ದಾಸ್ತಾವೇಜು ಬರಹಗಾರರಿಗೆ ಮಧ್ಯವರ್ತಿಗಳಿಂದ ತೊಂದರೆ

KannadaprabhaNewsNetwork |  
Published : Dec 17, 2025, 01:15 AM IST
0 | Kannada Prabha

ಸಾರಾಂಶ

ದಾಸ್ತಾವೇಜು ಬರಹಗಾರರಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯವರ್ತಿಗಳಿಂದ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತುಮಕೂರು ತಾಲೂಕು ಪತ್ರಬರಹಗಾರರ ಸಂಘ, ತುಮಕೂರು ಇವರು ಉಪ ನೋಂದಣಾಧಿಕಾರಿಗಳ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುದಾಸ್ತಾವೇಜು ಬರಹಗಾರರಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯವರ್ತಿಗಳಿಂದ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತುಮಕೂರು ತಾಲೂಕು ಪತ್ರಬರಹಗಾರರ ಸಂಘ, ತುಮಕೂರು ಇವರು ಉಪ ನೋಂದಣಾಧಿಕಾರಿಗಳ ಎದುರು ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದರು. ದಾಸ್ತಾವೇಜು ಬರಹಗಾರರ ಪ್ರಮುಖ ಬೇಡಿಕೆಗಳಾದ ಹೊರ ರಾಜ್ಯದಲ್ಲಿ ಅಂದರೆ ತೆಲಂಗಾಣ ರಾಜ್ಯದಲ್ಲಿ ದಾಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಿರುವಂತೆ ಕರ್ನಾಟಕದಲ್ಲೂ ಪ್ರತ್ಯೇಕ ಲಾಗಿನ್ ನೀಡುವುದು, ಎಲ್ಲಾ ದಸ್ತಾವೇಜು ಬರಹಗಾರರಿಗೆ ಏಕ ಮಾದರಿ ಗುರುತಿನ ಚೀಟಿಯನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಮನವಿ ಮಾಡಿದರು.ದಸ್ತಾವೇಜು ಬರಹಗಾರರಿಗೆ ಸೇವಾ ಭದ್ರತೆ ಒದಗಿಸುವುದು, ರಾಜ್ಯದಲ್ಲಿ ನೋಂದಣಿ ಇಲಾಖೆಯಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಯಾವುದೇ ಕುಂದು ಕೊರತೆ ಬಾರದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯಾದ್ಯಂತ ಸರಿ ಸುಮಾರು 16000 ದಸ್ತಾವೇಜು ಬರಹಗಾರರಿದ್ದು, ಇವರಿಗೆ ಸೇವಾ ಭದ್ರತೆ ಇಲ್ಲದಂತಾಗುತ್ತದ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಕರ್ನಾಟಕ ದಸ್ತಾವೇಜು ಬರಹಗಾರರ ಸೇವಾ ಶುಲ್ಕವನ್ನು ಪರಿಷ್ಕರಣೆ ಮಾಡದೆ ಹಾಗೆಯೇ ಮುಂದುವರೆಸುತ್ತಿದ್ದು, ಅದನ್ನು ಪರಿಷ್ಕರಿಸಿ ಪತ್ರ ಬರಹಗಾರರ ಕಾಯ್ದೆ 1979 ಗೆ ಅಗತ್ಯ ಮಾಹಿತಿಗಳನ್ನು ಸೇರಿಸಿ ತಿದ್ದುಪಡಿ ಮಾಡಬೇಕು, ಕಾವೇರಿ 2.00 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮೂಲಕ ಸಾರ್ವಜನಿಕರು ಸಹ ಅವರ ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಅವರುಗಳೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಸದಾಶವಕಾಶವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಲಿಲ್ಲ.ಬದಲಾಗಿ ಡಿಟಿಪಿ ಸೆಂಟರ್, ಸೈಬರ್‌ಗಳು ದುರುಪಯೋಗಪಡಿಸಿಕೊಂಡು ತಾವುಗಳು ಪತ್ರಗಳನ್ನು ತಯಾರು ಮಾಡಿ ನೋಂದಣಿ ಮಾಡಿಕೊಡುತ್ತೇವೆ ಎಂದು ಬೋರ್ಡ್ ಹಾಕಿಕೊಂಡು ಪತ್ರಗಳನ್ನು ತಯಾರು ಮಾಡಿ ನೋಂದಣಿ ಮಾಡಿಸುತ್ತಿದ್ದು, ಇದರಿಂದ ಸಾರ್ವಜನಿಕರು ಸರಿಯಾದ ದಾಖಲೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆಂಬ 13 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಉಪ ನೋಂದಣಾಧಿಕಾರಿಗಳಿಗೆ ನೀಡಿದರು.ಈ ಸಂದರ್ಭದಲ್ಲಿ ಪತ್ರ ಬರಹಗಾರರ ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಯ್ಯ, ಕಾರ್ಯದರ್ಶಿ ರುದ್ರೇಶ್, ಎಚ್.ಎನ್.ಚಂದ್ರಶೇಖರ್, ಮಂಜುನಾಥ್, ವಿಜಯಕುಮಾರ್, ಪ್ರಸನ್ನ, ವಿಶ್ವಶೇಖರ್, ಪುಟ್ಟರಾಜು, ಪುಟ್ಟಲಿಂಗಯ್ಯ, ಲತ, ಅಶ್ವಿನಿ, ಮೇರಿ, ಸಹರಹರ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ