ಯಲಬುರ್ಗಾ: ಪರಿಶಿಷ್ಟ ಪಂಗಡ ವರ್ಗಕ್ಕೆ ಅನ್ಯ ಜಾತಿಗಳನ್ನು ಸೇರಿಸದಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಮುಖಾಂತರ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಸರ್ಕಾರ ಕುಲಶಾಸ್ತ್ರ ಅಧ್ಯಯನ ಸಮಿತಿ ರಚನೆ ಮಾಡಿ ಬೇರೆ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿ ಎಸ್‌ಟಿಗೆ ಪೂರಕವಾದ ಅಂಶಗಳು ಇರುವುದಿಲ್ಲವೆಂಬುದನ್ನು ಮನಗಂಡು ತಿರಸ್ಕರಿಸಿ ಮರಳಿಸಲಾಗಿತ್ತು. ಈಗ ಸರ್ಕಾರ ಕುರುಬ ಸಮುದಾಯ ಮತ್ತು ಇನ್ನಿತರ ಜಾತಿಗಳನ್ನು ಎಸ್‌ಟಿಗೆ ಸೇರಿಸುವ ಹುನ್ನಾರ ನಡೆದಿದ್ದು ಖಂಡನೀಯ. ಸರ್ಕಾರ ಕೂಡಲೇ ಇಂಥ ನಿರ್ಧಾರ ಕೈಬಿಟ್ಟು ಯಥಾ ಪ್ರಕಾರ ಮೀಸಲಾತಿ ಮುಂದುವರೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಮುದಾಯದ ಪ್ರಮುಖರಾದ ಹಂಚ್ಯಾಳಪ್ಪ ಪೂಜಾರ, ಫಕೀರಪ್ಪ ತಳವಾರ್, ಶ್ರೀಕಾಂತಗೌಡ ಮಾಲಿಪಾಟೀಲ್, ಭೀಮಪ್ಪ ಹವಳಿ, ಓಬಳೆಪ್ಪ ಕುಲಕರ್ಣಿ, ಭೀಮನಗೌಡ ಪೊಲೀಸ್ ಪಾಟೀಲ್, ದ್ಯಾಮನಗೌಡ ಗೌಡ್ರ, ಗುಂಡನಗೌಡ ಮಾಲಿಪಾಟೀಲ್, ತಾಯಪ್ಪ, ಶಶಿಧರ ಗಡಾದ, ರಮೇಶ, ಅಶೋಕ ಮಾಲಿಪಾಟೀಲ್, ಹನುಮಪ್ಪ ಮದ್ಲಗಟ್ಟಿ, ಕಳಕಪ್ಪ ತಳವಾರ್, ಹಿರಣಾಕ್ಷಗೌಡ ಮಾಲಿಪಾಟೀಲ್, ಶಂಕ್ರಗೌಡ ಸಾಲಭಾವಿ, ಶರಣಗೌಡ ಬಸಾಪುರ, ಮೌನೇಶ ಮದ್ಲೂರು, ಯಮನೂರ, ಮಾನಪ್ಪ, ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.