ಕನ್ನಡಪ್ರಭ ವಾರ್ತೆ ಮೈಸೂರು
ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮದುವೆಯ ಸಿದ್ಧತೆಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶಿಕ್ಷಣ, ಬದುಕು, ಚಿತ್ರರಂಗ ಪ್ರವೇಶ ಎಲ್ಲವೂ ಆಗಿದ್ದು ಮೈಸೂರಿನಲ್ಲೆ. ಹೀಗಾಗಿ, ನಾನು ಮೈಸೂರಿನೊಂದಿಗೆ ತುಂಬಾ ಕನೆಕ್ಟ್ ಆಗಿದ್ದೇನೆ. ನನ್ನ ಬದುಕಿನ ಎಲ್ಲವೂ ಮೈಸೂರಿನಿಂದಲೇ ಶುರುವಾಗಿದ್ದರಿಂದ ವೈವಾಹಿಕ ಜೀವನವೂ ಇಲ್ಲಿದಂಲೇ ಆರಂಭವಾಗಲಿ ಎಂದು ಇಲ್ಲೇ ಮದುವೆಯಾಗುತ್ತಿದ್ದೇನೆ ಎಂದು ಹೇಳಿದರು.
ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ, ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳ ವಿವಾಹವಾಗಬೇಕೆಂಬ ಆಸೆಯಿತ್ತು. ಸಂಬಂಧಿಕರು, ಸ್ನೇಹಿತರು, ಚಿತ್ರರಂಗದವರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಊಟ ಹಾಕಿಸುವುದು ಕಷ್ಟ ಸಾಧ್ಯ. ಹೀಗಾಗಿ, ಅಭಿಮಾನಿಗಳು, ಸಂಬಂಧಿಕರ ಖುಷಿಗೆ, ಎಲ್ಲರಿಗೂ ಒಂದೇ ಕಡೆ ಊಟ ಹಾಕಿಸಲು ಇಲ್ಲಿ ಮದುವೆ ಆಗುತ್ತಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.ಪ್ರತ್ಯೇಕ ವ್ಯವಸ್ಥೆ- ಊಟಕ್ಕೆ 45 ಕೌಂಟರ್
ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದ್ದು, ಅಭಿಮಾನಿಗಳು, ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ, ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ವಿತರಣೆಗೆ 45 ಕೌಂಟರ್ ಮಾಡಲಾಗುವುದು. ಬಾಳೆ ಎಲೆಯ ಊಟವೂ ಇರಲಿದೆ ಎಂದು ಅವರು ವಿವರಿಸಿದರು.
-----
ನನ್ನ ಮದುವೆಗೆ ದರ್ಶನ್ ಅವರು ಬಂದರೆ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ಅವರನ್ನು ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ದರ್ಶನ್ ಅವರು ಸಿಗುತ್ತಿಲ್ಲ.