ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಶಸ್ತ್ರ ಚಿಕಿತ್ಸಕರ ಸಂಘ, ರಕ್ತನಿಧಿ ಕೇಂದ್ರ ಇವರ ವತಿಯಿಂದ ನಗರದ ಮಿಮ್ಸ್‌ನ ರಕ್ತನಿಧಿ ಕೇಂದ್ರದ ಆವರಣದಲ್ಲಿ ವೈದ್ಯ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ. ರಕ್ತದಾನದ ಮಹತ್ವ ಅರಿತು ರಕ್ತದಾನ ಮಾಡಿ ಜೀವಗಳನ್ನು ಉಳಿಸಬೇಕು ಎಂದರು.
ರಕ್ತಕ್ಕೆ ಬೇರೆ ಪರ್ಯಾಯ ಇಲ್ಲದೆ ಇರುವುದರಿಂದ ರಕ್ತವನ್ನು ಔಷಧ ಎಂದು ಕರೆಯುತ್ತೇವೆ. ಹೆದ್ದಾರಿಗಳಲ್ಲಿ ಆಗುವಂತಹ ಅಪಘಾತಗಳು, ಗರ್ಭಿಣಿಯರಿಗೆ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇದನ್ನು ತುಂಬುವುದು ರಕ್ತದಾನದಿಂದ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ರಕ್ತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ರಕ್ತದಾನಿಗಳು ಭಯ ಪಡುವ ಅವಶ್ಯವಿಲ್ಲ. ಆದ್ದರಿಂದ ಯಾವುದೇ ತೊಂದರೆಯಿಲ್ಲ. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತಿದೆ. ಆರೋಗ್ಯ ಸುಧಾರಿಸುತ್ತದೆ. ಸಾವು ನೋವಿನಲ್ಲಿರುವ ಜನರಿಗೆ ಜೀವದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ರಕ್ತದ ಅವಶ್ಯಕತೆ ಇರುವ ಒ-ನೆಗೆಟಿವ್, ಬಿ-ನೆಗೆಟಿವ್ ರಕ್ತ ಸಿಗುವುದು ಕಷ್ಟ. ರಕ್ತದ ತೀರ ಅವಶ್ಯಕತೆ ಇದ್ದಾಗ ಅಂತಹವರನ್ನು ಲೇಬಲ್ ಮಾಡಿ ನಮೂದಿಸಿದರೆ ಬೇರೆಯವರಿಗೆ ರಕ್ತ ಅವಶ್ಯಕತೆ ಇದ್ದಾಗ ಉಪಯೋಗವಾಗುತ್ತದೆ ಎಂದರು.