ಗುತ್ತಲ: ಗಣಪತಿ ಹಬ್ಬದಲ್ಲಿ ಮೋಜು ಮಸ್ತಿಗೆ ಅವಕಾಶ ನೀಡದೆ ಸಮಾಜಮುಖಿಯಾದ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿರುವುದು ಮಾದರಿಯಾದ ಕಾರ್ಯವೆಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಮಹೇಶ ಹಾವನೂರ ತಿಳಿಸಿದರು.
ಕಲ್ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಕೃತಕ ಕೈ, ಕಾಲು, ಹಲ್ಲು ಸೇರಿದಂತೆ ಅನೇಕ ಅಂಗಾಂಗಗಳನ್ನು ತಯಾರಿಸಬಹುದು. ಆದರೆ ಕೃತಕವಾಗಿ ರಕ್ತ ತಯಾರಿಸಲು ಸಾಧ್ಯವಿಲ್ಲ. ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತದಾನದಿಂದ ದೇಹಕ್ಕೆ ಯಾವುದೇ ಅಪಾಯವಿಲ್ಲ ಎಂದರು.
ಉದ್ಯಮಿ ಬಸವರಾಜ ಜವಾಯಿ ಮಾತನಾಡಿ, ರಕ್ತದಾನ ಶ್ರೇಷ್ಠದಾನ. ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ದೊರೆಯುತ್ತದೆ ಎಂದರು.ಶಿಬಿರದಲ್ಲಿ ಸುಮಾರು 70ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಪಿಎಸ್‌ಐ ಬಸನಗೌಡ ಬಿರಾದಾರ, ವರ್ತಕರಾದ ಚನ್ನಪ್ಪ ಕಲಾಲ, ಗುಡ್ಡಪ್ಪ ಆನ್ವೇರಿ, ಡಾ. ಸುಚಿತ ಕಲಾಲ, ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ನವೀನ ಚಿಕ್ಕಮಠ, ಚೇತನ ಕಾನಳ್ಳಿ, ಸಿದ್ದು ಅಂಗಡಿ, ದೀಪಾ ಪೋಮೊಜಿ, ಶರಣಪ್ಪ ಅರಳಿ, ವೇಖಟೇಶ ಸಿಂಗನವರ, ಸುನೀಲ ಹೂಗಾರ, ಹಿಂದೂ ಮಹಾಗಣಪತಿ ಮಂಡಳಿಯ ಪ್ರಸನ್ನ ಜಾನ್ಮನೆ, ರಮೇಶಸಿಂಗ್ ಜಮಾದಾರ, ಕುಮಾರ ಚಿಗರಿ, ಚಿದಾನಂದ ಬಡಿಗೇರ, ರಾಜು ತೋಟದ, ರಾಜಾರಾಮ ಕುಲಕರ್ಣಿ, ಮಂಜುನಾಥ ನಾಯಕ, ನವೀನ ದಾಮೋದರ, ಗುರುಪ್ರಸಾದ ಮಠದ, ಸಿದ್ಧರಾಜ ಸಾಲಗೇರಿ, ಆಕಾಶ ನಾಡಿಗೇರ, ರಾಜು ಚನ್ನದಾಸರ, ಅಜಯ ಬೂಶಪ್ಪನವರ, ರಜತ ಶಾಡಂಬಿ, ರಾಜು ಬಡಿಗೇರ, ಶಿವಪ್ಪ ಬೆನ್ನೂರ ಇತರರು ಭಾಗವಹಿಸಿದ್ದರು.