ಸಮಾಜ ಬಗ್ಗೆ ನಮ್ಮ ಹೊಣೆಗಾರಿಕೆ ಮರೆಯಬೇಡಿ: ಬ್ರಜೇಶ್ ಸಿಂಗ್

KannadaprabhaNewsNetwork |  
Published : Apr 26, 2026, 02:30 AM IST
ಪೊಟೋ: 26ಎಸ್‌ಎಂಜಿಕೆಪಿ01 ಹಿರಿಯ ವಿದ್ಯಾರ್ಥಿಗಳಾದ ಸಿಂಗಾಪುರದ ಯುನಿವರ್ಸಲ್ ಟೆಕ್ನಾಲಜಿ ಸೊಲ್ಯುಶನ್ ಕಂಪನಿ ಸಮೂಹ ವ್ಯವಸ್ಥಾಪಕ‌ ನಿರ್ದೇಶಕ ಬ್ರಜೇಶ್ ಸಿಂಗ್ ಹಾಗೂ ನವದೆಹಲಿಯ ಇನ್ನೊಗ್ರೆಸ್ ಕಂಪನಿ ಸ್ಥಾಪಕ ಸುಮಂತ್ ಪರಿಮಳ್ ಅವರನ್ನು ಅತಿಥಿಗಳು ಅಭಿನಂದಿಸಿದರು. | Kannada Prabha

ಸಾರಾಂಶ

ನಮ್ಮೊಳಗಿರುವ ಶಕ್ತಿಯನ್ನು ಸಮಾಜಕ್ಕೆ ಹೇಗೆ ಅರ್ಪಿಸಬೇಕು ಎಂಬ ಹೊಣೆಗಾರಿಕೆ ಎಲ್ಲರಲ್ಲೂ ಮುಖ್ಯ ಎಂದು ಸಿಂಗಾಪುರದ ಯುನಿವರ್ಸಲ್ ಟೆಕ್ನಾಲಜಿ ಸೊಲ್ಯುಶನ್ ಕಂಪನಿ ಸಮೂಹ ವ್ಯವಸ್ಥಾಪಕ‌ ನಿರ್ದೇಶಕ ಬ್ರಜೇಶ್ ಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮೊಳಗಿರುವ ಶಕ್ತಿಯನ್ನು ಸಮಾಜಕ್ಕೆ ಹೇಗೆ ಅರ್ಪಿಸಬೇಕು ಎಂಬ ಹೊಣೆಗಾರಿಕೆ ಎಲ್ಲರಲ್ಲೂ ಮುಖ್ಯ ಎಂದು ಸಿಂಗಾಪುರದ ಯುನಿವರ್ಸಲ್ ಟೆಕ್ನಾಲಜಿ ಸೊಲ್ಯುಶನ್ ಕಂಪನಿ ಸಮೂಹ ವ್ಯವಸ್ಥಾಪಕ‌ ನಿರ್ದೇಶಕ ಬ್ರಜೇಶ್ ಸಿಂಗ್ ಹೇಳಿದರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ‘ಪವರ್ ಮೀಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನೆಕ್ಟಿಂಗ್ ಡಾಟ್ಸ್ ಎಂಬ ಎನ್‌ಜಿಒ ಮೂಲಕ ನೂರಾರು ಕುಟುಂಬಗಳಿಗೆ ನಿರಂತರ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ‌. ಜನರ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದಾಗ, ಎಲ್ಲವೂ ದಾಖಲೆಗಳಲ್ಲಿ ಸರಿಯಾಗಿದೆ ಎಂಬ ಉತ್ತರಗಳು ಬಂದವು. ಆದರೆ ವಾಸ್ತವದಲ್ಲಿ ಏನೂ ಸರಿಯಾಗಿರಲಿಲ್ಲ. ನೀತಿಗಳು ಉತ್ತಮವಾಗಿದ್ದರೂ, ಅವುಗಳ ಅನುಷ್ಠಾನದಲ್ಲಿ ಕೊರತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದತ್ತ ನಮ್ಮ ಬದ್ಧತೆಯನ್ನು ತೋರಿಸಬೇಕಿದೆ ಎಂದು ಹೇಳಿದರು.

ನವದೆಹಲಿಯ ಇನ್ನೊಗ್ರೆಸ್ ಕಂಪನಿ ಸ್ಥಾಪಕ ಸುಮಂತ್ ಪರಿಮಳ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಅಧ್ಯಯನಕ್ಕೆ ಸೀಮಿತವಾಗದೆ, ನಮ್ಮದೇ ಕನಸುಗಳನ್ನು ನಿರ್ಮಿಸಿಕೊಳ್ಳಿ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಭಾರತವು ಜಾಗತಿಕ ವೇದಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಮ್ಮ ಬುದ್ಧಿಶಕ್ತಿಯು ರೋಬೋಟಿಕ್ಸ್ ಮತ್ತು ಎಐ ವ್ಯವಸ್ಥೆಗಳೊಂದಿಗೆ ಒಂದಾಗುತ್ತಿದೆ. ಅವುಗಳು ನಮ್ಮ ಪರವಾಗಿ ಕೆಲಸ ಮಾಡುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆಯುತ್ತಿದೆ. ಎಐ ಎಂಬುದು ಬುದ್ದಿ ಮತ್ತು ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿದೆ. ವಾಸ್ತವದಲ್ಲಿ ಕೇವಲ ಕಂಪ್ಯೂಟ್ ಪವರ್ ಬಗ್ಗೆ ಮಾತ್ರವಲ್ಲ, ನಿಜವಾದ ವಿದ್ಯುತ್ ಶಕ್ತಿಯನ್ನು ಎಲ್ಲಿಂದ ಪಡೆಯುವುದು ಎಂಬ ಬಗ್ಗೆ ಚಿಂತಿಸಬೇಕಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಎನ್ಇಎಸ್ ನಿರ್ದೇಶಕ ಟಿ.ಆರ್‌.ಅಶ್ವಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ.ಸುರೇಶ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಬಸಪ್ಪಾಜಿ ಹಾಜರಿದ್ದರು.

ಪ್ರೇರಣೆ ನೀಡಿದ ಹಿರಿಯ ವಿದ್ಯಾರ್ಥಿಗಳ ಯಶೋಗಾಥೆ

ಪ್ರತಿಷ್ಠಿತ ಉದ್ಯಮಿಗಳಾಗಿ, ಕಲಾವಿದರಾಗಿ, ಅಭಿಯಂತರರಾಗಿ, ಮೆಸ್ಕಾಂ ಬೆಸ್ಕಾಂ ಸೇರಿದಂತೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ನೂರಾರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ವಿದ್ಯಾರ್ಥಿಗಳು ತಮ್ಮ ಯಶಸ್ಸಿನ ಹಾದಿಯ ದುರ್ಗಮತೆಯನ್ನು ಕಿರಿಯ ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು.

ಅನೇಕ ಉದ್ಯೋಗವಕಾಶ ಕೋರಿದ ಅರ್ಜಿಗಳು, ಸಂವಹನ ಮತ್ತು ಸೃಜನಾತ್ಮಕ ಕೌಶಲ್ಯಗಳ ಕೊರತೆಯಿಂದ ತಿರಸ್ಕೃತವಾಗುತ್ತವೆ. ಉದ್ಯೋಗ ನೀಡುವ ಸಂಸ್ಥೆ ಕೇವಲ ಅಂಕಗಳನ್ನು ಮಾತ್ರ ಪರಿಗಣಿಸುವುದಿಲ್ಲ; ಒಟ್ಟಾರೆ ಸಾಮರ್ಥ್ಯವನ್ನು ಗಮನಿಸುತ್ತವೆ. ಸಂವಹನ ಕೌಶಲ್ಯತೆ ಎಂಬುದು ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಜೊತೆಯಲ್ಲಿ ಪ್ರಾದೇಶಿಕ ಭಾಷೆಗಳ ಪ್ರೌಢಿಮೆಯು ಅತ್ಯಂತ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರಿನಲ್ಲಿ ಶಂಕರಾಚಾರ್ಯರ ಜಯಂತಿ
ಭ್ರಷ್ಟಾಚಾರದ ವಿರುದ್ಧ ಹೋರಾಟಲು ಸಿದ್ಧ ಎಂದ ಕನಾಯ್ಕನಹಳ್ಳಿ ಪ್ರದೀಪ್