4 ವರ್ಷ ಒಳಗಿನ ಮಕ್ಕಳಿಗೆ ವೈದ್ಯರ ಕೇಳದೆ ಕೆಮ್ಮು ಸಿರಪ್‌ ಕೊಡಬೇಡಿ

KannadaprabhaNewsNetwork |  
Published : Oct 05, 2025, 01:00 AM IST
ವೈದ್ಯರು | Kannada Prabha

ಸಾರಾಂಶ

ವೈದ್ಯರ ಸೂಚನೆ ಇಲ್ಲದೆ ಯೂಟ್ಯೂಬ್‌, ಗೂಗಲ್‌ ನೋಡಿಕೊಂಡು ಅಥವಾ ಇನ್ನೊಬ್ಬರ ಸಲಹೆ ಮೇರೆಗೆ ಮಕ್ಕಳಿಗೆ ಕೆಮ್ಮಿನ ಔಷಧಿ ಕೊಡದಂತೆ ಮಕ್ಕಳ ವೈದ್ಯರು ಎಚ್ಚರಿಸಿದ್ದಾರೆ. - ಯೂಟ್ಯೂಬ್‌, ಗೂಗಲ್‌ ಮಾಹಿತಿ ಕೇಳಬೇಡಿ: ವೈದ್ಯರ ಸಲಹೆ- ಡೋಸ್‌ ಬಗ್ಗೆ ಮಾಹಿತಿ ಗೊತ್ತಿಲ್ಲದೆ ಮಕ್ಕಳಿಗೆ ಕೊಡದಂತೆ ಸಲಹೆ

  ಬೆಂಗಳೂರು :  ವೈದ್ಯರ ಸೂಚನೆ ಇಲ್ಲದೆ ಯೂಟ್ಯೂಬ್‌, ಗೂಗಲ್‌ ನೋಡಿಕೊಂಡು ಅಥವಾ ಇನ್ನೊಬ್ಬರ ಸಲಹೆ ಮೇರೆಗೆ ಮಕ್ಕಳಿಗೆ ಕೆಮ್ಮಿನ ಔಷಧಿ ಕೊಡದಂತೆ ಮಕ್ಕಳ ವೈದ್ಯರು ಎಚ್ಚರಿಸಿದ್ದಾರೆ.

ಜ್ವರ, ಕೆಮ್ಮು, ನೆಗಡಿ ಆದಾಗ ಕೆಮ್ಮಿನ ಔಷಧ, ಆ್ಯಂಟಿ ಬಯೋಟಿಕ್‌ಗಳನ್ನು ಔಷಧ ಮಳಿಗೆಗಳಿಂದ ಖರೀದಿ ಮಾಡುವ ಪರಿಪಾಠ ನಿಲ್ಲಿಸಬೇಕು. ನಿಗದಿತ ಡೋಸ್‌ ಮಾಹಿತಿ ಇಲ್ಲದೆ ಸಿರಪ್‌ಗಳನ್ನು ನೀಡಲೇಬಾರದು ಎಂದು ಸಲಹೆ ನೀಡಿದ್ದಾರೆ.

ಮಕ್ಕಳ ತಜ್ಞ ಡಾ.ಶಶಿಭೂಷಣ, ವಿಶೇಷವಾಗಿ 2-4 ವರ್ಷ ಒಳಗಿನ ಕೆಮ್ಮಿನ ಔಷಧಿಯನ್ನು ಮಕ್ಕಳಿಗೆ ಕೊಡಬಾರದು. ಈ ಔಷಧಿಗಳು ಕಫವನ್ನು ದೇಹದಿಂದ ಹೊರಹಾಕದೆ ಒಳಗೇ ಉಳಿಸುತ್ತವೆ. ಔಷಧಿಯಲ್ಲಿರುವ ಕೆಲ ಅಂಶಗಳು ಉಸಿರಾಟಕ್ಕೆ ತೊಂದರೆ ಕೊಡುತ್ತವೆ. ವಿಶೇಷವಾಗಿ ಎರಡು ವರ್ಷದ ಮಕ್ಕಳಿಗೆ ಕೆಮ್ಮು ನಿಲ್ಲಿಸಲು ಔಷಧ ಕೊಡಲೇಬಾರದು. ಜತೆಗೆ 3-6 ತಿಂಗಳ ಮೊದಲು ಬರೆದುಕೊಟ್ಟ ಚೀಟಿ ನೋಡಿ ಔಷಧ ಪಡೆಯಲೇಬೇಡಿ ಎಂದು ಎಚ್ಚರಿಸಿದ್ದಾರೆ.

ಕೆಮ್ಮಿನ ಔಷಧಿ ದೇಹದ ಇತರೆ ಭಾಗಗಳಿಗೆ ಹೋಗಲು ಅದರಲ್ಲಿ ಸಾಲ್ವೆಂಟ್‌, ಡೈಲ್ಯುಂಟ್‌ ಎಂಬ ಅಂಶಗಳನ್ನು ಬಳಸಲಾಗುತ್ತದೆ. ಆದರೆ ದುರ್ಘಟನೆಗೆ ಕಾರಣವಾದ ಔಷಧದಲ್ಲಿರುವ ಕೆಲ ಅಂಶಗಳಿಂದ ಆಕಸ್ಮಿಕವಾಗಿಯೋ ಅಥವಾ ಗೊತ್ತಿಲ್ಲದೆಯೋ ಮೂತ್ರಪಿಂಡಕ್ಕೆ ಹಾನಿಯಾಗಿ ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಹೇಳಿದರು.

ಮಕ್ಕಳ ಕೆಮ್ಮಿನ ತಜ್ಞ ಡಾ.ಗಣೇಶ್‌ ಪ್ರತಾಪ್‌, ಎರಡು ವರ್ಷದ ಕಡಿಮೆ ಮಕ್ಕಳಿಗೆ ಅವರ ತೂಕಕ್ಕೆ ಅನುಗುಣವಾಗಿ ಔಷಧಿ ನೀಡಲಾಗುತ್ತದೆ. ಇಲ್ಲದಿದ್ದರೆ ಓವರ್‌ಡೋಸ್ ಆದಲ್ಲಿ ಮಕ್ಕಳಿಗೆ ನಿದ್ರಾಜನಕ, ಪಿಟ್ಸ್‌, ಕೈ ನಡುಕದಂಥ ಲಕ್ಷಣಗಳು ಕಂಡುಬರುತ್ತವೆ. ತಕ್ಷಣ ಪಾಲಕರು ಎಚ್ಚೆತ್ತುಕೊಳ್ಳಬೇಕು. ಕೆಮ್ಮಿನ ಔಷಧದಿಂದ ಸಾವು-ನೋವು ನೋಡುತ್ತಿರುವುದು ಇದೇ ಮೊದಲು ಎಂದರು.

ಹಾಗೆಂದು ಪಾಲಕರು ಗಾಬರಿಯಾಗಿ ವೈದ್ಯರು ಕೊಟ್ಟ ಔಷಧವನ್ನೂ ತಿರಸ್ಕರಿಸುವ ಅಗತ್ಯವಿಲ್ಲ. 1 ವರ್ಷದೊಳಗಿನ ಮಕ್ಕಳಿಗೆ ಡ್ರಾಪ್‌ (ಲಸಿಕೆ) ಹಾಕುವುದು ಸೇರಿ ಇತರೆ ಚಿಕಿತ್ಸೆಗಳಿವೆ. ಅದರ ಬಗ್ಗೆ ತಿಳಿದು ಮಕ್ಕಳ ತಜ್ಞರ ಬಳಿ ತೋರಿಸಬೇಕು. ಮಕ್ಕಳಲ್ಲಿ ಕಾಣುವ ವೈರಲ್‌ ಫೀವರ್‌ಗೂ ಇದನ್ನೇ ಪಾಲಿಸಬೇಕು. ಬೇರೆ ಮಗುವಿಗೆ ತಂದ ಔಷಧವನ್ನು ಇನ್ನಾವುದೋ ಮಗುವಿಗೆ ನೀಡಬಾರದು. ಒಣಕೆಮ್ಮು ಸೇರಿ ಇತರೆ ಕೆಮ್ಮುಗಳಿಗೆ ಆಯಾ ಔಷಧವನ್ನೇ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ವೈದ್ಯರು ಹೇಳೋದೇನು?- ಕೆಮ್ಮಿನ ಔಷಧಿ, ಆ್ಯಂಟಿ ಬಯೋಟಿಕ್‌ಗಳನ್ನು ಮೆಡಿಕಲ್‌ಗಳಿಂದ ನೇರ ಖರೀದಿಸಬೇಡಿ- 2 ವರ್ಷದ ಮಕ್ಕಳಿಗೆ ಯಾವುದೇ ಕಾರಣಕ್ಕೂ ಕೆಮ್ಮಿನ ಔಷಧ ಕೊಡಲೇಬಾರದು- 3-6 ತಿಂಗಳ ಮೊದಲು ಬರೆದುಕೊಟ್ಟ ಚೀಟಿ ನೋಡಿ ಔಷಧ ಪಡೆಯಲೇಬಾರದು- 2ಕ್ಕಿಂತ ಕಡಿಮೆ ವರ್ಷದ ಮಕ್ಕಳಿಗೆ ತೂಕಕ್ಕೆ ಅನುಗುಣವಾಗಿ ಔಷಧಿ ನೀಡಲಾಗುತ್ತದೆ- ಓವರ್‌ಡೋಸ್‌ ಆದಲ್ಲಿ ನಿದ್ರಾಜನಕ, ಪಿಟ್ಸ್‌, ಕೈ ನಡುಕದಂಥ ಲಕ್ಷಣಗಳು ಬರುತ್ತವೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ