯಕೀಯ ಮಹಾವಿದ್ಯಾಲಗಳಿವೆ. ವೈದ್ಯರ ಕೊರತೆ ಅರಿತ ಪ್ರಧಾನಿ ಮೋದಿ ಅವರು ವೈದ್ಯಕೀಯ ಮಹಾವಿದ್ಯಾಲಯಗಳನ್ನು ಹೆಚ್ಚಿಸುತ್ತ ಜನರ ಆರೋಗ್ಯ ಸುಧಾರಿಸಲು ಗಮನ ಹರಿಸಿದ್ದಾರೆ. ಎಲ್ಲರಿಗೂ ವೈದ್ಯಕೀಯ ಸೇವೆ ಹಾಗೂ ಕೈಗೆಟಕುವ ದರದಲ್ಲಿ ಔಷಧಗಳು ಲಭಿಸಲಿ ಎಂದು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವದಲ್ಲಿಯೇ 18-35 ವರ್ಷದೊಳಗಿನ ಅತೀ ಹೆಚ್ಚು ಅಂದರೆ 60 ಕೋಟಿಗೂ ಅಧಿಕ ಯುವಕರನ್ನು ಹೊಂದಿದ ದೇಶ ಭಾರತ. ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುತ್ತ, ಆರ್ಥಿಕವಾಗಿ ಹಿಂದುಳಿದವರೂ ವೈದ್ಯರಾಗಬಹುದು ಎಂಬುವುದನ್ನು ತೋರಿಸಿಕೊಡಲಾಗಿದೆ. ಅತ್ಯಂತ ಪಾರದರ್ಶಕವಾಗಿ ವೈದ್ಯಕೀಯ ಸೀಟುಗಳನ್ನು ಹಂಚಲಾಗುತ್ತಿದೆ ಎಂದ ಅವರು, ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆಯನ್ನು ಡಾ.ಪ್ರಭಾಕರ ಕೋರೆ ಅವರು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಸಾವಿರ ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
1844 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಇಂದು ದೇಶಾದ್ಯಂತ 1.75 ಲಕ್ಷ ಆಯುಷ್ಮಾನ್ ಆರೋಗ್ಯ ಕೆಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸುತ್ತಿವೆ. ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ 319 ವೈದ್ಯಕೀಯ ಮಹಾವಿದ್ಯಾಲಯಗಳು ಕಾರ್ಯಾರಂಭ ಮಾಡಿದ್ದು ಈಗ 706 ಮಹಾವಿದ್ಯಾಲಯಗಳಿವೆ. ಕಳೆದ 10 ವರ್ಷಗಳಲ್ಲಿ ಎಂಬಿಬಿಎಸ್ ಹಾಗೂ ಸ್ನಾತ್ತಕೋತ್ತರ ಸೀಟ್‌ಗಳಲ್ಲಿ ಶೇ.130ರಷ್ಟು ಹೆಚ್ಚಳವಾಗಿದೆ.
----
ಭಾರತದಲ್ಲಿ ಪ್ರಾರಂಭಿಸಿದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯು ವಿಶ್ವದಲ್ಲಿಯೇ ಅತ್ಯಂತ ಬೃಹತ್ ವಿಮಾ ಯೋಜನೆ. ಕೇವಲ ಭಾರತದಲ್ಲಿ ವೈದ್ಯರ ಮತ್ತು ದಾದಿಯರ ಕೊರತೆ ಇಲ್ಲ. ವಿಶ್ವದಾದ್ಯಂತ ವೈದ್ಯರ ಕೊರತೆ ಇದೆ. ಅದನ್ನು ಭಾರತ ಮಾತ್ರ ನೀಗಿಸಬಲ್ಲದು.