ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ: ಬೋರ್‌ವೆಲ್‌ ಏಜೆನ್ಸಿಗಳಿಂದ ಮನವಿ

KannadaprabhaNewsNetwork |  
Published : Feb 28, 2026, 02:00 AM IST
 26 ಟಿವಿಕೆ 2 – ತುರುವೇಕೆರೆ ತಾಲೂಕು ಬೋರ್ ವೆಲ್ ಮಾಲೀಕರ ಮತ್ತು ಏಜಂಟರ ಸಂಘದಿಂದ ಪತ್ರಿಕಾಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ತಾಲೂಕಿನಲ್ಲಿ ಹಲವಾರು ಮಂದಿ ತಾವು ಬೋರ್ ವೆಲ್ ಕೊರೆಸಿಕೊಡುವುದಾಗಿ ನಯವಾಗಿ ಮಾತನಾಡಿ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು ಸಾರ್ವಜನಿಕರು ಮತ್ತು ರೈತಾಪಿಗಳು ಅವರ ಬಗ್ಗೆ ಬಹಳ ಎಚ್ಚರವಹಿಸುವಂತೆ ತಾಲೂಕಿನ ಬೋರ್ ವೆಲ್ ಏಜೆನ್ಸಿ ಹಾಗೂ ಲಾರಿ ಮಾಲೀಕರ ಸಂಘ ಮನವಿ ಮಾಡಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಹಲವಾರು ಮಂದಿ ತಾವು ಬೋರ್ ವೆಲ್ ಕೊರೆಸಿಕೊಡುವುದಾಗಿ ನಯವಾಗಿ ಮಾತನಾಡಿ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು ಸಾರ್ವಜನಿಕರು ಮತ್ತು ರೈತಾಪಿಗಳು ಅವರ ಬಗ್ಗೆ ಬಹಳ ಎಚ್ಚರವಹಿಸುವಂತೆ ತಾಲೂಕಿನ ಬೋರ್ ವೆಲ್ ಏಜೆನ್ಸಿ ಹಾಗೂ ಲಾರಿ ಮಾಲೀಕರ ಸಂಘ ಮನವಿ ಮಾಡಿದೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಚೌಡೇನಹಳ್ಳಿ ಪಂಚಾಕ್ಷರಿ, ತಾಲೂಕಿನಲ್ಲಿ ಕೆಲವರು ಬೋರ್ ಪಾಯಿಂಟ್ ಮಾಡುವವರು ಹಾಗೂ ಇನ್ನಿತರರು ತಾವೇ ಬೋರ್ ವೆಲ್ ಕೊರೆಸುವುದಾಗಿ ಒಂದಿಷ್ಟು ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಕಡಿಮೆ ದರಕ್ಕೆ ಬೋರ್ ವೆಲ್ ಕೊರೆಸುವುದಾಗಿ ನಂಬಿಸಿ ಹೆಚ್ಚು ಆಳ ಕೊರೆಯುತ್ತಿದ್ದಂತೆ ಹೆಚ್ಚು ಹೆಚ್ಚು ದರ ನಿಗದಿಪಡಿಸುತ್ತಿದ್ದಾರೆ. ಇತ್ತ ರೈತರು ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಹೆಚ್ಚು ಬೆಲೆ ತೆರುವ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಚೌಡೇನಹಳ್ಳಿ ಪಂಚಾಕ್ಷರಿ ಆರೋಪಿಸಿದ್ದಾರೆ. ತಾಲೂಕಿನಲ್ಲಿ ಅಧಿಕೃತವಾಗಿ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಅಧಿಕೃತ ಏಜನ್ಸಿ ಅಥವಾ ಬೋರ್ ವೆಲ್ ವಾಹನದ ಮಾಲೀಕರನ್ನು ಸಂಪರ್ಕಿಸಿ ಬೋರ್ ವೆಲ್ ಕೊರೆಸಿದರೆ ಸಾವಿರ ಅಡಿಗಳಿಗೆ ಕನಿಷ್ಠ 15 ಸಾವಿರ ರುಗಳ ಉಳಿತಾಯ ಆಗುತ್ತದೆ. ಈ ಸದಾವಕಾಶವನ್ನು ಸಾರ್ವಜನಿಕರು ಮತ್ತು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಪಂಚಾಕ್ಷರಿ ಮನವಿ ಮಾಡಿದ್ದಾರೆ. ಸಂಘದ ಪದಾದಿಕಾರಿ ಉಮರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಪದಾದಿಕಾರಿಗಳಾದ ಮಂಜಣ್ಣ, ಸಂಪಿಗೆ ದಿವಾಕರ್, ಕುಮಾರ್, ಇಮ್ರಾನ್, ಮನೋಜ್, ನದೀಂ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮ ದಿನಾಚರಣೆ: ರೋಗಿಗಳಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ
ಭೂಮಿಯ ಮೂಲ ಹಕ್ಕುದಾರರಿಗೆ ಆದೇಶಕ್ಕೆ ಆಗ್ರಹಿಸಿ ಪ್ರತಿಭಟನೆ