ಆಧಾರವಿಲ್ಲದೇ ಶಾಸಕ ವಿರುದ್ಧ ಮಾತನಾಡಬೇಡಿ

KannadaprabhaNewsNetwork |  
Published : Oct 08, 2025, 01:00 AM IST
ಮಾಗಡಿ ತಾಲ್ಲೂಕಿನ ಸೋಲೂರು ಪ್ರವಾಸಿ ಮಂದಿರದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ರವೀಶ್ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಮಾಗಡಿ: ಶಾಸಕ ಬಾಲಕೃಷ್ಣ ಹಾಗೂ ಸಹೋದರ ಬಮೂಲ್ ನಿರ್ದೇಶಕ ಅಶೋಕ್ ವಿರುದ್ಧ ಸಾಕ್ಷಿಗಳಿಲ್ಲದೆ ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ಆರೋಪ ಮಾಡುವುದು ಬಿಡಬೇಕು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರವೀಶ್ ಎಚ್ಚರಿಕೆ ನೀಡಿದರು.

ಮಾಗಡಿ: ಶಾಸಕ ಬಾಲಕೃಷ್ಣ ಹಾಗೂ ಸಹೋದರ ಬಮೂಲ್ ನಿರ್ದೇಶಕ ಅಶೋಕ್ ವಿರುದ್ಧ ಸಾಕ್ಷಿಗಳಿಲ್ಲದೆ ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ಆರೋಪ ಮಾಡುವುದು ಬಿಡಬೇಕು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರವೀಶ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ನಾಯಕರ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ.

ಸೀತಾರಾಂ ಪತ್ನಿ ನಿರ್ಮಲಾವರು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತಪಟ್ಟಿ ಪರಿಷ್ಕರಣೆಯಾಗಿದ್ದು ಷೇರುದಾರರು ಸಾಮಾನ್ಯ ಸಭೆಗಳಿಗೆ ಮತ್ತು ಸಂಘದ ಪ್ರಮುಖ ಸಭೆಗಳಿಗೆ ಗೈರಾಗಿರುವ ಕಾರಣ ಇಟ್ಟುಕೊಂಡು 250ಕ್ಕೂ ಹೆಚ್ಚು ಜನರನ್ನು ಮತದಾನದ ಹಕ್ಕಿನಿಂದ ದೂರ ಇಡಲಾಗಿದೆ. ಇದು ಸಹಕಾರ ಸಂಘದ ನಿಯಮವೇ ಹೊರತು ದುರುದ್ದೇಶ ಪೂರಕವಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಶಾಸಕರ ವಿರುದ್ಧ ಪತ್ರಿಕಾಗೋಷ್ಠಿ ಮಾಡುವುದು ಸರಿಯಲ್ಲ ಎಂದರು.

ಟಿಎಪಿಎಂಎಸ್‌ಸಿ ಅಧ್ಯಕ್ಷ ಹೊನ್ನಾಪುರ ಶಿವಪ್ರಸಾದ್ ಮಾತನಾಡಿ, ಶಾಸಕ ಬಾಲಕೃಷ್ಣ ಜಾತಿಭೇದ ಮಾಡಿಲ್ಲ. ಪ್ರತಿಪಕ್ಷದ ಜನರನ್ನು ಬಿಡಿಸಿಸಿ ಹಾಗೂ ಸಹಕಾರ ಸಂಘಗಳಿಗೆ ನಿರ್ದೇಶಕರನ್ನಾಗಿ ಮಾಡಿದ್ದಾರೆ. ವಿವಿಧ ಜಾತಿಗಳನ್ನು ಪ್ರತಿನಿಧಿಸುವ ನಾಯಕರಿಗೂ ಅಧಿಕಾರ ನೀಡಿದ್ದಾರೆ. ಹೀಗಿರುವಾಗ ನಿರಾಧಾರವಾಗಿ ಆರೋಪಿಸುವುದು ಸರಿಯಲ್ಲ. ಎಚ್.ಎನ್ ಅಶೋಕ್ ಸಹಕಾರ ಸಂಘಗಳ ಹಿಡಿತ ತೆಗೆದುಕೊಂಡ ಮೇಲೆ ತಾಲೂಕಿನಲ್ಲಿ ನಷ್ಟದಲ್ಲಿದ್ದ ಸಹಕಾರ ಸಂಘ ಚೇತರಿಕೆ ಕಂಡು ಇಂದು ಲಾಭದತ್ತ ಸಾಗುತ್ತಿದೆ. ಈಗ ಸಹಕಾರ ಕ್ಷೇತ್ರಕ್ಕೆ ಶ್ರಮಿಸಿದವರ ವಿರುದ್ಧವೇ ಅಧಿಕಾರದ ಆಸೆಗಾಗಿ ಸೀತಾರಾಂ ನಡೆಸುತ್ತಿರುವ ಪಿತೂರಿ ನಿಲ್ಲಿಸಬೇಕು. ಏನೇ ಇದ್ದರೂ ನೀವು ಸಾಕ್ಷಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಚಂದ್ರೇಗೌಡ, ಚನ್ನಗಂಗಯ್ಯ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿದರು. ಮುಖಂಡರಾದ ನಾಗರಾಜು, ಶಶಾಂಕ್ , ಭವ್ಯಾದೇವೇಂದ್ರಕುಮಾರ್, ತಿಮ್ಮೇಗೌಡ, ನಾರಾಯಣ್, ರಾಜಣ್ಣ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕಿನ ಸೋಲೂರು ಪ್ರವಾಸಿ ಮಂದಿರದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರವೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟಿಎಪಿಎಂಎಸ್‌ಸಿ ಅಧ್ಯಕ್ಷ ಹೊನ್ನಾಪುರ ಶಿವಪ್ರಸಾದ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಚಂದ್ರೇಗೌಡ, ಚನ್ನಗಂಗಯ್ಯ ಇತರರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ