ಶಿವಶರಣರ ಪಥದಲ್ಲಿ ದೊಣೆಹಳ್ಳಿ ಮಠದ ಸಮಾಜ ಸೇವೆ ಶ್ಲಾಘನೀಯ

KannadaprabhaNewsNetwork |  
Published : Mar 25, 2025, 12:48 AM IST
23 ಜೆ.ಜಿ.ಎಲ್.1)ಜಗಳೂರು ತಾಲ್ಲೂಕಿನ ದೋಣೆಹಳ್ಳಿ ಶ್ರೀ ಶರಣಬಸವೇಶ್ವರ ದಾಸೋಹ ಮಠದ ವತಿಯಿಂದ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದ ಕೊನೆಯ ದಿನದ ದಂತಪಂಕ್ತಿ ವಿತರಣಾ ಮತ್ತು ಜೋಡಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ , ವಿವಿಧ ಸ್ವಾಮೀಜಿಗಳು, ಗಣ್ಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ದೊಣೆಹಳ್ಳಿ ಶ್ರೀ ಮಠದಿಂದ ಈ ಭಾಗದಲ್ಲಿ ರೈತ ಸಮಾವೇಶ, ಮಹಿಳಾ ಸಬಲೀಕರಣ ಸಮಾವೇಶ, ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ವಧು- ವರರ ಸಮಾವೇಶ ಶರಣ ಸಂಗಮ, ಉಚಿತ ದಂತಪಂಕ್ತಿ ವಿತರಣಾ ಮತ್ತು ಜೋಡಣೆ ಕಾರ್ಯಕ್ರಮ ನಡೆಸಲಾಗಿದೆ. ಇಂಥ ಕಾರ್ಯಕ್ರಮಗಳ ಆಯೋಜಿಸಿ, ಸಮಾಜಕ್ಕೆ ಉತ್ತಮ ವೈಚಾರಿಕ ಸಂದೇಶ ನೀಡುವಲ್ಲಿ ಶ್ರೀಮಠ ಪ್ರಥಮ ಹೆಜ್ಜೆ ಶ್ಲಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ದೊಣೆಹಳ್ಳಿಯಲ್ಲಿ ದಂತಪಂಕ್ತಿ ವಿತರಣೆ-ಜೋಡಣಾ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಜಗಳೂರು

ದೊಣೆಹಳ್ಳಿ ಶ್ರೀ ಮಠದಿಂದ ಈ ಭಾಗದಲ್ಲಿ ರೈತ ಸಮಾವೇಶ, ಮಹಿಳಾ ಸಬಲೀಕರಣ ಸಮಾವೇಶ, ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ವಧು- ವರರ ಸಮಾವೇಶ ಶರಣ ಸಂಗಮ, ಉಚಿತ ದಂತಪಂಕ್ತಿ ವಿತರಣಾ ಮತ್ತು ಜೋಡಣೆ ಕಾರ್ಯಕ್ರಮ ನಡೆಸಲಾಗಿದೆ. ಇಂಥ ಕಾರ್ಯಕ್ರಮಗಳ ಆಯೋಜಿಸಿ, ಸಮಾಜಕ್ಕೆ ಉತ್ತಮ ವೈಚಾರಿಕ ಸಂದೇಶ ನೀಡುವಲ್ಲಿ ಶ್ರೀಮಠ ಪ್ರಥಮ ಹೆಜ್ಜೆ ಶ್ಲಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ತಾಲೂಕಿನ ದೋಣೆಹಳ್ಳಿ ಶ್ರೀ ಶರಣಬಸವೇಶ್ವರ ದಾಸೋಹ ಮಠ ವತಿಯಿಂದ ನಡೆಯುತ್ತಿರುವ ದಾಸೋಹ ಸಂಸ್ಕೃತಿ ಉತ್ಸವದ ಕೊನೆಯ ದಿನದ ದಂತಪಂಕ್ತಿ ವಿತರಣೆ ಮತ್ತು ಜೋಡಣಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆಗೆ ₹2611 ಕೋಟಿ ಮೀಸಲು:

ರೈತ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯ ಮತ್ತು ಅಭಿಪ್ರಾಯಗಳು ಅತಿ ಮುಖ್ಯ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆ ನಡೆದ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ₹2611 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯವು ಸುಗಮವಾಗಿ ನಡೆಯುತ್ತದೆ ಎಂದರು.

ಪತ್ರಕರ್ತ ಗುರುಮೂರ್ತಿ ಮಾತನಾಡಿ, ಶರಣರ ಆಶಯದಂತೆ ಕಾಯಕವೇ ಕೈಲಾಸ ಎಂದಿರುವ ನಾಣ್ಣುಡಿಯಂತೆ ಮಠದ ಕಾರ್ಯಗಳು ಸದಾ ರೈತಪರ, ಪ್ರಗತಿಪರ ವಿಚಾರಗಳ ಹಿನ್ನೆಲೆ ನಡೆಯುತ್ತಿದೆ. ಮಠದ ಕಾರ್ಯಗಳು ಈ ಭಾಗದ ರೈತರ ಮತ್ತು ಜನರ ಆರೋಗ್ಯ, ಆಚಾರ, ಅರಿವು, ಶಿಕ್ಷಣ ಅಭಿವೃದ್ಧಿ ಬಗ್ಗೆ ಚರ್ಚಿಸಿ, ತಾಲೂಕು ಮತ್ತು ಸುತ್ತಮುತ್ತಲಿನ ಭಾಗದ ಜನರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಕಾರ ನೀಡುತ್ತಿದೆ ಎಂದರು.

ಗುರುಮಿಟಕಲ್ ಶಾಂತವೀರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ದಂತಪಂಕ್ತಿಯ ತಪಾಸಣಾ ಮತ್ತು ಜೋಡಣಾ ಶಿಬಿರ ಅತ್ಯಂತ ಶ್ಲಾಘನೀಯ. ಮುಖ ಮತ್ತು ದೇಹದ ಸೌಂದರ್ಯ ಹೆಚ್ಚಿಸುವಲ್ಲಿ ಹಲ್ಲುಗಳು ಅತಿ ಮುಖ್ಯ. ಬಸವ ಪರಂಪರೆಯಲ್ಲಿ ಸಾಗಿ ಬಂದ ದಾಸೋಹ ಉತ್ಸವವನ್ನು ಶ್ರೀ ಶರಣಬಸವೇಶ್ವರ ದಾಸೋಹ ಮಠ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಶರಣರ ಆದರ್ಶ ಪಾಲನೆಯಾದಾಗ ಮಾತ್ರ ಉತ್ತಮ ಸಮಸಮಾಜ ಕಟ್ಟಲು ಸಾಧ್ಯ ಎಂದರು.

ಶ್ರೀ ಕಾನಾಮಡುಗಿನ ಶ್ರೀ ಶರಣಬಸವೇಶ್ವರ ದಾಸೋಹ ಮಠದ ಶ್ರೀ ಐಮಡಿ ಶರಣಾರ್ಯರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೆ.ಎಸ್. ವೇಣುಗೋಪಾಲ್ ರೆಡ್ಡಿ, ದಂತಪಂಕ್ತಿ ಜೋಡಣಾ ಶಿಬಿರ ಮುಖ್ಯಸ್ಥರಾದ ಡಾ.ವಿಶ್ವನಾಥ್, ದಂತ ವೈದ್ಯರಾದ ಡಾ. ಪ್ರಫುಲ್ ತುಮಾಟಿ. ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿಗಳಾದ ಬಿ.ಮಹೇಶ್ವರಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಮರೇನಹಳ್ಳಿ ಬಸವರಾಜ್, ಚಿಗಟೇರಿ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ. ಸರ್ಕಾರಿ ದಂತ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು ಸಿಬ್ಬಂದಿ, ಇತರರು ಪಾಲ್ಗೊಂಡರು.

- - - -23ಜೆಜಿಎಲ್1: ದಂತಪಂಕ್ತಿ ವಿತರಣಾ ಮತ್ತು ಜೋಡಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ, ವಿವಿಧ ಸ್ವಾಮೀಜಿಗಳು, ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ