ಆಟ್ಯಾಚ್ಮೆಂಟ್ ಕಾರ್ಖಾನೆ ಮುಚ್ಚಬೇಡಿ

KannadaprabhaNewsNetwork |  
Published : Aug 08, 2025, 01:00 AM IST
೭ಕೆಎಲ್‌ಆರ್-೬ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್.ಎನ್.ಗೋಪಾಲಗೌಡ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಈಗಾಗಲೇ ಕಂಪನಿ ಮುಚ್ಚದಂತೆ ಕ್ರಮವಹಿಸಿ ಕಾರ್ಮಿಕರ ರಕ್ಷಣೆ ಮಾಡುವಂತೆ ಮನವಿ ಹೋರಾಟಗಳನ್ನು ನಡೆಸಲಾಗಿದೆ, ಕೂಡಲೇ ಜಿಲ್ಲಾಧಿಕಾರಿಗಳು ಮಾಲೀಕರನ್ನು ಕರೆಸಿ ವರ್ಗ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾಯಂ ಕಾರ್ಮಿಕರಿಗೆ ಕೈಗಾರಿಕೆಯಲ್ಲಿ ಕೆಲಸದಲ್ಲಿ ಮುಂದುವರೆಸುವಂತೆ ಕ್ರಮ ವಹಿಸಬೇಕು ಇಲ್ಲದೇ ಹೋದರೆ ಹೋರಾಟ ಆರಂಭಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಆಟ್ಯಾಚ್ಮೆಂಟ್ ಕಾರ್ಖಾನೆಯಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಷ್ಟ ತೋರಿಸಿ ಅಕ್ರಮವಾಗಿ ಕಾರ್ಖಾನೆ ಮುಚ್ವಲು ಹೊರಟಿದ್ದಾರೆ, ಕೂಡಲೇ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಯಾವುದೇ ಕಾರಣಕ್ಕೂ ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್.ಎನ್.ಗೋಪಾಲಗೌಡ ಒತ್ತಾಯಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು ೨೦ ವರ್ಷದಿಂದ ಕಾರ್ಮಿಕರಾಗಿ ವರ್ಗಾ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಮಾಲೀಕ ವರ್ಗವು ನಷ್ಟದ ನೆಪದಲ್ಲಿ ಕೈಗಾರಿಕೆ ಮುಚ್ಚಲು ಹೊರಟಿದ್ದಾರೆ, ಸುಮಾರು ೮೧ ಕಾಯಂ ಕಾರ್ಮಿಕರನ್ನು ಕೆಲಸದಿಂದ ಹೊರಹಾಕಲು ಮುಂದಾಗಿದ್ದು ಇದು ಕಾರ್ಮಿಕ ವಿರೋಧಿ ನೀತಿ ಎಂದರು.

ಗುತ್ತಿಗೆ ಕಾರ್ಮಿಕರಾಗಿ ಪರಿವರ್ತನೆ

ಕಾರ್ಖಾನೆ ಮುಚ್ಚುವ ಆದೇಶವನ್ನು ಮಾಲೀಕರು ವಾಪಸ್‌ ಪಡೆದು ಕಾರ್ಮಿಕರ ಹಿತ ಕಾಪಾಡಬೇಕು. ಕೈಗಾರಿಕೆಯಲ್ಲಿ ಬುಲ್ಡೋಜರ್ ಬೇಕಾಗುವ ವಿಧ ವಿಧವಾದ ಸಾಮಗ್ರಿಗಳನ್ನು ತಯಾರಿಸಿ ವಿದೇಶಕ್ಕೆ ಕಳುಹಿಸಲಾಗುತ್ತದೆ ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದೆ ಕಂಪನಿಯನ್ನು ಮೂರು ಹೆಸರಿನಲ್ಲಿ ವಿಂಗಡಿಸಲಾಗಿದೆ ವರ್ಗಾ, ೧ ವರ್ಗಾ ೨ ವೀರ್ಯ ಎಂದು ನಾಮಕಾರಣ ಮಾಡಿಕೊಂಡು ಕಾಯಂ ಕಾರ್ಮಿಕರನ್ನು ಕೆಲಸಕ್ಕೆ ರಾಜೀನಾಮೆ ಕೊಡಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಹುನ್ನಾರಗಳಾಗಿವೆ. ಈ ಮೂರು ಕೈಗಾರಿಕೆಗಳ ಮಾಲೀಕರು ಒಂದೇ ಕುಟುಂಬದವರಾಗಿದ್ದು, ಪಾಲುದಾರಿಕೆಯಲ್ಲಿ ನಡೆಯುತ್ತಿವೆ ಎಂದರು.

ಕಾರ್ಮಿಕರನ್ನು ಮುಂದುವರಿಸಲಿ

ಈಗಾಗಲೇ ಕಂಪನಿ ಮುಚ್ಚದಂತೆ ಕ್ರಮವಹಿಸಿ ಕಾರ್ಮಿಕರ ರಕ್ಷಣೆ ಮಾಡುವಂತೆ ಮನವಿ ಹೋರಾಟಗಳನ್ನು ನಡೆಸಲಾಗಿದೆ, ಕೂಡಲೇ ಜಿಲ್ಲಾಧಿಕಾರಿಗಳು ಮಾಲೀಕರನ್ನು ಕರೆಸಿ ವರ್ಗ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾಯಂ ಕಾರ್ಮಿಕರಿಗೆ ಕೈಗಾರಿಕೆಯಲ್ಲಿ ಕೆಲಸದಲ್ಲಿ ಮುಂದುವರೆಸುವಂತೆ ಕ್ರಮ ವಹಿಸಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಾರ್ಖಾನೆಯ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪ್ರಭಾಕರ್, ಶ್ರೀಧರ್ ರಾವ್, ಆಂಜನಪ್ಪ, ಹರೀಶ್ ಇದ್ದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ