ಕನಕಪುರ: ದೇಶದ ಜನರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹಗಲಿರುಳು ದೇಶದ ಗಡಿಯಲ್ಲಿ ಕಾವಲು ಕಾಯುತ್ತಿರುವ ವೀರಯೋಧರಿಗಾಗಿ ಯುವ ಜನತೆ ರಕ್ತದಾನ ಮಾಡುವಂತೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗನಂದ ಮನವಿ ಮಾಡಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್ ಮಾತನಾಡಿ, ಯುವ ಜನತೆ ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕೆಂದರು.
ಸಂಸದ ಡಾ. ಮಂಜುನಾಥ್ ಪುತ್ರ ಡಾ. ಸಾತ್ವಿಕ್ ಮಂಜುನಾಥ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಯುವಕರಿಗೆ ಸ್ಫೂರ್ತಿ ತುಂಬಿದರು. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಜಗನಾಥ್ ಗೌಡ, ನಗರ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಉಮೇಶ್, ಪಕ್ಷದ ಮುಖಂಡರಾದ ದಯಾನಂದ, ಅಶ್ವತ್ಥ್, ಪಾಲಾಕ್ಷ, ಕೋಟೆ ಕಿಟ್ಟಣ್ಣ, ಚೂಡಾಮಣಿ ಚಂದ್ರು, ದರ್ಶನ್, ಪ್ರದೀಪ್, ಮರಿಯಪ್ಪ ಪವಿತ್ರಾ, ವರಲಕ್ಷ್ಮೀ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.(ಸಿಂಗಲ್ ಕಾಲಂ ಫೋಟೋ ಮಾತ್ರ ಬಳಸಿ)