ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಿ.ಆರ್.ಪಟ್ಟಣ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರಿಗೆ ದೇವರು ನೀಡಿದ ವರದಾನವಾದ ಋತುಚಕ್ರದಿಂದ ರಕ್ತವು ದೇಹದಿಂದ ಹೊರ ಹೋಗುತ್ತದೆ. ಜೊತೆಗೆ ಪ್ರಕೃತಿದತ್ತವಾಗಿ ಅಗತ್ಯ ರಕ್ತವು ದೇಹದಲ್ಲಿ ಸಂಗ್ರಹವಾಗುವ ಕಾರಣದಿಂದ ಕಾಯಿಲೆಗಳು ಕಾಡುವುದು ಕಡಿಮೆ ಎಂದರು. ಇದೇ ವೇಳೆ ಹಲವಾರು ವಿಷಯಗಳು ಹಾಗೂ ಮಾನವೀಯ ಮೌಲ್ಯಗಳು ಕುರಿತು ಮಾತನಾಡಿದರು.
೪೦ ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ನೀಡಿದರು. ೨೮೦ ವಿದ್ಯಾರ್ಥಿಗಳಿಗೆ ಕಣ್ಣಿನ ಪರೀಕ್ಷೆ ಹಾಗೂ ೫೬ ವಿದ್ಯಾರ್ಥಿಗಳಿಗೆ ಬಿಪಿ ಹಾಗು ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಯಿತು.ಪ್ರಾಂಶುಪಾಲರಾದ ಮೂರ್ತಿ ಎಸ್.ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ.ಪೂರ್ಣಿಮಾ, ಬರ್ನಾಡ್, ಉದಯ್ ಕುಮಾರ್, ಜಯಣ್ಣ, ಪೂರ್ಣಿಮಾ, ಇತರರು ಇದ್ದರು.