ಲಕ್ಷ್ಮೇಶ್ವರ: ಸ್ವಯಂಪ್ರೇರಿತ ರಕ್ತದಾನ ಶಿಬಿರವು ಮಾನವೀಯತೆಯ ಅತ್ಯುನ್ನತ ಸೇವೆಯಾಗಿದೆ ಎಂದು ಗದಗ ಜಿಲ್ಲಾ ಕೆ.ಎಚ್. ಪಾಟೀಲ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.
ರಸ್ತೆ ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಗರ್ಭಿಣಿಯರು ಮತ್ತು ವಿವಿಧ ರೋಗಗಳಿಂದ ಬಳಲುವ ರೋಗಿಗಳಿಗೆ ತಕ್ಷಣ ರಕ್ತದ ಅವಶ್ಯಕತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು ಜೀವದಾತರಾಗುತ್ತಾರೆ. ಒಂದು ದಾನದಿಂದ ಮೂರು ಜನರ ಜೀವ ಉಳಿಯಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಮಾತನಾಡಿ, ಕಳೆದ ಎರಡು ದಶಕಗಳಿಂದ ರಕ್ತದಾನ ಶಿಬಿರ ಆಯೋಜನೆ ಯಶಸ್ವಿಯಾಗಿ ಕೈಗೊಂಡಿದ್ದು, ಇದು ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಗುತ್ತದೆ ಎಂದು ಹೇಳಿದ ಅವರು, ಪ್ರಸಕ್ತ ಸಾಲಿನಿಂದ ಹುತಾತ್ಮ ಯೋಧರ ಮಕ್ಕಳಿಗೆ ವಸತಿಸಹಿತ ಉಚಿತ ತಾಂತ್ರಿಕ ಶಿಕ್ಷಣ ನೀಡಲು ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಯೋಗೇಶ್ ಹಿರೇಮಠ, ಚನ್ನಬಸಪ್ಪ ಹುಡೇದ, ಎಚ್.ಡಿ. ಸಂಜೀವಣ್ಣವರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಅಗಡಿ ಸನ್ ರೈಸ್ ಆಸ್ಪತ್ರೆಯ ಡಾ. ರಾಜಶೇಖರ ಮೂಲಿಮನಿ, ಡಾ. ಸುಜಾತಾ ಸಂಗೂರ್, ಡಾ. ವಾಣಿ ಶಿವಪುರ, ಪ್ರೊ. ವಿಕ್ರಂ ಶಿರೋಳ, ಡಾ. ಸುಭಾಷ್ ಮೇಟಿ, ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಶುಭಾ ಡಿ., ರವಿಪ್ರಕಾಶ್, ಎನ್ಎಸ್ಎಸ್ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ, ಕಿರಣ ಕೋತಿನ, ರಾಜೇಶ್ವರಿ ಗಾಮನಗಟ್ಟಿ, ಗೀತಾ ಬ್ಯಾಟಿ, ಡಾ. ಗಿರೀಶ್ ಯತ್ತಿನಹಳ್ಳಿ, ಡಾ. ಸಂತೋಷ್ ಬುಜರಿ, ಡಾ. ಶಿವರಾಜ್ ಹಿರೇಮಠ, ಎಸ್.ಎನ್. ಗೊಂದಕರ, ದಯಾನಂದ ಬಡಿಗಣ್ಣವರ, ಎಸ್.ಎಫ್. ಕೊಡ್ಲಿ, ರಮೇಶ ರೆಡ್ಡಿ, ಬಸವರಾಜ ಮುರಗೋಡ, ರವಿ ಸದ್ಲಾಪುರ, ಮಲ್ಲಯ್ಯ ಹಿರೇಮಠ, ಷಣ್ಮುಖ ಜಿ., ಈರಣ್ಣ ಮಕರಬ್ಬಿ, ಶ್ರೀಕಾಂತ್ ಮಲ್ಲಿಗವಾಡ, ರವಿ ದುರ್ಗಣ್ಣವರ, ಸಂಗಮೇಶ, ಸೋಮು ನವಲಗುಂದ, ಮಂಜುನಾಥ ಎಂ., ಸಂಗಮೇಶ ಉಳೆವಪ್ಪನವರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. 133 ಜನ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.