ನಾಡಿನ ನೆಲ, ಜಲ, ಗಡಿಗಾಗಿ ಹೋರಾಡಿದವರ ಸ್ಮರಣೆ ಅಗತ್ಯ: ಕಸಾಪ ಅಧ್ಯಕ್ಷ ರವಿ ದಳವಾಯಿ

KannadaprabhaNewsNetwork |  
Published : Aug 11, 2025, 12:30 AM IST
ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ | Kannada Prabha

ಸಾರಾಂಶ

ಇತಿಹಾಸವನ್ನು ತಿಳಿಯಲು ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಾಗ ಮಾತ್ರ ಸಾಧ್ಯ, ವಿದ್ಯಾರ್ಥಿಗಳು ಕಥೆ, ಕವನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು.

ಕನ್ನಡಪ್ರಭ ವಾರ್ತೆ ತರೀಕೆರೆ

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಸಮೀಪದ ಉಡೇವ ಪಟೇಲ್ ಮೂಡ್ಲೇಗೌಡರ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಶಿಕ್ಷಕರಾದ ಎಂ.ಇ.ರಮೇಶ್ ಹೇಳಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕ ಲಿಂಗದಹಳ್ಳಿ ವತಿಯಿಂದ ಸಮೀಪದ ಉಡೇವ ಪಟೇಲ್ ಮೂಡ್ಲೇಗೌಡರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಚಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಪ್ರಾಚೀನ ಕಾಲದಲ್ಲಿ ಕನ್ನಡ ನಾಡು, ಕಾವೇರಿಯಿಂದ ಉತ್ತರದ ಗೋದಾವರಿಯವರೆಗೆ ಹಬ್ಬಿತ್ತು ಎನ್ನುವುದನ್ನು ಕನ್ನಡದ ಮೊದಲ ಕೃತಿ ಕವಿರಾಜಮಾರ್ಗದಲ್ಲಿ ವಿವರಿಸಿದ್ದಾರೆ. ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತಮತಿಗಳ್ ಅಂದರೆ ಕನ್ನಡ ನಾಡಿನ ಜನ ಸಾಹಿತ್ಯಾತ್ಮಕವಾಗಿ ಮಾತನಾಡುತ್ತಾರೆ ಎಂದು ಕವಿರಾಜ ಮಾರ್ಗದ ಕತೃ ಶ್ರೀವಿಜಯ ಹೇಳಿದ್ದಾರೆ, ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿವೆ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಚುಟುಕು ಸಾಹಿತ್ಯ ಎಂಬಿತ್ಯಾದಿ, ಆದಿಕವಿ ಪಂಪ ಕನ್ನಡದ ಬಗ್ಗೆ ಅದ್ಭುತ ಸಾಲುಗಳನ್ನು ಹೇಳುತ್ತಾರೆ, ಆರಂಕುಶವಿಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಂ ಎನ್ನುತ್ತಾರೆ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಪಂಪನಿಂದ ಹಿಡಿದು ಇವತ್ತಿನ ಕವಿ ಲೇಖಕರವರೆಗೂ ಸಲ್ಲುತ್ತದೆ ಎಂದು ಅವರು ಹೇಳಿದರು.

ಲಿಂಗದಹಳ್ಳಿ ಹೋಬಳಿ ಕಸಾಪ ಅಧ್ಯಕ್ಷ ತಮ್ಮಯ್ಯ ಕಾರ್ಯಕ್ರಮದ ಉದ್ಗಾಟನೆ ನೆರವೇರಿಸಿ ಮಾತನಾಡಿ, ಇತಿಹಾಸವನ್ನು ತಿಳಿಯಲು ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಾಗ ಮಾತ್ರ ಸಾಧ್ಯ, ವಿದ್ಯಾರ್ಥಿಗಳು ಕಥೆ, ಕವನಗಳನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಬೇಕು ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಶಾಲಾ ಕಾಲೇಜಿನ ಮಕ್ಕಳ ಮನಸ್ಸಿಗೆ ಸಾಹಿತ್ಯ ವಿಚಾರ ಮುಟ್ಟಿಸುವ ಕೆಲಸವನ್ನು ತಾಲೂಕಿನ ವಿವಿಧ ಸ್ಥಳಗಳಲ್ಲಿ ಏರ್ಪಡಿಸಿ ಜನರಿಗೆ ಕನ್ನಡ ಭಾಷೆಯ ಚರಿತ್ರೆ, ಕನ್ನಡ ಉಳಿವಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ, ಕನ್ನಡ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿ ಕನ್ನಡ ನಾಡಿನ ನೆಲ, ಜಲ, ಗಡಿಗಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ಅವರು ಹೇಳಿದರು.

ಎಸ್.ಡಿ.ಎಂ.ಸಿ.ಅಧ್ಯಕ್ಷರು ಓಂಕಾರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳೆಲ್ಲರೂ ಕನ್ನಡ ಶಾಲೆಯಲ್ಲಿ ಓದಬೇಕು, ಕನ್ನಡ ಪುಸ್ತಕಗಳನ್ನು ಓದಬೇಕು, ನಮ್ಮ ಭಾಷೆಯನ್ನು ಹೆಚ್ಚು ಬಳಸಬೇಕು, ಹಾಗಾದಾಗ ಮಾತ್ರ ನಮ್ಮ ಭಾಷೆ ಉಳಿಯುತ್ತದೆ, ಬೆಳೆಯುತ್ತದೆ ಹಾಗಾಗಿ ನಾವೆಲ್ಲರೂ ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಹೊಂದಿ ಇದನ್ನು ಬಳೆಸೋಣ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಕನ್ನಡದ ಗಾದೆ ಮಾತುಗಳನ್ನು ಪೂರ್ಣಗೊಳಿಸುವ ಸ್ಪರ್ಧೆ, ಇಂಗ್ಲಿಷಿನ ಪದಗಳನ್ನು ಕನ್ನಡಕ್ಕೆ ಅನುವಾದಿಸುವ, ಒಗಟುಗಳನ್ನು ಒಡೆಯುವ ಸ್ಪರ್ಧೆಗಳನ್ನು ನಡೆಸಿ ಸ್ಥಳದಲ್ಲಿ ಬಹುಮಾನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ವತಿಯಿಂದ ನೀಡಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು ನಾಗೇನಹಳ್ಳಿ ತಿಮ್ಮಯ್ಯ, ಮುಖ್ಯ ಶಿಕ್ಷಕ ಎಸ್.ಎಂ.ಜಯಣ್ಣ, ಬಿ. ಸಿ. ಚಂದ್ರಶೇಖರ್ ಅವರು ಮಾತನಾಡಿದರು.

ಉಡೇವಾ ಕುರುಬ ಸಮಾಜದ ಅಧ್ಯಕ್ಷರಾದ ಪ್ರಕಾಶ್ , ದಾನಿಗಳಾದ ಎಂ. ತಿಮ್ಮಯ್ಯ, ಮುಖಂಡರಾದ ರವಿ, ಲಿಂಗದಹಳ್ಳಿ ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶಪ್ಪ ಎಲ್. ಎಸ್., ಗೌರವಾಧ್ಯಕ್ಷರಾದ ಎಂ. ಕೆ. ಚಂದ್ರಪ್ಫ, ತಮ್ಮಯ್ಯ ಮತ್ತು ಹೋಬಳಿ ಘಟಕದ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಉಪಸ್ತಿತರಿದ್ದರು.‘ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿ, ವಿವಿಧ ಭಾಷೆ, ವಿವಿಧ ಜನಾಂಗ, ಸಂಪ್ರದಾಯ, ಆಚಾರ- ವಿಚಾರವಾಗಿ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ, ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯನ್ನು ಕಟ್ಟಲು ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ. ವಿಶ್ವೇಶ್ವರಯ್ಯನವರು ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ರವರ ಶ್ರಮ ಅತ್ಯಂತ ಸ್ಮರಣೀಯವಾಗಿದೆ.’

ರವಿ ದಳವಾಯಿ, ಅಧ್ಯಕ್ಷರು, ತಾಲೂಕು ಕಸಾಪ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ