ಸಮಾಜಮುಖಿ ಕಾರ್ಯಗಳಿಗೆ ದಾನಿಗಳ ಸಹಕಾರ ಅಗತ್ಯ: ವಸಂತರಾವ ಕುಲಕರ್ಣಿ

KannadaprabhaNewsNetwork |  
Published : Jul 09, 2025, 12:24 AM IST
ಲೋಕಾಪುರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಿವೃತ್ತಿ ಹೊಂದಿದ ನೌಕರರನ್ನು ವಿಪ್ರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ವಸಂತರಾವ ಕುಲಕರ್ಣಿ, ಎಚ್.ಜಿ.ಶ್ರೀಪಾದ, ಬಿ.ಡಿ.ಚಿನಗುಂಡಿ, ಬಿ.ಎಲ್.ಬಬಲಾದಿ, ಭೀಮಣ್ಣಾ ಜೋಶಿ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅವಿತರವಾಗಿ ನಡೆಯಲು ದಾನಿಗಳ ಸಹಕಾರ ಅಗತ್ಯ ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತರಾವ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅವಿತರವಾಗಿ ನಡೆಯಲು ದಾನಿಗಳ ಸಹಕಾರ ಅಗತ್ಯ ಎಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಸಂತರಾವ ಕುಲಕರ್ಣಿ ಹೇಳಿದರು.

ಪಟ್ಟಣದ ರಾಘವೆಂದ್ರ ಕಲ್ಯಾಣ ಮಂಟಪದಲ್ಲಿ ನಿವೃತ್ತಿ ಹೊಂದಿದ ನೌಕರರನ್ನು ಮತ್ತು ದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲು ಎಲ್ಲ ವಿಪ್ರ ಬಾಂಧವರ ಹಾಗೂ ದಾನಿಗಳ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ವಿಪ್ರ ಸಮಾಜದ ಮುಖಂಡರು ಸಂಘಟನೆಗೆ ಹೆಚ್ಚು ಒತ್ತು ನೀಡಿ ಸಮಾಜಮುಖಿ ಕಾರ್ಯಕ್ರಮ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ನಿವೃತ್ತಿ ನೌಕರ ಅಪ್ಪಣ್ಣಾ ಕುಲಕರ್ಣಿ ಮಾತನಾಡಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮಾಜದಲ್ಲಿ ಒಕ್ಕಟ್ಟಿಗೆ ಬಲಬಂದತಾಗಿದೆ. ಆಸಕ್ತರು, ನೊಂದವರು ಸಂಕುಚಿತ ಮನೋಭಾವನೆ ಬಿಟ್ಟು ಹೊರಬನ್ನಿ, ನಾವು ದುಡಿದ ಅಲ್ಪಭಾಗವನ್ನು ಸಮಾಜಕ್ಕೆ ದಾನ ಮಾಡಿ, ಯಾರು ಬರುವಾಗ ಏನನ್ನೂ ತರುವುದಿಲ್ಲ. ಹೋಗುವಾಗ ಕೊಂಡೊಯ್ಯುವುದು ಇಲ್ಲ. ಹೀಗಾಗಿ ಸಮಾಜದ ನೊಂದವರಿಗಾಗಿ ಒಳ್ಳೆಯ ಮನಸ್ಸಿನಿಂದ ದಾನ ಮಾಡಿ ಸಮಾಜದ ಒಳತಿಗಾಗಿ ಎಲ್ಲರ ಸಹಕಾರ ಅಗತ್ಯ ಎಂದರು.

ನಿವೃತ್ತ ಶಿಕ್ಷಕ ಡಿ.ಪಿ.ದೇವಮಾನೆ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ದಾನಿಗಳ ಕೊಡುಗೆ ಮಹತ್ವದ್ದಾಗಿದೆ. ದಾನಿಗಳು ಆರ್ಥಿಕ, ಸಹಾಯ, ವಸ್ತು ಸಹಾಯ ಅಥವಾ ಸೇವೆಗಳನ್ನು ಒದಗಿಸುವ ಮೂಲಕ ಸಮಾಜಕ್ಕೆ ಸಹಕರಿಸಬಹುದು ಎಂದರು.

ಮುಂದಿನ ತಿಂಗಳು ನಡೆಯುವ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೊತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲ ವಿಪ್ರ ಬಾಂಧವರು ಸರ್ವಾನುಮತದಿಂದ ಅಂಗೀಕರಿಸಿದರು. ರಾಘವೇಂದ್ರ ಸ್ವಾಮಿಗಳ ಕಲ್ಯಾಣ ಮಂಟಪದ ಕಾಮಗಾರಿ ಬೇಗನೆ ಮುಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹಿರಿಯ ಮುಖಂಡ ಎಚ್.ಜಿ. ಶ್ರೀಪಾದ ಮನವಿ ಮಾಡಿದರು.

ಈ ವೇಳೆ ವಿಪ್ರಸಮಾಜದ ಮುಖಂಡರಾದ ಬಿ.ಡಿ. ಚಿನಗುಂಡಿ, ಬಾಬುರಾವ ಐತಾಳ, ಬಿ.ಎಲ್. ಬಬಲಾದಿ, ಶ್ರೀನಿವಾಸ ಕುಲಕರ್ಣಿ, ಕೆ.ವಿ. ಕುಲಕರ್ಣಿ, ಮೊಹನರಾವ ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ, ಭೀಮಣ್ಣ ಜೋಶಿ, ನಿವೃತ್ತ ನೌಕರರಾದ ರಾಘವೇಂದ್ರ ಕುಲಕರ್ಣಿ, ಎ.ವಿ. ಜೋಶಿ, ಅರ್ಚಕ ಆನಂದಚಾರ್ಯ ಜಂಬಗಿ, ವೆಂಕಣ್ಣಾ ಕಟ್ಟಿ, ಪ್ರಲ್ಹಾದ ದೇಶಪಾಂಡೆ, ಬಿ.ಎನ್. ಜೋಶಿ, ಗೋಪಾಲ ದೇಶಪಾಂಡೆ, ಸಂತೋಷ ದೇಶಪಾಂಡೆ, ಸುಶಿಲೇಂದ್ರ ದೇಶಪಾಂಡೆ, ರಮೇಶ ಐತಾಳ, ನಾರಾಯಣ ಕುಲಕರ್ಣಿ, ವಿಜಯ ದೇಶಪಾಂಡೆ, ವಿಪ್ರ ಸಮಾಜ ಬಾಂಧವರು, ಗುರುಸಾರ್ವಭೌಮ ಯುವಕ ಮಂಡಳ ಹಾಗೂ ಗಾಯತ್ರಿ ಭಜನಾ ಮಂಡಳದ ಸದಸ್ಯರು ಇದ್ದರು.

PREV