ಕನ್ನಡಪ್ರಭ ವಾರ್ತೆ ರಾಮದುರ್ಗ
ತಾಲೂಕಿನ ಚಿಪ್ಪಲಕಟ್ಟಿ ಗ್ರಾಮದಲ್ಲಿ ನೂತನ ನಿರ್ಮಿಸಿರುವ ರಾಜವೀರ ಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಾತಿ ಜಾತಿ ಎಂದು ಹೋರಾಟ ಮಾಡಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಅದನ್ನೆಲ್ಲ ಮೀರಿ ಒಂದಾಗಿ ಹೋರಾಡಿದ ಫಲವೇ ಸ್ವಾತಂತ್ರ ದೊರಕಿದೆ. ದೇಶದ ಸ್ವಾತಂತ್ರ್ಯ ಮತ್ತು ಏಕತೆಗಾಗಿ ಶ್ರಮಿಸಿದ್ದಾರೆ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಭಗೀರಥರು, ಬಾಬಾಸಾಹೇಬ್ ಅಂಬೇಡ್ಕರ್, ಶಿವಾಜಿ ಮಹಾರಾಜರಂತ ಮಹಾನ್ ಪುರುಷರನ್ನು ಕೇವಲ ಒಂದೇ ಜಾತಿಗೆ ಸೇರಿಸಬಾರದು. ಅವರೆಲ್ಲರೂ ಮನುಕುಲದ ಆಸ್ತಿಯಾಗಿದ್ದಾರೆ. ಆದ್ದರಿಂದ ಎಲ್ಲರನ್ನೂ ಗೌರವಿಸೋಣ ಎಂದು ಹೇಳಿದರು.ರಾಮದುರ್ಗ ತಾಲೂಕಿನ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಈ ದಿಸೆಯಲ್ಲಿ ನಮ್ಮ ತಂಡ ಕಾರ್ಯ ಮಾಡುತ್ತಿದೆ. ಈಗಾಗಲೇ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ, ಟಿಎಪಿಸಿಎಂಎಸ್, ಪಿಕಾರ್ಡ್ ಚುನಾವಣೆಗಳನ್ನು ಎದುರಿಸಿದ್ದು, ನಮ್ಮ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ನೀರಾವರಿ, ಶಿಕ್ಷಣ, ರಸ್ತೆಗಳ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ತಾಲೂಕಿನ ಪ್ರಗತಿಗಾಗಿ ಶಕ್ತಿಮೀರಿ ದುಡಿಯಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ, ಜಾತಿಬೇಧ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಚಿಪ್ಪಲಕಟ್ಟಿಯ ಕಲ್ಮೇಶ್ವರ ಮಹಾಸ್ವಾಮಿಗಳು, ಭಾಗೋಜಿಕೊಪ್ಪದ ಡಾ.ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತೊಂಡಿಕಟ್ಟಿಯ ವೆಂಕಟೇಶ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಮಾಜದ ಹಿರಿಯ ಭೀಮಪ್ಪ ಸಿಂಗಾರಿ, ಬಿಜೆಪಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಪಾಟೀಲ, ಸಿ.ಬಿ.ಪಾಟೀಲ, ಪಿ.ಎಫ್.ಪಾಟೀಲ, ಗೋಪಾಲ ಸಂಸಿ, ಶಂಕರಗೌಡ ಪಾಟೀಲ, ಬಸವರಾಜ ಸೋಮಗೊಂಡ, ಪಿ.ಎಫ್.ಜಗತಾಪ್, ರಮೇಶ ಅಣ್ಣಿಗೇರಿ, ಬಿ.ಎಸ್.ಬೆಳವಣಕಿ, ಪರುತಗೌಡ ಪಾಟೀಲ, ರಮೇಶ ದೇಶಪಾಂಡೆ, ಭೀಮಶೆಪ್ಪ ಬಸಿಡೋಣಿ, ಎಸ್.ಎಸ್.ಢವಣ, ವೆಂಕನಗೌಡ ಪಾಟೀಲ, ರಾಜಶೇಖರ ತಳವಾರ, ಪ್ರಕಾಶ ತಳವಾರ, ಮಹಾದೇವ ಗೊಡೇರ, ಬಸು ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.----------ಕೋಟ್ಮುಂದಿನ 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಫಿಕ್ಸ್. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನ ಬೇಸತ್ತಿದ್ದು, ಮುಂದಿನ 2028ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ. ರಾಮದುರ್ಗದಲ್ಲಿ ಬಿಜೆಪಿ ಶಾಸಕರ ಆಯ್ಕೆ ನಿಶ್ಚಿತ.ಬಾಲಚಂದ್ರ ಜಾರಕಿಹೊಳಿ, ಶಾಸಕ, ಬೆಮುಲ್ ಅಧ್ಯಕ್ಷ