ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡದಿರಿ: ಬಸವರಾಜು ಆಗ್ರಹ

KannadaprabhaNewsNetwork |  
Published : Jun 03, 2025, 12:50 AM IST
2ಎಚ್ಎಸ್ಎನ್17 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾತನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವರಾಜು. | Kannada Prabha

ಸಾರಾಂಶ

ರವಿಕುಮಾರ, ಬಿನ್ ಲೇಟ್ ಅಣ್ಣೆಗೌಡರಿಗೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಬಾರದು. ಒಂದು ವೇಳೆ ಹೊಳೆನರಸೀಪುರ ತಹಸೀಲ್ದಾರ್ ರವರು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಪ್ರಸ್ತಾಪಿತ ಉದ್ದೇಶಕ್ಕೆ ಮೇಲ್ಕಂಡ ಜಮೀನನ್ನು ಮಂಜೂರು ಮಾಡಿದ್ದಲ್ಲಿ ಸ್ಥಳೀಯರು, ರೈತರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ .

ಕನ್ನಡಪ್ರಭ ವಾರ್ತೆ ಹಾಸನ

ಸಾರ್ವಜನಿಕರ ಹಾಗೂ ಜಾನುವಾರುಗಳಿಗೆ ಅವಶ್ಯಕತೆ ಇರುವ ಜಮೀನುಗಳನ್ನು ಕಾಪಾಡುವ ಹಿತದೃಷ್ಟಿಯಿಂದ ಕಲ್ಲೋಡೆಬೋರೆ ಕಾವಲು ಗ್ರಾಮದ ಅಮೃತ್ ಮಹಲ್ ಕಾವಲು ಗ್ರಾಮದ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಕೊಡಬಾರದೆಂದು ತಾತನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವರಾಜು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ಇದ್ದು, ಕಟ್ಟಡ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದಲ್ಲಿ ಈ ಭಾಗದ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯಾಗುವುದರಿಂದ ಪ್ರಸ್ತಾಪಿತ ಪ್ರಸ್ತಾವನೆಗೆ ಅನುಮತಿ ನೀಡಬಾರದಾಗಿ ಸ್ಥಳೀಯರಿಂದ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಹಲವಾರು ಪ್ರತಿಭಟನೆಗಳು ನಡೆದಿದ್ದು, ಸರ್ಕಾರಕ್ಕೆ ಸಾರ್ವಜನಿಕರಿಂದ ಹಲವಾರು ದೂರು, ಅರ್ಜಿಗಳು ಸಹ ಸಲ್ಲಿಕೆಯಾಗಿವೆ ಎಂದು ಹೇಳಿದರು. ರವಿಕುಮಾರ, ಬಿನ್ ಲೇಟ್ ಅಷ್ಟೇಗೌಡ ರವರು ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿ ಕಲ್ಲೋಡೆಬೋರೆ ಕಾವಲು ಗ್ರಾಮದಲ್ಲಿ ೦೨ ಕಡೆಗಳಲ್ಲಿ ಕಲ್ಲುಗಣಿ ಗುತ್ತಿಗೆ ನಡೆಸುತ್ತಿದ್ದು, ಸರ್ವೇ ನಂಬರ್ ೧೬೬/೨ರಲ್ಲಿರುವ ಸುಮಾರು ೭ ಎಕರೆ ಪರಿಶಿಷ್ಟ ಜಾತಿಯವರ ಜಮೀನುಗಳನ್ನು ಕಾನೂನುಬಾಹಿರವಾಗಿ ಖರೀದಿಸಿ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಶಿಷ್ಟ ಜಾತಿಯವರ ಜಮೀನುಗಳನ್ನು ಹಿಂಪಡೆದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಲವಾರು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ ಎಂದರು.

ಆದ್ದರಿಂದ ರವಿಕುಮಾರ, ಬಿನ್ ಲೇಟ್ ಅಣ್ಣೆಗೌಡರಿಗೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಬಾರದು. ಒಂದು ವೇಳೆ ಹೊಳೆನರಸೀಪುರ ತಹಸೀಲ್ದಾರ್ ರವರು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಪ್ರಸ್ತಾಪಿತ ಉದ್ದೇಶಕ್ಕೆ ಮೇಲ್ಕಂಡ ಜಮೀನನ್ನು ಮಂಜೂರು ಮಾಡಿದ್ದಲ್ಲಿ ಸ್ಥಳೀಯರು, ರೈತರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದೊಡ್ಡ ಕಾಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಶಿವಣ್ಣ, ತಾತನಹಳ್ಳಿ ಗ್ರಾಪಂ ಅಧ್ಯಕ್ಷ ಟಿ.ವಿ. ಜಗದೀಶ್ ಇತರರು ಉಪಸ್ಥಿತರಿದ್ದರು.

PREV

Recommended Stories

ಕೊಡಗಿನಲ್ಲಿ ಮಳೆಯಬ್ಬರ: ಹಲವು ಕಡೆ ಮನೆಗಳಿಗೆ ಹಾನಿ
ಗ್ರಾಮ ಆಡಳಿತ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಸ್ಪಂದನೆ ಅವಶ್ಯ: ಕೃಷ್ಣ ಬೈರೇಗೌಡ