ರಕ್ತದಾನ ಮಾಡಿ ಆರೋಗ್ಯವಂತರಾಗಿ: ಕೃಷ್ಣನ್‌ ಕೌಶಿಕ್‌

KannadaprabhaNewsNetwork |  
Published : May 07, 2024, 01:08 AM IST
ವಿಜೆಪಿ ೦೬ವಿಜಯಪುರ ಪಟ್ಟಣದ ಚನ್ನರಾಯಪಟ್ಟಣ ಸರ್ಕಲ್ ಬಳಿ ಇರುವ ನಂದಿನಿ ವಿದ್ಯಾನಿಕೇತನ ಶಾಲಾ ಕಟ್ಟಡದಲ್ಲಿ ವಿಜಯಪುರ ರೋಟರಿ ಸಂಸ್ಥೆ, ನಂದಿನಿ ವಿದ್ಯಾನಿಕೇತನ ಹಿರಿಯ ವಿದ್ಯಾರ್ಥಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉಧ್ಘಾಟನೆಯಲ್ಲಿ ಭಾಗವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ವಿಮಲಾ ಸಿದ್ದರಾಜು,ರೋಟರಿ ಸಂಸ್ಥೆ ಅಧ್ಯಕ್ಷರಾದ ಎಎಂ.ಮಂಜುಳಾ. ಶಿಕ್ಷಕರುಗಳಾದ ಮಂಜುನಾಥ್ ರಾವ್ ಮತ್ತಿತರರು. | Kannada Prabha

ಸಾರಾಂಶ

ವಿಜಯಪುರ: ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಜಾತಿ, ವರ್ಣ, ಮತ-ಭೇದಗಳಿಲ್ಲದೆ ಮನುಷ್ಯರಿಂದ ಮನುಷ್ಯರಿಗೆ ಮಾತ್ರವೇ ಮಾಡಲು ಸಾಧ್ಯವಾಗುವ ಏಕೈಕ ದಾನ ರಕ್ತದಾನ ಎಂದು ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಡಿ.ಆರ್ ಕೃಷ್ಣನ್ ಕೌಶಿಕ್ ತಿಳಿಸಿದರು.

ವಿಜಯಪುರ: ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ. ಯಾವುದೇ ಜಾತಿ, ವರ್ಣ, ಮತ-ಭೇದಗಳಿಲ್ಲದೆ ಮನುಷ್ಯರಿಂದ ಮನುಷ್ಯರಿಗೆ ಮಾತ್ರವೇ ಮಾಡಲು ಸಾಧ್ಯವಾಗುವ ಏಕೈಕ ದಾನ ರಕ್ತದಾನ ಎಂದು ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಡಿ.ಆರ್ ಕೃಷ್ಣನ್ ಕೌಶಿಕ್ ತಿಳಿಸಿದರು.

ಇಲ್ಲಿನ ಚನ್ನರಾಯಪಟ್ಟಣದ ಬಳಿ ಇರುವ ನಂದಿನಿ ವಿದ್ಯಾನಿಕೇತನ ಶಾಲಾ ಕಟ್ಟಡದಲ್ಲಿ ವಿಜಯಪುರ ರೋಟರಿ ಸಂಸ್ಥೆ, ನಂದಿನಿ ವಿದ್ಯಾನಿಕೇತನದ ಹಿರಿಯ ವಿದ್ಯಾರ್ಥಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಬೇರೆಲ್ಲ ದಾನಗಳನ್ನು ಯಾರು ಯಾರಿಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ರಕ್ತದಾನ ಮಾತ್ರ ೧೮ರಿಂದ ೬೦ ವರ್ಷ ವಯಸ್ಸಿನೊಳಗಿನ ಆರೋಗ್ಯವಂತರು ಮಾತ್ರ ರಕ್ತದಾನ ಮಾಡಬಹುದು ಎಂದರು.

ನಂದಿನಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀ ವತ್ಸ ಮಾತನಾಡಿ, ರಕ್ತದಾನವೆಂಬುದು ಮನುಷ್ಯ ಹಾಗೂ ಮನುಷ್ಯತ್ವಕ್ಕೆ ಸಂಬಂಧಿಸಿದ ವಿಷಯ. ಪ್ರಪಂಚದಲ್ಲಿ ಹಣದಿಂದ ಎಷ್ಟೇ ಸವಲತ್ತು ಸೌಲಭ್ಯಗಳನ್ನು ಬೇಕಾದರೂ ಪಡೆಯಬಹುದು, ಉತ್ತಮ ಚಿಕಿತ್ಸೆಯನ್ನೂ ಪಡೆಯಲು ಸಾಧ್ಯ. ಆರೋಗ್ಯಕರ ಮನುಷ್ಯರು ರಕ್ತದಾನ ಮಾಡಿ ಮತ್ತೊಬ್ಬರ ಪ್ರಾಣ ಉಳಿಸಲು ಸಾಧ್ಯ ಎಂದರು.

ರೋಟರಿ ಸಂಸ್ಥೆ ಅಧ್ಯಕ್ಷ ಎ.ಎಂ.ಮಂಜುಳಾ ಮಾತನಾಡಿ, ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುವುದಲ್ಲದೆ ಹೃದಯಘಾತ ತಡೆಗಟ್ಟಬಹುದು. ಹೊಸ ರಕ್ತದ ಉತ್ಪತ್ತಿಗೆ ನಾಂದಿಯಾಗುತ್ತದೆ. ದೇಶದಲ್ಲಿ ಪ್ರತಿ ಎರಡು ಸೆಕೆಂಡಿಗೆ ರಕ್ತದ ಅವಶ್ಯಕತೆ ಇದ್ದು, ಆರೋಗ್ಯವಂತರು ನಿಗದಿತ ರಕ್ತದಾನ ಮಾಡುವಂತೆ ಸಲಹೆ ನೀಡಿದರು.

ಶಿಬಿರದಲ್ಲಿ ೪೦ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ನಂದಿನಿ ವಿದ್ಯಾನಿಕೇತನ ಶಾಲಾ ಮುಖ್ಯಶಿಕ್ಷಕಿ ವಿಮಲಾ ಸಿದ್ದರಾಜು, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಸಿದ್ದರಾಜು, ಮಹೇಶ್, ಕಿರಣ್, ವಿನಯ್, ಎಸ್ ಬಸವರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶಾಲಿನಿ, ಉಪಾಧ್ಯಕ್ಷೆ ರಮ್ಯಾ, ಜುನೈದಾ, ಜವಾದ್, ಸಾಖಿಬ್, ಮಿಸ್‌ಬಾ, ಶಿಕ್ಷಕರಾದ ಮಂಜುನಾಥ್ ರಾವ್, ಶೇಕ್ ಮೌಲಾ, ಡಿವಿ ಮಂಜುನಾಥ್, ನಾಗೇಶ್, ಕೆ ಮಂಜುನಾಥ್, ತಿಪ್ಪರಾಜು, ಅನ್ಸರುಲ್ಲಾ, ರೆಡ್ ಕ್ರಾಸ್ ಸಂಸ್ಥೆಯ ಡಾ. ಹೇಮಂತ್ ರಾಜ್ ಸಾವಳಗಿ, ಪಿಆರ್‌ಒ ವರದರಾಜ್, ಕೃಷ್ಣವೇಣಿ, ಪ್ರಶಾಂತ್, ರವಿಕುಮಾರ್ ಇತರರು ಉಪಸ್ಥಿತರಿದ್ದರು.

(ಫೋಟೊ ಕ್ಯಾಫ್ಷನ್‌)

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ