ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಲ್ಲ: ಶಾಸಕ ಪೊನ್ನಣ್ಣ

KannadaprabhaNewsNetwork |  
Published : Jan 14, 2024, 01:31 AM IST
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೆಲಜಿ ಯಲ್ಲಿಡಾಮರೀಕರಣಗೊಂಡ  ರಸ್ತೆ ಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಶಾಸಕ ಎ.ಯ ಸ್. ಪೊನ್ನಣ್ಣ ಉದ್ಘಾಟನೆಗೊಳಿಸಿದರು. | Kannada Prabha

ಸಾರಾಂಶ

ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಕ್ಕಬೆ-ನೆಲಜಿ ರಸ್ತೆಯ ಒಂದೂವರೆ ಕಿಲೋ ಮೀಟರ್ ದೂರದ ರಸ್ತೆಯನ್ನು 35 ಲಕ್ಷ ರು. ಅನುದಾನದಲ್ಲಿ ಮರು ಡಾಂಬರೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಗಳು ಜನರಿಗೋಸ್ಕರ ಹೊರತು ಯಾವುದೇ ಪಕ್ಷಗಳಿಗೆ ಅಥವಾ ಯಾವುದೇ ಪಕ್ಷದ ನಾಯಕರಿಗಾಗಿ ಅಲ್ಲ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಕ್ಕಬೆ-ನೆಲಜಿ ರಸ್ತೆಯ ಒಂದೂವರೆ ಕಿಲೋ ಮೀಟರ್ ದೂರದ ರಸ್ತೆಯನ್ನು 35 ಲಕ್ಷ ರು. ಅನುದಾನದಲ್ಲಿ ಮರು ಡಾಂಬರೀಕರಣಗೊಂಡ ರಸ್ತೆಯನ್ನು ಶನಿವಾರ ನಾಪೋಕ್ಲು-ಭಾಗಮಂಡಲ -ಕಕ್ಕಬೆ ಜಂಕ್ಷನ್‌ನ ನೆಲಜಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿ ಪೂರ್ಣಗೊಂಡಿದೆ. ಇದೇ ರೀತಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. ಎರಡು ಮೂರು ತಿಂಗಳಲ್ಲಿ ಆರಂಭಿಸಿದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಈ ಸಂದರ್ಭ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ನಾಪೋಕ್ಲು-ಭಾಗಮಂಡಲ ರಸ್ತೆಯ ಹಳೆ ತಾಲೂಕಿನಿಂದ ಪುಲಿಕೋಟುವರೆಗಿನ ರಸ್ತೆಯ ರಸ್ತೆಗಳ ಗುಂಡಿಯನ್ನು ಒಂದು ತಿಂಗಳ ಒಳಗೆ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಸತೀಶ್ ಅವರಿಗೆ ಆದೇಶ ನೀಡಿದರು.

ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಬಲ್ಲಮಾವಟಿ ವಲಯ ಅಧ್ಯಕ್ಷ ತಾಪಂಡ ಅಪ್ಪಣ್ಣ, ಬೂತ್ ಅಧ್ಯಕ್ಷ ಕೈಬುಳಿರ ಸಾಬು ಗಣಪತಿ, ಪ್ರಮುಖರಾದ ಕೋಟೆರ ರಘು ಚಂಗಪ್ಪ, ನಾಪನೆರವ0ಡ ಮಿಟ್ಟು, ಪಂಜೇರಿರ ಪೂನಚ್ಚ, ನೆರವಂಡ ಉಮೇಶ್, ಮಚ್ಚುರ ರವೀಂದ್ರ, ಎಮ್ಮೆ ಮಾಡು ಜಮಾತ್ ಅಧ್ಯಕ್ಷ ಅಬುಬುಕರ್ ಸಖಾಫಿ, ಬೋಳ್ಳಂಡ ಶರೀನ್, ಬಾಚಮಂಡ ಲವ ಚಿನ್ನಪ್ಪ, ಸೂರಜ್ ಹೊಸೂರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮನವಟ್ಟಿರ ಹರೀಶ್, ಚೇಕ್ ಪುಂಡ ಕಂಬು ನಂಜಪ್ಪ, ಸುನಿಲ್, ಮನವಟ್ಟಿರ ಪಾಪು ಚಂಗಪ್ಪ, ದಯಾ ಕುಟ್ಟಪ್ಪ, ಸ್ವರೂಪ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸತೀಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ