ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇವರಿಗೆ ಉತ್ತರ ನೀಡಬೇಕಿಲ್ಲ
ಉನ್ನತ ಶಿಕ್ಷಣ ಇಲಾಖೆಯಲ್ಲಿ ನಾನೆಷ್ಟು ಉದ್ಯೋಗ ಕೊಡಿಸಿದ್ದೇನೆ ಎಂದು ನಿವೃತ್ತ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ನನ್ನ ಇಲಾಖೆಯಲ್ಲಿ ನಾನು ಏನು ಮಾಡುತ್ತಿದ್ದೇನೆ.ಉದ್ಯೋಗ ಲಭ್ಯತೆಗೆ, ಮಕ್ಕಳಿಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಇವರಿಗೆ ನಾನು ಉತ್ತರ ಕೊಡುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು. ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೈಗಾರಿಕೆಗಳನ್ನು ತರಬೇಕು ಎಂದು 10 ವರ್ಷದ ಹಿಂದೆಯೇ ಪ್ರಯತ್ನಿಸಿದವನು ನಾನು. ಈ ಸಂಬಂಧ ಅಧಿಸೂಚನೆ ತಂದೆ. ಆದರೆ 10 ವರ್ಷಕಾಲ ಅದನ್ನು ಹಾಳು ಮಾಡಿದರು. ಕನಿಷ್ಟ ವಿದ್ಯುತ್ ಒದಗಿಸುವ ಕೆಲಸ ಮಾಡಲಿಲ್ಲ. ಅದರ ಬಗ್ಗೆ ನಾನು ಹೇಳಿದ್ದೇನೆ. ಕೈಗಾರಿಕೆಗಳು ಇಲ್ಲಿ ಬರಲು ನೀವು ಸಹಕಾರ ನೀಡಲಿಲ್ಲ, ರೈತರಿಗೆ ನೀಡಬೇಕಾದ ಪರಿಹಾರದ ಸಮಸ್ಯೆ ನೀವಾರಣೆ ಮಾಡಲಿಲ್ಲ. ಯಾವುದೂ ಮಾಡದೆ, ಮಕ್ಕಳು ಮನೆ ಸಮೀಪದಲ್ಲಿಯೇ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ತಪ್ಪಿಸಿ, ದೂರದಲ್ಲಿ ಉದ್ಯೋಗ ದೊರೆಯುವಂತೆ ಮಾಡಲು ಮೇಳ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.ಅಮಾಯಕರಿಗೆ ಪ್ರಚೋದನೆ
ಯಾವ ತರಹದ ಉದ್ಯೋಗಉದ್ಯೋಗ ಮೇಳದ ಫಲಿತಾಂಶ ನನಗೆ ಗೊತ್ತಿದೆ. ಈವತ್ತು ಉದ್ಯೋಗ ಬೇಕಾದರೆ ಕೌಶಲ್ಯ ಬೇಕಾಗುತ್ತದೆ. ನಿರುದ್ಯೋಗ ಯುವಕರಲ್ಲಿ ಈ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ತುಂಬಲು ನಾವು ಶ್ರಮಿಸುತ್ತಿದ್ದೇವೆ. ಕಾಟಾಚಾರಕ್ಕೆ ಉದ್ಯೋಗ ಮಾಡಿದರೆ ಸಾಲದು. ಆಯ್ತು, ನಿನ್ನೆಯ ಉದ್ಯೋಗ ಮೇಳದಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ, ಯಾವ ತರದ ಉದ್ಯೋಗ ನೀಡಿದ್ದಾರೆ ಹೇಳಿ ನೋಡೋಣ. ಕಳೆದ ಎರಡುವರೆ ವರ್ಷದಲ್ಲಿ ತಾವು ತಮ್ಮ ಕೈಲಾದ ಮಟ್ಟಿಗೆ ಫಾಕ್ಸ್ಕಾನ್, ವಿಸ್ಟ್ರಾನ್ ಕಂಪನಿ ಸೇರಿ ಬೇರೆ ಬೇರೆ ಕಂಪನಿಗಳಲ್ಲಿ ನೇರವಾಗಿ ಉದ್ಯೋಗ ಕೊಡಿಸಿದ್ದೇನೆ ಎಂದರು. ಬೂಟಾಟಿಕೆಯ ಉದ್ಯೋಗ ಮೇಳ
ಚಿಂತಾಮಣಿಯಲ್ಲಿ ಶನಿವಾರ ಆಗಿದ್ದು ಬೂಟಾಟಿಕೆಯ ಉದ್ಯೋಗ ಮೇಳವಾಗಿದೆ,ಇದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವು ಅವಕಾಶಗಳಿಲ್ಲ. ನಾವು ಇವತ್ತು ಪಠ್ಯಗಳಲ್ಲಿ ಬದಲಾವಣೆ ತರುತ್ತಿದ್ದೇವೆ. ಕೈಗಾರಿಕೆ ಮತ್ತು ಶಿಕ್ಷಣ ಒಟ್ಟಿಗೆ ಸೇರಿ ಮಕ್ಕಳಿಗೆ ಉದ್ಯೋಗ ಲಭಿಸುವಂತಹ ರೀತಿಯಲ್ಲಿ ಶಿಕ್ಷಣ ಕೊಡುತ್ತಿದ್ದೇವೆ. ಉದ್ಯೋಗ ದಾತರು ಕೇಳುವ ಪ್ರಶ್ನೆಗೆ ತೃಪ್ತಿಯಾಗುವಂತೆ ಉತ್ತರ ನೀಡುವ ಆತ್ಮಸ್ಥೈರ್ಯ ಬೆಳೆಸುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಸ್ಕಿಲ್ಲಿಂಗ್, ಅಪ್‌ಸ್ಕಿಲ್ಲಿಂಗ್, ರೀಸ್ಕಿಲ್ಲಿಂಗ್ ಬೆಳೆಸಲು ಉನ್ನತ ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಇದನ್ನು ಮನಗಾಣದೆ ಟೀಕೆ ಮಾಡುವುದು ಸರಿಯಿಲ್ಲ ಎಂದು ಹೇಳಿದರು