ಮಕ್ಕಳನ್ನು ಕೇವಲ ಅಂಕಗಳ ಮೂಲಕ ಅಳೆಯದೇ, ಅವರಲ್ಲಿ ಉತ್ತಮವಾದ ಮೌಲ್ಯ ಮತ್ತು ಸಂಸ್ಕಾರವನ್ನು ಬೆಳೆಸುವುದು ಪ್ರತಿಯೊಬ್ಬ ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಸಾಧಕ ಪ್ರಶಸ್ತಿ ಪುರಸ್ಕೃತ ಡಾ.ದೀಪಕಕುಮಾರ ಚವ್ಹಾಣ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಕ್ಕಳನ್ನು ಕೇವಲ ಅಂಕಗಳ ಮೂಲಕ ಅಳೆಯದೇ, ಅವರಲ್ಲಿ ಉತ್ತಮವಾದ ಮೌಲ್ಯ ಮತ್ತು ಸಂಸ್ಕಾರವನ್ನು ಬೆಳೆಸುವುದು ಪ್ರತಿಯೊಬ್ಬ ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ ಎಂದು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಸಾಧಕ ಪ್ರಶಸ್ತಿ ಪುರಸ್ಕೃತ ಡಾ.ದೀಪಕಕುಮಾರ ಚವ್ಹಾಣ ಹೇಳಿದರು.ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯ 6ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಬೇಕು. ಮಾನವಿ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಪ್ರಜೆಯನ್ನಾಗಿ ಬೆಳಸಬೇಕು ಎಂದು ಸಲಹೆ ನೀಡಿದರು.ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶರತ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಮನೆಯಂಗಳದ ನಂದಾದೀಪಗಳು. ಅವರ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ತುಂಬ ಮಹತ್ವದು ಎಂದು ತಿಳಿಸಿದರು.ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕ ಭರತ ಬಿರಾದಾರ, ಸಿದ್ಧಣ ದೇಸಾಯಿ, ನಿಖಿಲ್ ಶೇಖದಾರ, ದಿವ್ಯಾ ಬಿರಾದಾರ, ಡಾ.ವಿಷ್ಣುಪ್ರಿಯಾ ಬಿರಾದಾರ, ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಮರಪಾರಾ ಖಾಜಿ ನಿರೂಪಿಸಿದರು. ಪ್ರಾಂಶುಪಾಲ ರಿಜೇಶ್.ಪಿ.ಎನ್ ಸ್ವಾಗತಿಸಿದರು.ಮಕ್ಕಳನ್ನು ಕೇವಲ ಅಂಕಗಳ ಮೂಲಕ ಅಳೆಯದೇ, ಅವರಲ್ಲಿ ಉತ್ತಮವಾದ ಮೌಲ್ಯ ಮತ್ತು ಸಂಸ್ಕಾರವನ್ನು ಬೆಳೆಸುವುದು ಪ್ರತಿಯೊಬ್ಬ ಪಾಲಕರ ಮತ್ತು ಶಿಕ್ಷಕರ ಆದ್ಯ ಕರ್ತವ್ಯ.
-ಡಾ.ದೀಪಕಕುಮಾರ ಚವ್ಹಾಣ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಸಾಧಕ ಪ್ರಶಸ್ತಿ ಪುರಸ್ಕೃತರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.