ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಹೊಳೆನರಸೀಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಶಿಕ್ಷಣ, ಆರೋಗ್ಯ ಸೌಲಭ್ಯ ಎಲ್ಲವೂ ದುಬಾರಿಯಾಗಿದೆ. ಹೀಗಾಗಿ ಇವರು ಗ್ಯಾರಂಟಿ ನೆಪದಲ್ಲಿ ಕಾಂಗ್ರೆಸ್ ಸರಕಾರ ನೀಡುತ್ತಿರುವ 2000 ಹಣಕ್ಕೆ ದಯಮಾಡಿ ಮರುಳಾಗಬೇಡಿ. ತಾವು ಮನಸ್ಸು ಮಾಡಿದರೆ ತಿಂಗಳಿಗೆ 4000, 5,000 ಬರುವಂತೆ ಮಾಡಬಲ್ಲೆ. ನನ್ನ ಗುರಿ ಹಳ್ಳಿಯ ಮಕ್ಕಳಿಗೆ ನಗರ ಪ್ರದೇಶದ ಶ್ರೀಮಂತರ ಮಕ್ಕಳಿಗೆ ಸಿಗುವಂತಹ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿದೆ ಎಂದು ಸಚಿವರು ಹೇಳಿದರು. ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳಿಗೆ 30 ಲಕ್ಷದಿಂದ 1 ಕೋಟಿವರೆಗೆ ವೆಚ್ಚವಾಗುತ್ತಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ನೀಡುವ 2000 ಯಾವುದೇ ರೀತಿಯ ಸಹಾಯಕ್ಕೆ ಬರುವುದಿಲ್ಲ. ಇಂತಹ ದುಬಾರಿ ಚಿಕಿತ್ಸೆಗಳಿಗಾಗಿ ಬಡವರು ಮನೆ, ಜಮೀನು ಮಾರಿ ಸಾಲಗಾರರಾಗುತ್ತಿರುವುದನ್ನು ತಪ್ಪಿಸಲು ಸರ್ಕಾರವೇ ಈ ಜವಾಬ್ದಾರಿಯನ್ನು ಹೊರಬೇಕು ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಆಸ್ಪತ್ರೆಗಳ ದಂಧೆ ವಿರುದ್ಧ ಕಳವಳಆಸ್ಪತ್ರೆಗಳ ದುಬಾರಿ ದಂಧೆ ಹಾಗೂ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮಂಡ್ಯ ಮೂಲದ ಆಟೋ ಚಾಲಕನ ಒಂದೂವರೆ ವರ್ಷದ ಮಗುವಿಗೆ ಆದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಣ್ಣ ಗಾಯದೊಂದಿಗೆ ನಾಗರಬಾವಿಯ ''''''''ಕ್ಲೌಡ್ ನೈನ್'''''''' ಆಸ್ಪತ್ರೆಗೆ ದಾಖಲಾದ ಮಗುವಿಗೆ ವೈದ್ಯರ ತಪ್ಪು ಚಿಕಿತ್ಸೆ ಹಾಗೂ ಅರಿವಳಿಕೆ (ಅನಸ್ತೇಶಿಯ) ನೀಡಿದ ಪರಿಣಾಮ ಮಗು ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದರೂ ಸೂಕ್ತ ಸ್ಪಂದನೆ ನೀಡದ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆಯನ್ನು ಅವರು ವಿವರಿಸಿದರು. ಅಲ್ಲದೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮತ್ತೊಂದು ಬಡ ಮಗುವಿಗೆ 2.75 ಲಕ್ಷ ಮೌಲ್ಯದ ಆಕ್ಸಿಜನ್ ಯಂತ್ರವನ್ನು ತಾವೇ ಕೊಡಿಸಿದ್ದು, ದುಬಾರಿ ಚಿಕಿತ್ಸಾ ವೆಚ್ಚಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 540 ಕೋಟಿ ಸೇರಿದಂತೆ ರಾಜ್ಯಾದ್ಯಂತ ಒಟ್ಟು 25,000 ಕೋಟಿ ರೈತರ ಸಾಲಮನ್ನಾ ಮಾಡಿದೆ. ಆದರೆ, ಇಂದಿನ ಸರ್ಕಾರ ಬರ ಪರಿಹಾರದ ಹೆಸರಿನಲ್ಲಿ ಯಾದಗಿರಿ ಭಾಗದ ರೈತರಿಗೆ ಕೇವಲ 1,000-1,500 ನೀಡುತ್ತಿದ್ದು, ಇದನ್ನು ಭಿಕ್ಷೆ ಎಂದು ಭಾವಿಸಿ ರೈತರು ಹಿಂತಿರುಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಸೇರಿದಂತೆ ಬೊಮ್ಮೆನಹಳ್ಳಿ ಗ್ರಾಮದ ಸುತ್ತಮುತ್ತಲ ಗ್ರಾಮಗಳ ಜನರು ಭಾಗಿಯಾಗಿದ್ದರು.