ಎಗ್ ಫ್ರೈಡ್ ರೈಸ್ ಸಂಘದಿಂದ ₹10,001 ದೇಣಿಗೆ

KannadaprabhaNewsNetwork |  
Published : Mar 03, 2025, 01:46 AM IST
02 ಎಚ್‍ಆರ್‍ಆರ್ 01ಹರಿಹರದ ಮಹಜೇನಹಳ್ಳ್ಳಿ ಗ್ರಾಮ ದೇವತೆ ದೇವಸ್ಥಾನದಲ್ಲಿ ಭಾನುವಾರ ಗ್ರಾಮ ದೇವತೆ ಎಗ್ ರೈಸ್, ಫ್ರೈಡ್ ಚಿಕ್ಕನ್ ವ್ಯಾಪಾರಸ್ಥರ ಸಂಘದಿಂದ ಗ್ರಾಮದೇವತೆ ಜಾತ್ರೆಗೆ 10,001 ಕಾಣಿಕೆಯನ್ನು ಚೆಕ್ ಮೂಲಕ ದೇವಿ ಉತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳಿಗೆ ನೀಡಲಾಯಿತು. | Kannada Prabha

ಸಾರಾಂಶ

ನಗರದ ಬೀದಿ ಬದಿಯಲ್ಲಿ ದಿನನಿತ್ಯ ಕಾಯಕ ಮಾಡಿ ಕಷ್ಟಪಟ್ಟು ದುಡಿದ ಹಣದಲ್ಲಿ ಸಂಘದ ಸದಸ್ಯರು ಊರಮ್ಮ ದೇವಿ ಜಾತ್ರೆಗೆ ಕಾಣಿಕೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮ ದೇವತೆ ಎಗ್‍ರೈಸ್ ಪ್ರೈಡ್ ಚಿಕನ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಹೇಳಿದ್ದಾರೆ.

- 18ರಿಂದ 22ರವರೆಗೆ ಊರಮ್ಮ ದೇವಿ ಜಾತ್ರೆ । ಸಮಿತಿಗೆ ಚೆಕ್ ಹಸ್ತಾಂತರ - - - ಕನ್ನಡಪ್ರಭ ವಾರ್ತೆ ಹರಿಹರ ನಗರದ ಬೀದಿ ಬದಿಯಲ್ಲಿ ದಿನನಿತ್ಯ ಕಾಯಕ ಮಾಡಿ ಕಷ್ಟಪಟ್ಟು ದುಡಿದ ಹಣದಲ್ಲಿ ಸಂಘದ ಸದಸ್ಯರು ಊರಮ್ಮ ದೇವಿ ಜಾತ್ರೆಗೆ ಕಾಣಿಕೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಗ್ರಾಮ ದೇವತೆ ಎಗ್‍ರೈಸ್ ಪ್ರೈಡ್ ಚಿಕನ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಹೇಳಿದರು.

ನಗರದ ಮಹಜೇನಹಳ್ಳಿಯ ದೇವಸ್ಥಾನದಲ್ಲಿ ಭಾನುವಾರ ಗ್ರಾಮ ದೇವತೆ ಎಗ್ ರೈಸ್, ಫ್ರೈಡ್ ಚಿಕನ್ ವ್ಯಾಪಾರಸ್ಥರ ಸಂಘದಿಂದ ಮಾ.18ರಿಂದ ಮಾ.22ರವರೆಗೆ ನಡೆಯಲಿರುವ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಗೆ ₹10,001 ಕಾಣಿಕೆಯನ್ನು ಚೆಕ್ ಮೂಲಕ ದೇವಿ ಉತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಪ್ರತಿ 3 ವರ್ಷಕ್ಕೊಮ್ಮೆ ಬರುವ ದೇವಿಯ ಉತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡುವುದಕ್ಕೆ ನಗರದ ಜನತೆ ಹಾಗೂ ಕಮಿಟಿಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಘದ ಸರ್ವರು ದಿನನಿತ್ಯ ಉಳಿಸಿದ ಅಲ್ಪಸ್ವಲ್ಪ ಹಣವನ್ನು ದೇವಿಗೆ ಕಾಣಿಕೆ ಸಲ್ಲಿಸಿದ್ದಾರೆ. ಎಲ್ಲರಿಗೂ ದೇವಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂದು ಸಂಘಟಕರಿಗೆ ಸಲಹೆ ನೀಡಿದರು.

ಉತ್ಸವ ಸಮಿತಿ ಧರ್ಮದರ್ಶಿ ಕೆ.ಬಿ. ರಾಜಶೇಖರ್ ಮಾತನಾಡಿ, ಈ ಬಾರಿ ಜಾತ್ರಾ ಉತ್ಸವ ಸಮಿತಿಯ ಯುವಕ ಮಂಜುನಾಥ್ ಹಾರ್ನಳ್ಳಿ ಅಧ್ಯಕ್ಷರಾಗಿದ್ದಾರೆ. ಯುವಕರು ಹಾಗೂ ಹಿರಿಯರ ಜೊತೆಗೆ ಉತ್ಸಾಹಕರಾಗಿ ಜಾತ್ರಾ ಮಹೋತ್ಸವ ಯಶಸ್ವಿಯಾಗಲಿಕ್ಕೆ ಶ್ರಮಿಸುತ್ತಿದ್ದಾರೆ. ದೇವಿ ಜಾತ್ರೆಗೆ ಭಕ್ತ ವೃಂದದವರು ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಹಾರ್ನಳ್ಳಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಕೆ.ಬಿ. ಖಜಾಂಚಿ ಮರಿಕೆಂಚಪ್ಪ, ಸಹ ಕಾರ್ಯದರ್ಶಿ ಸಿದ್ದಪ್ಪ ಎಂ.ಎನ್., ಮಾಜೇನಹಳ್ಳಿ ಗ್ರಾಮ ದೇವತೆ ದೇವಸ್ಥಾನದ ಅಧ್ಯಕ್ಷ ಶಿವಾನಂದಪ್ಪ ಹಲಸಬಾಳು, ಪತ್ರಕರ್ತ ಪಂಚಾಕ್ಷರಿ, ಸಂಘದ ಪದಾಧಿಕಾರಿಗಳಾದ ಐರಣಿ ರಾಘವೇಂದ್ರ, ರಮೇಶ್ ಭಂಡಾರಿ, ರಘು ಎಂ.ಮುತ್ತಣ್ಣ, ಹನುಮಂತಪ್ಪ, ನಿತಿನ್, ದೇವಸ್ಥಾನದ ಅರ್ಚಕರು, ಭಕ್ತರು ಇದ್ದರು.

- - -

-02ಎಚ್‍ಆರ್‍ಆರ್01:

ಹರಿಹರದ ಮಹಜೇನಹಳ್ಳ್ಳಿಗ್ರಾಮ ದೇವತೆ ದೇವಸ್ಥಾನದಲ್ಲಿ ಭಾನುವಾರ ಗ್ರಾಮ ದೇವತೆ ಎಗ್ ರೈಸ್, ಫ್ರೈಡ್ ಚಿಕ್ಕನ್ ವ್ಯಾಪಾರಸ್ಥರ ಸಂಘದಿಂದ ಜಾತ್ರೆಗೆ ₹10,001 ಮೊತ್ತದ ಚೆಕ್ ಅನ್ನು ಉತ್ಸವ ಸಮಿತಿಗೆ ಹಸ್ತಾಂತರಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ