ನೋಡುಗರ ಮನಸೆಳೆದ ಶ್ವಾನಗಳ ಪ್ರದರ್ಶನ

KannadaprabhaNewsNetwork |  
Published : Oct 20, 2025, 01:02 AM IST
19ಎಚ್ಎಸ್ಎನ್19 | Kannada Prabha

ಸಾರಾಂಶ

ಹಾಸನ ಪೊಲೀಸ್ ಇಲಾಖೆಯ ತರಬೇತಿ ಪಡೆದ ಲಾಸಿ ನಾಯಿ ಪ್ರಥಮ ಪ್ರದರ್ಶನ ನೀಡಿತು. ಅದರ ಚುರುಕುತನ, ಆಜ್ಞೆ ಪಾಲನೆ ಹಾಗೂ ನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು. ಇದರ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂದ ಸುಮಾರು ೮೦ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳು ಲ್ಯಾಬ್ರಡಾರ್‌, ಜರ್ಮನ್ ಶೆಪರ್ಡ್, ಡೋಬರ್ಮಾನ್, ಪೊಮೆರೇನಿಯನ್, ರಾಟ್‌ವೈಲರ್‌, ಹಸ್ಕಿ ಹಾಗೂ ಭಾರತೀಯ ತಳಿಯ ನಾಯಿಗಳು ತಮ್ಮ ಮಾಲೀಕರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡಿದವು. ನಾಯಿಗಳ ಆರೈಕೆ, ಶಿಸ್ತು, ನಡವಳಿಕೆ, ಮೈಕಟ್ಟು ಮತ್ತು ಪ್ರದರ್ಶನ ಶೈಲಿಯ ಆಧಾರದ ಮೇಲೆ ನ್ಯಾಯಾಧೀಶರು ಮೌಲ್ಯಮಾಪನ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಾಲಗಾಮ ರಸ್ತೆ ಬಳಿಯ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಶ್ರೀ ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ವಿಶೇಷ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ದೂರದೂರದಿಂದ ಬಂದ ನೂರಾರು ಮಂದಿ ಪ್ರೇಕ್ಷಕರು ಭಾಗವಹಿಸಿ ನಾಯಿಗಳ ಪ್ರತಿಭೆ, ಶಿಸ್ತು ಮತ್ತು ಶೈಲಿಯನ್ನು ಕಣ್ತುಂಬಿಕೊಂಡರು.

ಕಾರ್ಯಕ್ರಮ ಆರಂಭದಲ್ಲಿ ಹಾಸನ ಪೊಲೀಸ್ ಇಲಾಖೆಯ ತರಬೇತಿ ಪಡೆದ ಲಾಸಿ ನಾಯಿ ಪ್ರಥಮ ಪ್ರದರ್ಶನ ನೀಡಿತು. ಅದರ ಚುರುಕುತನ, ಆಜ್ಞೆ ಪಾಲನೆ ಹಾಗೂ ನೈಪುಣ್ಯ ಮೆಚ್ಚುಗೆಗೆ ಪಾತ್ರವಾಯಿತು. ಇದರ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಂದ ಸುಮಾರು ೮೦ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳು ಲ್ಯಾಬ್ರಡಾರ್‌, ಜರ್ಮನ್ ಶೆಪರ್ಡ್, ಡೋಬರ್ಮಾನ್, ಪೊಮೆರೇನಿಯನ್, ರಾಟ್‌ವೈಲರ್‌, ಹಸ್ಕಿ ಹಾಗೂ ಭಾರತೀಯ ತಳಿಯ ನಾಯಿಗಳು ತಮ್ಮ ಮಾಲೀಕರ ಮಾರ್ಗದರ್ಶನದಲ್ಲಿ ಪ್ರದರ್ಶನ ನೀಡಿದವು. ನಾಯಿಗಳ ಆರೈಕೆ, ಶಿಸ್ತು, ನಡವಳಿಕೆ, ಮೈಕಟ್ಟು ಮತ್ತು ಪ್ರದರ್ಶನ ಶೈಲಿಯ ಆಧಾರದ ಮೇಲೆ ನ್ಯಾಯಾಧೀಶರು ಮೌಲ್ಯಮಾಪನ ನಡೆಸಿದರು. ಶ್ವಾನ ಪ್ರೇಮಿಗಳು ತಮ್ಮ ಪಾಳುಪ್ರಾಣಿಗಳನ್ನು ಸಿಂಗರಿಸಿ, ಅವರಿಗೆ ವಿಭಿನ್ನ ರೀತಿಯ ತರಬೇತಿ ನೀಡಿದ ರೀತಿ ನೋಡುಗರ ಮನಗೆದ್ದಿತು. ಕೆಲವು ಮಕ್ಕಳು ನಾಯಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಹರ್ಷದ ದೃಶ್ಯವೂ ಕಂಡುಬಂತು.

ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತ ನಾಯಿಗಳ ಮಾಲೀಕರಿಗೆ ನಗದು ಪ್ರಶಸ್ತಿ ಪತ್ರಗಳು ಹಾಗೂ ಟ್ರೋಫಿಗಳನ್ನು ವಿತರಿಸಲಾಯಿತು. ಪಶುವೈದ್ಯಾಧಿಕಾರಿ ಡಾ. ಶಂಕರ, ಡಾ. ನಾಗರಾಜು ಹಾಗೂ ತಾಲೂಕು ಪಶುಪಾಲನಾ ಅಧಿಕಾರಿ ರಾಮಚಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಶ್ವಾನಪ್ರೇಮಿಗಳಿಗೆ ಸಿಕ್ಕಿದ ಈ ದೃಶ್ಯಾವಳಿ ಹಾಸನಾಂಬೆ ಜಾತ್ರೆಯ ಮತ್ತೊಂದು ಆಕರ್ಷಣೆಯಾಗಿ ಪರಿಣಮಿಸಿತು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ