ರಾಜ್ಯದ ಪ್ರಥಮ ಮಹಿಳಾ ಉದ್ಯಮಿ ಹಾಗೂ ದಾನಿಗಳಾದ ಡಿ. ಸಾಕಮ್ಮ ಅವರ ಹೆಸರನ್ನು ನೆನಪಿನಲ್ಲಿ ಉಳಿಯುವಂತ ಯೋಜನೆಗಳನ್ನು ಮಾಡಲು ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ತೀರ್ಮಾನಿಸಿದೆ ಎಂದು ಅಧ್ಯಕ್ಷ ಬಿ.ಆರ್. ಮಹೇಶ್ ತಿಳಿಸಿದರು.
ಸೋಮವಾರಪೇಟೆ: ರಾಜ್ಯದ ಪ್ರಥಮ ಮಹಿಳಾ ಉದ್ಯಮಿ ಹಾಗೂ ದಾನಿಗಳಾದ ಡಿ. ಸಾಕಮ್ಮ ಅವರ ಹೆಸರನ್ನು ನೆನಪಿನಲ್ಲಿ ಉಳಿಯುವಂತ ಯೋಜನೆಗಳನ್ನು ಮಾಡಲು ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ತೀರ್ಮಾನಿಸಿದೆ ಎಂದು ಅಧ್ಯಕ್ಷ ಬಿ.ಆರ್. ಮಹೇಶ್ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಹಿಳಾ ಸಾಧಕಿಯ ಹೆಸರು ಯುವಜನರಿಗೆ ತಿಳಿದಿಲ್ಲ. ಹಿಂದೆ ಅವರ ಬಸವೇಶ್ವರ ರಸ್ತೆಯಲ್ಲಿನ ಬಂಗಲೆಗೆ ಸಾಕಷ್ಟು ಜನರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದರು. ಈಗ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪಟ್ಟಣದ ಸಾಧಕ ಮಹಿಳೆಯ ಹೆಸರನ್ನು ಪಟ್ಟಣದ ಪ್ರಮುಖ ರಸ್ತೆಗೆ ಇರಿಸಿ ಅವರನ್ನು ನೆನೆಯುವಂತೆ ಮಾಡಬೇಕು. ಇದರೊಂದಿಗೆ ಸೂಕ್ತ ಸ್ಥಳದಲ್ಲಿ ಅವರ ಪ್ರತಿಮೆ ಸ್ಥಾಪಿಸಲು ಮಾಡಲು ಶಾಸಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕ್ಲಬ್‌ನ ಸಲಹೆಗಾರ ಕೆ.ಎಸ್. ಪ್ರಕಾಶ್ ಮಾತನಾಡಿ, ಡಾಲ್ಪಿನ್ಸ್ ಸ್ಪೋರ್ಟ್ಸ್ ಕ್ಲಬ್ ಹಾಕಿ ಕ್ರೀಡೆಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಲಾಗಿದೆ. ಈ ಹಿಂದೆ ಆಳಿದ ಲಿಂಗರಾಜ ಅರಸು ಮತ್ತು ವೀರರಾಜೇಂದ್ರ ಅವರ ಹೆಸರು ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಆದರೆ, ಅವರಂತೆ ಇದ್ದ ದೊಡ್ಡಮನೆ ಕುಟುಂಬದ ಸಾಕಮ್ಮ ಮಾತ್ರ ನಮ್ಮಿಂದ ಮರೆಯಾಗಿದ್ದಾರೆ ಎಂದರು.ಸಮಾಜಕ್ಕೆ ನೆರವಾಗಲು ಸಾಕಷ್ಟು ಭೂಮಿ, ಹಣ ದಾನ ಮಾಡಿದ್ದು, ಇಂದಿಗೂ ನಾವು ಪಟ್ಟಣದಲ್ಲಿ ಕಾಣಬಹುದು. ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ಯೋಜನೆಗಳನ್ನು ರೂಪಿಸಲಾಗಿದೆ. ಪಟ್ಟಣ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಈ ಯೋಜನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೆ, ಅವರ ಹೆಸರನ್ನು ರಸ್ತೆಗೆ ಇರಿಸಲು ಪಟ್ಟಣ ಪಂಚಾಯಿತಿ ಮತ್ತು ಪ್ರತಿಮೆ ಸ್ಥಾಪಿಸಲು ಸ್ಥಳಕ್ಕಾಗಿ ಶಾಸಕರು ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಸದಸ್ಯ ಮಿಲನ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.