ಕಟೀಲು ಮೇಳಗಳ ಇತಿಹಾಸ ದಾಖಲೀಕರಣ ಅಗತ್ಯ: ಡಾ. ಕೆ. ಚಿನ್ನಪ್ಪ ಗೌಡ

KannadaprabhaNewsNetwork |  
Published : Nov 14, 2025, 03:45 AM IST
ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ವಿಚಾರಗೋಷ್ಠಿ  | Kannada Prabha

ಸಾರಾಂಶ

ಕಟೀಲು ದೇವಳದ ಕುದ್ರುವಿನಲ್ಲಿ ಕಟೀಲಿನ 7ನೆಯ ಮೇಳದ ಪಾದಾರ್ಪಣೆಯ ಸಲುವಾಗಿ ನಡೆಯುತ್ತಿರುವ ಯಕ್ಷ ಸಪ್ತಾಹದಲ್ಲಿ ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ವಿಚಾರಗೋಷ್ಠಿ ಸಂಪನ್ನಗೊಂಡಿತು.

ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ವಿಚಾರಗೋಷ್ಠಿ ಸಮಾರೋಪ ಸಮಾರಂಭಮೂಲ್ಕಿ: ಸಿರಿ ದಾಖಲಾತಿಯಂತೆ ಕಟೀಲಿನ ಯಕ್ಷಗಾನದ ಪ್ರದರ್ಶನ ಪರಂಪರೆ, ಪರಿವರ್ತನೆ, ಮೇಳಗಳ ಸಂರಚನೆ, ಪ್ರದರ್ಶನ, ಕಲಾವಿದ, ಪ್ರಸಂಗ ಕೇಂದ್ರಿತ ವಿಚಾರಗಳು, ಮೇಳದ ಭೌತಿಕ ವಿಚಾರಗಳು ಧ್ವನಿ ಬೆಳಕಿನ ವಿಚಾರಗಳು ದೇವಾಲಯ ಮತ್ತು ಯಕ್ಷಗಾನ ಹೀಗೆ ಅನೇಕ ವಿಚಾರಗಳನ್ನು ಶೈಕ್ಷಣಿಕವಾಗಿ ದಾಖಲಿಸಲು ಸಾಕಷ್ಟು ಅವಕಾಶಗಳು ಇದ್ದು ಕಟೀಲು ಮೇಳಗಳ ಇತಿಹಾಸ ದಾಖಲೀಕರಣ ಅಗತ್ಯವಾಗಿ ಆಗಬೇಕು ಎಂದು ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ಕಟೀಲು ದೇವಳದ ಕುದ್ರುವಿನಲ್ಲಿ ಕಟೀಲಿನ 7ನೆಯ ಮೇಳದ ಪಾದಾರ್ಪಣೆಯ ಸಲುವಾಗಿ ನಡೆಯುತ್ತಿರುವ ಯಕ್ಷ ಸಪ್ತಾಹದಲ್ಲಿ ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ವಿಚಾರಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಏಳು ಮೇಳಗಳನ್ನುಹೊಂದುವ ಮೂಲಕ ಯಕ್ಷಗಾನದ ದಾಖಲಾರ್ಹ ಸಂಗತಿಯಾಗಿ ಕಟೀಲು ಮೇಳ ಗುರುತಿಸಲ್ಪಟ್ಟಿದೆಯೆಂದು ಹೇಳಿದರು. ಹಾದಿಗಲ್ಲು ಲಕ್ಷ್ಮೀನಾರಾಯಣ ಭಟ್ ಮಾತನಾಡಿ ಯಕ್ಷಗಾನದ ಪರಂಪರೆಯ ಉಳಿಸುವಿಕೆಯ ಜೊತೆಗೆ ಅಧ್ಯಯನ ಪ್ರದರ್ಶನದ ಗುಣಮಟ್ಟವನ್ನು ಕಲಾವಿದರು ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿದೆ ಎಂದರು. ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಡಾ. ಶ್ರುತಕೀರ್ತಿರಾಜ ನಿರೂಪಿಸಿದರು. ವಿಚಾರಗೋಷ್ಠಿ, ಸಂವಾದ:

ಪ್ರದರ್ಶನ ಕಲೆಗೆ ಸಂಬಂಧಿಸಿ ಇತಿಹಾಸ ಪ್ರಜ್ಞೆಯ ಅಗತ್ಯ, ದಾಖಲೀಕರಣದ ಔಚಿತ್ಯದ ಬಗ್ಗೆ ಡಾ. ಪುಂಡಿಕಾಯಿ ಗಣಪಯ್ಯ ಭಟ್, ಕಟೀಲು ಮೇಳದಲ್ಲಿ ಇತಿಹಾಸವನ್ನು ಬೆಳಗಿಸಿದ ಕಲಾವಿದರು ಬಗ್ಗೆ ಪು. ಗುರುಪ್ರಸಾದ್ ಭಟ್, ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ಪಡ್ರೆ ಕುಮಾರ ಅವರೊಂದಿಗೆ, ದೇವಿಮಾಹಾತ್ಮ್ಯೆ ಪ್ರಸಂಗದ ಪರಂಪರೆಯ ಕುರಿತ ಸಂಶೋಧಕಿ ಡಾ. ಶ್ರೀದೇವೀ ಕಲ್ಲಡ್ಕ, ಕಟೀಲು ಮೇಳದ ಕುರಿತು ಪಾಂಡುರಂಗ ಭಟ್, ಲಕ್ಷ್ಮೀನಾರಾಯಣ ಭಟ್ ಅವರೊಂದಿಗೆ ಹಾಗೂ ಕಟೀಲು ಮೇಳದ ಕುರಿತು ಕಲಾತ್ಮಕ, ಆಡಳಿತಾತ್ಮಕ ವಿಚಾರಗಳ ಕುರಿತು ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟರೊಂದಿಗೆ ಸುನಿಲ್ ಪಲ್ಲಮಜಲು, ಸಾಯಿಸುಮ ನಾವಡ, ಅಭಿಲಾಷ ಎಸ್. ಸಂವಾದ ನಡೆಸಿದರು. ಕರಾವಳಿ ಕರ್ನಾಟಕದ ಕಲಾಪರಂಪರೆಗೆ ಕಟೀಲು ಮೇಳದ ಕೊಡುಗೆ ಬಗ್ಗೆ ಆಳ್ವಾಸ್ ಕಾಲೇಜಿನ ಅನಿಶಾ ಶೆಟ್ಟಿ, ಸೌಮ್ಯ ಕುಂದರ್, ಕಟೀಲು ಮೇಳಕ್ಕೆ ಆಸ್ರಣ್ಣ ಬಂಧುಗಳ ಕೊಡುಗೆ ಬಗ್ಗೆ ಪ್ರಹ್ಲಾದಮೂರ್ತಿ, ಅನಿಕೇತ ಉಡುಪ, ಕಲಾಪರಂಪರೆಗೆ ಕಟೀಲು ಮೇಳದ ಪ್ರೇರಣೆ ಬಗ್ಗೆ ಎಸ್‌ಡಿಎಂ ಕಾನೂನು ವಿದ್ಯಾಲಯದ ವಿಜೇತ್ ಶೆಟ್ಟಿ, ಉಜಿರೆ ಎಸ್‌ಡಿಎಂ ಕಾಲೇಜಿನ ಸಾಕ್ಷತ್, ಲಿಖಿತ್, ಕಟೀಲು ಮೇಳದ ಪೂರ್ವರಂಗ ಮತ್ತು ಉತ್ತರರಂಗದ ಸಾಂಪ್ರದಾಯಿಕತೆ ಬಗ್ಗೆ ಸಹ್ಯಾದ್ರಿ ಕಾಲೇಜಿನ ವಿಶ್ವಾಸ್ ಭಟ್, ಮೈಟ್ ಕಾಲೇಜಿನ ಪ್ರಜ್ವಲ್ ಎಂ, ಕಟೀಲು ಮೇಳ ಏಳಾಗಿ ಏಳಿಗೆ ಹೊಂದಿದ ಬಗೆ ಕುರಿತು ಸಂತ ಅಲೋಶಿಯಸ್ ಕಾಲೇಜಿನ ಶ್ರೇಯಸ್ ಕೆ.ಬಿ, ಕಟೀಲು ಕಾಲೇಜಿನ ಶ್ರೀರಕ್ಷಾ, ಕಟೀಲು ಮೇಳಕ್ಕೆ ಕಲ್ಲಾಡಿ ಕುಟುಂಬದ ಕೊಡುಗೆ ಬಗ್ಗೆ ಮಂಗಳೂರು ವಿವಿಯ ಸ್ನೇಹಾ, ದುಶ್ಯಂತ್ ಹೀಗೆ ವಿದ್ಯಾರ್ಥಿಗಳು ವಿಚಾರ ಪ್ರಸ್ತುತ ಪಡಿಸಿದರು.

ಕಟೀಲು ಮೇಳಗಳ ಕುರಿತಾದ ಮಾತುಗೀತ ರೂಪಕದಲ್ಲಿ ಕರ್ಬೆಟ್ಟು ವಿಶ್ವಾಸ್ ಭಾಗವತ, ಸ್ಕಂದ ಕೊನ್ನಾರ್, ಸಮರ್ಥ ಉಡುಪ, ಮಾತಿನಲ್ಲಿ ಸುನಿಲ್ ಭಾಸ್ಕರ್, ನಾಗೇಶ ಬೈಲೂರು ವಯಲಿನ್‌ನಲ್ಲಿ ವಿ. ಪ್ರಣಿತ್ ಬಳ್ಳಕ್ಕುರಾಯ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ