ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪುರಾಣ ಪ್ರಸಿದ್ಧ ಸಿಡಿಲುಕಲ್ಲು
ಪಾಂಡವರು ತಮ್ಮ ೧೪ ವರ್ಷಗಳ ವನವಾಸದ ಅವಧಿಯಲ್ಲಿ ಈ ಸಿಡಿಲುಕಲ್ಲುಗಳಿಂದ ಆಟವಾಡುತ್ತಿದ್ದರು ಎಂಬ ಪ್ರತೀತಿ ಇರುವ ಈ ಸ್ಥಳದಲ್ಲಿ ಭಕ್ತರು ಕಲ್ಲುಗಳ ಮೇಲೆ ಕುಳಿತು, ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಸಗಣಿ ಓಕಳಿಯಾಟ, ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ, ಕೋಲಾಟ, ವಿಶೇಷ ಪೂಜೆ, ಹೂವಿನ ಅಲಂಕಾರ, ದೇವರ ಮೆರವಣಿಗೆ, ಸಿಡಿಮದ್ದು ಪ್ರದರ್ಶನ, ಮನೆ ಮನೆ ದೀಪೋತ್ಸವ ಕಾರ್ಯಕ್ರಮ ಸೇರಿದಂತೆ ಜಾನಪದ ಶೈಲಿಯ ಹಲವು ಕಾರ್ಯಕ್ರಮಗಳು ನಡೆದವು. ಜಾತ್ರೆ ಎಂದರೆ ದೇವರ ದರ್ಶನ ಮಾತ್ರವಲ್ಲ, ಇಡೀ ಜಾತ್ರಾ ಮೈದಾನವೇ ಒಂದು ದೊಡ್ಡ ಸಂತೆಯಾಗಿ ಮಾರ್ಪಟ್ಟಿತ್ತು.ಸಿಹಿ, ಖಾರದ ಅಂಗಡಿಗೆ ಮುಗಿಬಿದ್ದ ಭಕ್ತರುಜಾತ್ರಾ ಮೈದಾನದ ಸಿಹಿ ಅಂಗಡಿಯಲ್ಲಿ ಹಳದಿ ಮೈಸೂರು ಪಾಕ್, ಕಡ್ಲೆ ಪುರಿ, ಮಿಕ್ಸ್ಚರ್, ಕಡ್ಲೆಕಾಯಿ ಬೀಜ, ಖಾರದ ಸೇವುಗಳನ್ನು ರಾಶಿ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಪಕ್ಕದಲ್ಲೇ ಕೆಂಪು ಜಿಲೇಬಿ ರಾಶಿ ಭಕ್ತರ ಬಾಯಲ್ಲಿ ನೀರೂರಿಸುತ್ತಿತ್ತು. ಅಂಗಡಿಯವರು ತೂಕ ಹಾಕಿ ಕೊಡುತ್ತಿದ್ದರೆ, ಭಕ್ತರು ಸಾಲುಗಟ್ಟಿ ಖರೀದಿಸುತ್ತಿದ್ದರು.ಬಳೆ ಅಂಗಡಿಯಲ್ಲಿ ಹೆಣ್ಣುಮಕ್ಕಳ ಸಂಭ್ರಮ
ಬಣ್ಣ ಬಣ್ಣದ ಕಾರು, ಜೀಪ್, ಜೆಸಿಬಿ, ಟ್ರ್ಯಾಕ್ಟರ್, ಬಸ್, ಬೊಂಬೆ ಆಟಿಕೆಗಳನ್ನು ಅಂಗಡಿಯಲ್ಲಿ ಸಾಲಾಗಿ ಜೋಡಿಸಲಾಗಿತ್ತು. ತಂದೆ-ತಾಯಂದಿರು ಮಕ್ಕಳಿಗೆ ಇಷ್ಟವಾದ ಆಟಿಕೆ ತೆಗೆದುಕೊಂಡು ಕೊಡುತ್ತಿದ್ದರೆ, ಅಂಗಡಿಯವರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದರು.ಬಿಸಿ ಬಿಸಿ ಜಿಲೇಬಿ:
ಮಾರುತಿ ಚಾಟ್ಸ್ ಅಂಗಡಿಯಲ್ಲಿ ಬಿಸಿ ಬಿಸಿ ಗೋಬಿ, ವಡಾಪಾವ್, ಕಬಾಬ್, ಬಜ್ಜಿ ತಯಾರಾಗುತ್ತಿತ್ತು. ಭಕ್ತರು ಚಾಟ್ಸ್ ಸವಿಯುತ್ತಾ, ಜಾತ್ರೆಯ ಸಂಭ್ರಮವನ್ನು ಅನುಭವಿಸುತ್ತಿದ್ದರು. ಒಬ್ಬರು ಕೈಯಲ್ಲಿ ವಡಾಪಾವ್ ಹಿಡಿದು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದು ಜಾತ್ರೆಯ ಖುಷಿಯನ್ನು ತೋರಿಸುತ್ತಿತ್ತು.ದೇವಸ್ಥಾನದ ಮುಂಭಾಗದಲ್ಲಿ ಜನಸಾಗರ:
ವಾಹನಗಳ ರಕ್ಷಾದೇವತೆ:ದಡಿಘಟ್ಟ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯ ಮಹಿಮೆ ಅಪಾರವಾಗಿದೆ. ಹೊಸ ವಾಹನವನ್ನು ದಡಿಘಟ್ಟ ಕ್ಷೇತ್ರಕ್ಕೆ ಬಂದು ಶ್ರೀ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿದರೆ ವಾಹನ ಅಪಘಾತಕ್ಕೀಡಾಗುವುದಿಲ್ಲ ಎಂಬ ನಂಬಿಕೆ ಭಕ್ತಾಧಿಗಳಲ್ಲಿದೆ. ಇದರಿಂದಾಗಿ ಈ ಭಾಗದಲ್ಲಿ ಹೊಸದಾಗಿ ಖರೀದಿಸಿದ ವಾಹನವನ್ನು ಮೊದಲು ದಡಿಘಟ್ಟದ ಶ್ರೀ ಲಕ್ಷ್ಮೀದೇವಿ ಕ್ಷೇತ್ರಕ್ಕೆ ತಂದು ಪ್ರಥಮ ಪೂಜೆ ಸಲ್ಲಿಸುವುದು ಭಕ್ತರ ವಾಡಿಕೆಯಾಗಿದೆ.