ರಕ್ತದಾನ ಮಾಡುವುದು ಪುಣ್ಯದ ಕೆಲಸ

KannadaprabhaNewsNetwork |  
Published : Apr 06, 2026, 02:00 AM IST
5ಎಚ್ಎಸ್ಎನ್17  :ಹಳೇಬೀಡು ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ತ್ರಿವಿಧ ದಾಸೋಹಿ ಡಾ. ಶಿವಕುಮಾರ್ ಸ್ವಾಮೀಜಿ ಅವರ ೧೧೯ನೇ ಜನ್ಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಮತ್ತು ಕಣ್ಣಿನ ಮತ್ತು ದಂತ ಚಿಕಿತ್ಸೆ ಕಾರ್ಯಕ್ರಮ ಗಣ್ಯರಿಂದ ಉದ್ಘಾಟಿಸಲಾಯಿತು.. | Kannada Prabha

ಸಾರಾಂಶ

ರಕ್ತದಾನ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಥವಾ ದೇಹದ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಮತ್ತು ತಪ್ಪು ಕಲ್ಪನೆ ಮತ್ತು ಮೂಢನಂಬಿಕೆಗಳಿಂದ ಸಾರ್ವಜನಿಕರು ವಿದ್ಯಾರ್ಥಿಗಳು ದೂರವಿರಬೇಕು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗುವುದರ ಜೊತೆಗೆ ದೇಹದ ವಿವಿಧ ಅಂಗಾಂಗಗಳ ಕ್ರಿಯಾತ್ಮಕ ಚಟುವಟಿಕೆಗೆ ಅನುಕೂಲವಾಗುತ್ತದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಎಚ್.ಸಿ ಚೇತನ್ ಮಾತನಾಡುತ್ತ, ಸಾರ್ವಜನಿಕ ಹಿತದೃಷ್ಟಿಯಿಂದ ಕಣ್ಣಿನ ಹಾಗೂ ದಂತ ಚಿಕಿತ್ಸೆ ಏರ್ಪಡಿಸಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇತರ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ .ಶ್ರೀನಿವಾಸ್ ಬಿ .ಕೆ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ರಕ್ತದಾನ ಮಾಡುವುದರಿಂದ ದೇಹ ಶುದ್ಧೀಕರಣಗೊಳ್ಳುವ ಜೊತೆಗೆ ಇನ್ನೊಂದು ಜೀವಕ್ಕೆ ಜೀವ ನೀಡಿದ ಹಾಗೆ ಎಂದು ಅಡಗೂರು ಯೋಗ ಕೇಂದ್ರದ ಚೇತನ್ ಗುರೂಜಿ ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೇಲೂರು ಘಟಕ , ಯೋಗ ಚೇತನ ಕೇಂದ್ರ ಅಡಗೂರು, ರೋಟರಿ ಕ್ಲಬ್ ಹಾಸನ , ಸಹಯೋಗದೊಂದಿಗೆ ಡಾ. ಶಿವಕುಮಾರ್ ಸ್ವಾಮೀಜಿ ಅವರ ೧೧೯ನೇ ಜಯಂತಿ ಅಂಗವಾಗಿ ಬೃಹತ್ ರತ್ತದಾನ ಶಿಬಿರ ಕಣ್ಣು ಮತ್ತು ದಂತ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತ, ರಕ್ತದಾನ ಮಾಡುವುದರಿಂದ ತುರ್ತು ಚಿಕಿತ್ಸೆ ಹಾಗೂ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಇನ್ನೊಂದು ಜೀವವನ್ನ ಉಳಿಸಿದ ಪುಣ್ಯದ ಕೆಲಸ ರಕ್ತದಾನದಿಂದ ಆಗುತ್ತದೆ ಎಂದು ಹೇಳಿದರು.ರಕ್ತದಾನ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಥವಾ ದೇಹದ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಮತ್ತು ತಪ್ಪು ಕಲ್ಪನೆ ಮತ್ತು ಮೂಢನಂಬಿಕೆಗಳಿಂದ ಸಾರ್ವಜನಿಕರು ವಿದ್ಯಾರ್ಥಿಗಳು ದೂರವಿರಬೇಕು. ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗುವುದರ ಜೊತೆಗೆ ದೇಹದ ವಿವಿಧ ಅಂಗಾಂಗಗಳ ಕ್ರಿಯಾತ್ಮಕ ಚಟುವಟಿಕೆಗೆ ಅನುಕೂಲವಾಗುತ್ತದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಎಚ್.ಸಿ ಚೇತನ್ ಮಾತನಾಡುತ್ತ, ಸಾರ್ವಜನಿಕ ಹಿತದೃಷ್ಟಿಯಿಂದ ಕಣ್ಣಿನ ಹಾಗೂ ದಂತ ಚಿಕಿತ್ಸೆ ಏರ್ಪಡಿಸಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇತರ ಕಾಲೇಜುಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ .ಶ್ರೀನಿವಾಸ್ ಬಿ .ಕೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಯುವ ರೆಡ್ ಕ್ರಾಸ್ ಕ್ರಾಸ್ ಸಂಸ್ಥೆ ಸಂಚಾಲಕ ಡಾ. ಮನೋಜ್ ಕುಮಾರ್, ಹಾಸನ ರೋಟರಿ ಕ್ಲಬ್ ಅಧ್ಯಕ್ಷ ವಜ್ರ ಕುಮಾರ್ ಐಕ್ಯೂಎಸಿ ಸಂಚಾಲಕ ಅಭಿಷೇಕ್, ಕಾಲೇಜಿನ ಭೂದಾನಿಗಳಾದ ಪ್ರೇಮಣ್ಣ, ಸಿಡಿಸಿ ಸದಸ್ಯ ರಂಜಿತ್, ರಘುನಾಥ್ ಪ್ರಾಧ್ಯಾಪಕರಾದ ಚಂದ್ರಶೇಖರ್, ಡಾ. ಪ್ರದೀಪ್, ಶಂಕರಪ್ಪ, ರಾಘವೇಂದ್ರ, ಧನಂಜಯ್, ಕುಮಾರಿ ಡಿಂಪಲ್, ಪದ್ಮಪ್ರಿಯ, ದಶರಥ , ಶಿವರಾಜ್, ರೋವಿನ್ ಎಲ್.ಐ.ಸಿ. ಚಂದ್ರಶೇಖರ್‌, ಆರೋಗ್ಯ ಇಲಾಖೆಯ ಹಕ್ಕಿಕುಮಾರ್ ಧನಂಜಯ,ಅಂಗನವಾಡಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಂಗಿಕ‌ ದೌರ್ಜನ್ಯ: ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಲಿ: ರವಿಂದ ಬೆಲ್ಲದ
ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ: ಆರೋಪಿ ಬಂಧನ