ಗೃಹ ಬಳಕೆ ಸಿಲಿಂಡರ್‌ ವಾಣಿಜ್ಯಕ್ಕೆ ಬಳಕೆ: ದಾಳಿ ನಡೆಸಿ ವಶ

KannadaprabhaNewsNetwork |  
Published : Apr 17, 2026, 01:30 AM IST
ಪಟ್ಟಣದ ಬೀದಿಬದಿಯ ತಿಂಡಿ ಅಂಗಡಿಗಳು, ಹೊಟೇಲ್, ಬೇಕರಿ ಗಳಲ್ಲಿ ಗೃಹ ಬಳಕೆಯ ಅನಿಲವನ್ನು ಬಳಸುತ್ತಿದ್ದ ಅಂಗಡಿಗಳ ಮೇಲೆ ಉಪವಿಭಾಗಾಧಿಕಾರಿ ಚನ್ನಪ್ಪ ಇವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಗೃಹ ಬಳಕೆಯ ಸಿಲಿಂಡರ್ ಗಳನ್ನು ವಶ ಪಡಿಸಿ ಕೊಳ್ಳುತ್ತೀರುವುದು | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದ ಬೀದಿಬದಿಯ ತಿಂಡಿ ಅಂಗಡಿಗಳು, ಹೋಟೆಲ್, ಬೇಕರಿಗಳಲ್ಲಿ ಗೃಹ ಬಳಕೆಯ ಅನಿಲವನ್ನು ಬಳಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಉಪವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಸೇರಿದಂತೆ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಹೋಟೆಲ್‌ಗಳಲ್ಲಿ ಬಳಸುತ್ತಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡ ಘಟನೆ ನಡೆಯಿತು.

ಚನ್ನಗಿರಿ: ಪಟ್ಟಣದ ಬೀದಿಬದಿಯ ತಿಂಡಿ ಅಂಗಡಿಗಳು, ಹೋಟೆಲ್, ಬೇಕರಿಗಳಲ್ಲಿ ಗೃಹ ಬಳಕೆಯ ಅನಿಲವನ್ನು ಬಳಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಉಪವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಸೇರಿದಂತೆ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಹೋಟೆಲ್‌ಗಳಲ್ಲಿ ಬಳಸುತ್ತಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡ ಘಟನೆ ನಡೆಯಿತು.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಅವರು, ಮಧ್ಯಪ್ರಾಚ್ಯ ದೇಶಗಳ ಯುದ್ದದಿಂದಾಗಿ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ ಉಂಟಾಗಿದೆ. ಅಲ್ಲದೆ, ಗೃಹ ಬಳಕೆಯ ಅಡುಗೆ ಅನಿಲವನ್ನು ವಾಣಿಜ್ಯಕ್ಕೆ ಉಪಯೋಗಿಸುವುದನ್ನು ಸರ್ಕಾರ ಸಂಪೂರ್ಣ ನಿಷೇಧ ಮಾಡಿದೆ. ಚನ್ನಗಿರಿ ಪಟ್ಟಣದ ಕೆಲ ಹೊಟೇಲ್‌ಗಳಲ್ಲಿ ಗೃಹ ಬಳಕೆ ಅನಿಲ ಉಪಯೋಗಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಲಾಗುತ್ತಿದೆ ಎಂದರು.

ಸಿಲಿಂಡರ್ ದುಬಾರಿ ಬೆಲೆಗೆ ಮಾರಾಟ ಬಗ್ಗೆ ದೂರುಗಳು ಬಂದಿಲ್ಲ. ದೂರು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಗೃಹ ಬಳಕೆ ಸಿಲಿಂಡರ್ ವಾಣಿಜ್ಯಕ್ಕೆ ಬಳಕೆ ಕಂಡುಬಂದರೆ ಆ ಅಂಗಡಿಗಳ ಮಾಲೀಕರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದರು.

ತಹಸೀಲ್ದಾರ್ ಎನ್.ಜೆ.ನಾಗರಾಜ್ ಮಾತನಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ವಾಣಿಜ್ಯ ಬಳಕೆಯ 1 ಸಾವಿರ ಸಿಲಿಂಡರ್ ಬೇಡಿಕೆ ಇದೆ. ಆದರೆ, 300 ಸಿಲಿಂಡರ್ ಪೂರೈಕೆ ಆಗುತ್ತಿವೆ. ಮೊದಲಿನಿಂದಲೂ ವಾಣಿಜ್ಯ ಸಿಲಿಂಡರ್ ಬಳಕೆ ಮಾಡಿಕೊಳ್ಳುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಲೋಕೇಶ್, ಆಹಾರ ಇಲಾಖೆಯ ಶಿರಾಸ್ತೆದಾರ್ ಗಂಗಾಧರ್, ರಾಜಸ್ವನಿರೀಕ್ಷಕ ಸಿದ್ರಾಮೇಶ್, ಗ್ರಾಮ ಲೆಕ್ಕಾಧಿಕಾರಿ ಸೋಮಶೇಖರ್ ಮೊದಲಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಾವಕಾಶ ಪಡೆಯಲು ತರಬೇತಿ ಅತ್ಯವಶ್ಯಕ
ಪ್ರೈಡ್‌ ವಿದ್ಯಾರ್ಥಿನಿಯರ ಐತಿಹಾಸಿಕ ಸಾಧನೆ