ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಳೆದ ಹಲವಾರು ವರ್ಷಗಳಿಂದ ಕೊಳ್ಳೇಗಾಲ ಮತ್ತು ಹನೂರು ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಹೋರಾಟದ ಮುಖಾಂತರ ಮನವಿ ಸಲ್ಲಿಸುತ್ತ ಬಂದಿದ್ದರೂ ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಯಾವುದೇ ಸಭೆಗಳನ್ನು ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ, ತಾಲೂಕು ಅಧಿಕಾರಿಗಳು ಈನಿಟ್ಟಿನಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಕೂಡಲೆ ಸಂಬಂಧಿಸಿದವರು ನನೆಗುದ್ದಿಗೆ ಬಿದ್ದಿರುವ ಚಿಕ್ಕಲ್ಲೂರು ರಸ್ತೆ ದುರಸ್ತಿಗೆ ಕ್ರಮವಹಿಸಬೇಕು ಎಂದರು.
ತಮಿಳುನಾಡು ಸಂಪರ್ಕ ರಸ್ತೆ ತಕ್ಷಣವೇ ಅಭಿವೃದ್ದಿಪಡಿಸಬೇಕು. ದೊಡ್ಡಿಂದುವಾಡಿ ಸರ್ಕಲ್ ನಲ್ಲಿ ಅನೇಕ ಬಾರಿ ಅಪಘಾತ ಸಂಭವಿಸಿ ಸಾವು-ನೋವುಗಳು ಉಂಟಾಗುತ್ತಿದ್ದರೂ ರಸ್ತೆ ಡುಬ್ಬ ಅಳವಡಿಸುವಲ್ಲಿ ಕ್ರಮ ಆಗಿಲ್ಲ, ಕೂಡಲೆ ಕ್ರಮ ಆಗಬೇಕು. ಸತ್ತೇಗಾಲ ಜಾಗೇರಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತರಿಗೂ ಸಾಗುವಳಿ ಚೀಟಿ ನೀಡಲು ಜಂಟಿ ಸರ್ವೆ ನಡೆದು ಮೂರುವರೆ ವರ್ಷ ಕಳೆದರೂ ಸರ್ಕಾರ ಕ್ರಮ ವಹಿಸಿಲ್ಲ, ಈನಿಟ್ಟಿನಲ್ಲಿ ತುರ್ತಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ಅರಣ್ಯ, ಇಲಾಖೆ ಸಭೆ ನಡೆಸಿ ಸಾಗುವಳಿ ಸಮಸ್ಯೆ ಬಗೆಹರಿಸಬೇಕು. ಹನೂರು ತಾಲ್ಲೂಕಿನ ಜಲ್ಲಿಪಾಳ್ಯದಿಂದ ದಂಟಳ್ಳಿ ವರೆಗೆ, ಇತರ ಕಡೆಗಳಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯತೆ ಯಿಂದ 70 ವರ್ಷ ಕಳೆದರೂ ಪೋಡಿ ಸಮಸ್ಯೆ ಬಗೆಹರಿಸಿಲ್ಲ, ವಡಕೆಹಳ್ಳ ಗ್ರಾಮದಿಂದ ಜಲ್ಲಿಪಾಳ್ಯ ಗ್ರಾಮದವರೆಗೆ ರಸ್ತೆ ಅಗಲೀಕರಣ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತುಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆ ನಡೆಸಿದ್ದರಿಂದ ಪೊಲೀಸರು ಪ್ರತಿಭಟನೆ ಸ್ಥ ಗಿತಕ್ಕೆ ರೈತರಲ್ಲಿ ಮನವಿ ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು.
ಬಳಿಕ ಪ್ರಭಾರ ಉಪವಿಭಾಗಾಧಿಕಾರಿ ಸುಬ್ರಮಣ್ಯಂ ಅವರಿಗೆ ರೈತರು ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.