ಯಲಬುರ್ಗಾ: ರಕ್ತದ ಅಗತ್ಯತೆ ಇರುವವರಿಗೆ ರಕ್ತದಾನ ಮಾಡಿ ಪ್ರಾಣ ಉಳಿಸುವ ಕಾರ್ಯವಾಗಬೇಕು. ರಕ್ತಕ್ಕೆ ಯಾವುದೇ ಜಾತಿ ಇಲ್ಲ, ಮಾನವೀಯತೆ ಸೇವೆ ದೊಡ್ಡದು ಎಂದು ಉಪ ಆಯುಷ್ಮಾನ ಆರೋಗ್ಯ ಮಂದಿರದ ಆರೋಗ್ಯ ಅಧಿಕಾರಿ ಶಿವಮ್ಮ ಹೇಳಿದರು.
ಜನರ ಆರೋಗ್ಯ ಸದೃಢಕ್ಕೆ ಇಂತಹ ಶಿಬಿರ ಅವಶ್ಯವಾಗಿ ಆಯೋಜಿಸಬೇಕು. ಮನುಷ್ಯ ರಕ್ತದಾನ ಮಾಡುವ ಮೂಲಕ ಆರೋಗ್ಯ ಸೇವೆ ಸಲ್ಲಿಸಬೇಕು. ರಕ್ತದಾನದ ಕುರಿತು ಇರುವ ತಪ್ಪು ಕಲ್ಪನೆ ಕೈಬಿಟ್ಟು ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಭಾರತ ದೇಶದಲ್ಲಿ ಶೇ. 50ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಪಘಾತ ಹಾಗೂ ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ರಕ್ತದ ಅವಶ್ಯ ಇರುತ್ತದೆ. ಸಕಾಲಕ್ಕೆ ರಕ್ತ ನೀಡಿದರೆ ಲವಲವಿಕೆಯಿಂದ ಕೂಡಿರುತ್ತಾನೆ ಎಂದರು.
ಗ್ರಾಮದ ಯುವ ಮುಖಂಡ ಮಂಜುನಾಥ ಮಾಸ್ತಿ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನದಂತಹ ಶಿಬಿರಗಳಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಬೇಕು ಎಂದರು.ಈ ಸಂದರ್ಭ ರೆಡ್ ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ, ಸಿಬ್ಬಂದಿ, ಆಶಾ ಕಾರ್ಯಕರ್ತೆ ಭಾಗ್ಯ ಗೊಲ್ಲರ, ಶಿಕ್ಷಕ ಶರಣಪ್ಪ ಇಟಗಿ, ಬಸವರಾಜ ಹಳೆಗೌಡ್ರು, ಪರಿವರ್ತನ ಗೆಳೆಯರ ಬಳಗದ ಪ್ರಮುಖ ಶಿವಯ್ಯ ಹಿರೇಮಠ, ಮಹಾಂತೇಶ ದೇಸಾಯಿ, ಅಶೋಕ ಕೋಳಿಹಾಳ, ಮಾಜಿ ಸೈನಿಕ ಬಸಯ್ಯ ಹಿರೇಮಠ, ಪ್ರಾಣೇಶ ಬತ್ತಿ, ಡಾ. ಹನುಮಂತರಾವ್ ಸಾಳುಂಕೆ ಗ್ರಾಮದ ಹಿರಿಯರಾದ ವೀರಯ್ಯ ಹಿರೇಮಠ, ಶರಣಪ್ಪ ಹಾಳಕೇರಿ, ಶಿವಕುಮಾರ ಮರಿಗೌಡರ, ರವಿ ದೊಡ್ಡಮನಿ, ಅರ್ಜುನ್ ಹಿರೇಮನಿ ಸೇರಿದಂತೆ ಇತರರಿದ್ದರು.