ರೈತರಿಗೆ ಅನಗತ್ಯವಾಗಿ ತೊಂದರೆ ಕೊಡಬೇಡಿ

KannadaprabhaNewsNetwork |  
Published : Jun 18, 2025, 12:18 AM IST
೧೭ಕೆಎಲ್‌ಆರ್-೧೫ಕೋಲಾರದ ಡಿಸಿ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರಕ ಸಿದ್ಧತೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. | Kannada Prabha

ಸಾರಾಂಶ

ಜಿಪಿಎಸ್ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ವಾರ್ಷಿಕವಾಗಿ ೩ ಅವಧಿಗಳಲ್ಲಿ ಸಮೀಕ್ಷೆ ಪಿ.ಆರ್.ಗಳು ತಮ್ಮ ಮೊಬೈಲ್ನಲ್ಲಿ ಬೆಳೆ ಸಮೀಕ್ಷೆಯ ಅಪ್ ಮೂಲಕ ಮಾಡುತ್ತಾರೆ. ರೈತರು ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಇದರಲ್ಲಿ ಅವರ ಬೆಳೆ ನಮೂದಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರಗಳ ಖರೀದಿಗೆ ಅನಗತ್ಯವಾಗಿ ತೊಂದರೆ ನೀಡದೆ ಅವರಿಗೆ ಬೇಕಾದಂತಹ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕಗಳು ಸೇರಿದಂತಹ ಇನ್ನಿತರ ಸೇವೆಗಳನ್ನು ಒದಗಿಸುವ ಕೆಲಸ ಅಂಗಡಿಗಳ ಮಾಲೀಕರು ಮತ್ತು ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರಕ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು.

ಈ ವರ್ಷ ಮುಂಗಾರು ಹಂಗಾಮಿನ ತಾಲೂಕುವಾರು ಧಾನ್ಯಗಳ ಬೆಳೆ ವಿಸ್ತೀರ್ಣ :ಬಂಗಾರಪೇಟೆ ತಾಲ್ಲೂಕಿನಲ್ಲಿ ೧೧೯೯೯, ಕೆಜಿಎಫ್ ತಾಲೂಕಿನಲ್ಲಿ ೬೩೭೬, ಕೋಲಾರ ತಾಲ್ಲೂಕಿನಲ್ಲಿ ೧೪೩೩೪, ಮಾಲೂರು ತಾಲ್ಲೂಕಿನಲ್ಲಿ ೧೧೯೮೭, ಮುಳಬಾಗಿಲು ತಾಲೂಕಿನಲ್ಲಿ ೧೮೧೩೬, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೧೦೦೬೮ ಒಟ್ಟು ೭೨೯೦೦ ಮುಂಗಾರು ಗುರಿ ವಿಸ್ತೀರ್ಣ ಹೊಂದಿದೆ ಎಂದು ತಿಳಿಸಿದರು.

ಮೊಬೈಲ್‌ನಲ್ಲೇ ಬೆಳೆ ಸಮೀಕ್ಷೆ

ಜಿಪಿಎಸ್ ಮೂಲಕ ಬೆಳೆ ಸಮೀಕ್ಷೆ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ವಾರ್ಷಿಕವಾಗಿ ೩ ಅವಧಿಗಳಲ್ಲಿ ಸಮೀಕ್ಷೆ ಪಿ.ಆರ್.ಗಳು ತಮ್ಮ ಮೊಬೈಲ್ನಲ್ಲಿ ಬೆಳೆ ಸಮೀಕ್ಷೆಯ ಅಪ್ ಮೂಲಕ ಮಾಡುತ್ತಾರೆ. ರೈತರು ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಇದರಲ್ಲಿ ಅವರ ಬೆಳೆ ನಮೂದಿಸಬೇಕು ಎಂದರು.ಕೃಷಿ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಗಳು ಸೇರಿ ಬೆಳೆಗಳ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿತ್ತು, ಇದರಿಂದ ಬೆಳೆ ಪ್ರದೇಶದ ಅಂಕಿ ಅಂಶಗಳು ಪರಿಪೂರ್ಣ ಮತ್ತು ಸಮರ್ಪಕವಾದ ಚಿತ್ರಣ ಸಿಗುತ್ತಿರಲಿಲ್ಲ. ಆದ್ದರಿಂದ ಸರ್ವೇ/ಉಪಸರ್ವೆ ಸಂಖ್ಯೆವಾರು ಬೆಳೆ ಮಾಹಿತಿ ಪರಿಣಾಮಕಾರಿಯಾಗಿ ಸಂಗ್ರಹಿಸುವ ವ್ಯವಸ್ಥೆ ತರಲು ನಿರ್ಧರಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆಸಮೀಕ್ಷೆ ಅನುಷ್ಠಾನ ಸಮಿತಿಗಳ ಕುರಿತು ಜವಾಬ್ದಾರಿಗಳನ್ನು ತಿಳಿಸಿದರು.ಆಹಾರ ಸಂಸ್ಕರಣಾ ಉದ್ಯಮ

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಆತ್ಮನಿರ್ಭಾರ ಭಾರತ ಯೋಜನೆ ಅಡಿ ಗ್ರಾಮೀಣ ಪ್ರದೇಶದಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆಯನ್ನು ಪ್ರೋತ್ಸಾಹಿಸಲು ಯುವಕರಿಗೆ ಉದ್ಯೋಗಾವಕಾಶ ಮತ್ತು ಮೂಲಸೌಕರ್ಯ ಸೃಷ್ಟಿ ಮಾಡುವ ಸಲುವಾಗಿ ಹೊಸ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಬಲವರ್ಧನೆ ಮತ್ತು ಔಪಚಾರಿಕರಣ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಹೊಸ ಆಹಾರ ಸಂಸ್ಕರಣ ಉದ್ದಿಮೆ ಪ್ರಾರಂಭಿಸಲು ಅಥವಾ ಚಾಲ್ತಿಯಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ೧೮ ವರ್ಷ ಮೇಲ್ಪಟ್ಟವರು ಮತ್ತು ಕನಿಷ್ಠ ಯಾವುದೇ ವಿದ್ಯಾರ್ಹತೆ ಇಲ್ಲದವರು ಅಥವಾ ಸರ್ಕಾರಿ ಯೋಜನೆಗಳಲ್ಲಿ ಸಹಾಯಧನ ಸಂಪರ್ಕಿತ ಬ್ಯಾಂಕ್ ಸಾಲ ಪಡೆದಿದ್ದರೂ ಸಹ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಲ್ಲಿ ಉಪಕರಣಗಳ ಖರೀದಿಗೆ ಪ್ರತಿ ಸದಸ್ಯರಿಗೆ ಗರಿಷ್ಠ ೪೦,೦೦೦ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುವುದು ಮತ್ತು ಒಂದು ಗುಂಪು ಸ್ವ ಸಹಾಯ ಸಂಘಕ್ಕೆ ಗರಿಷ್ಠ ನಾಲ್ಕು ಲಕ್ಷ ಸಾಲ ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.ಎಣ್ಣೆ ಕಾಳು ಬೆಳೆ ಯೋಜನೆ

ಕೇಂದ್ರ ಪುರಸ್ಕೃತ ಕೃಷಿಯನ್ನುತಿ ಅಭಿಯಾನ ಎಣ್ಣೆ ಕಾಳು ಬೆಳೆಯೋಜನೆಯನ್ನು ಹೊಸದಾಗಿ ೨೦೨೪-೨೫ರಿಂದ ೨೦೩೦-೩೧ ರವರೆಗೆ ಅನುಷ್ಠಾನ ಮಾಡಲು ಅನುಮೋದನೆ ನೀಡಿದ್ದು ಆದ್ಯತೆಲಗಳ ಆಮದು ಮಾಡಿಕೊಳ್ಳುವಳ್ಳಿ ದೇಶದ ಅವಲಂಬನೆ ಕಡಿಮೆ ಮಾಡುವುದು, ದೇಶಿ ಎಣ್ಣೆ ಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ತೋಟಗಾರಿಕೆ ಇಲಾಖೆಯ ಕುಮಾರಸ್ವಾಮಿ, ಕೈಗಾರಿಕೆ ಇಲಾಖೆಯ ನಾಗೇಶ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ