ವದಂತಿ ನಂಬಬೇಡಿ, ಆರೋಗ್ಯವಾಗಿದ್ದೇನೆ- ಶಾಸಕ ಶಿವಣ್ಣನವರ

KannadaprabhaNewsNetwork |  
Published : Mar 31, 2026, 02:30 AM IST
 ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿರುವ ಶಾಸಕ ಬಸವರಾಜ ಶಿವಣ್ಣನವರ..  | Kannada Prabha

ಸಾರಾಂಶ

ನನ್ನ ಆರೋಗ್ಯದಲ್ಲಿ ಸ್ಥಿರತೆ ಬಂದಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್‌ ಅಭ್ಯರ್ಥಿ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅನಾರೋಗ್ಯದ ಕುರಿತು ರಾಜಕೀಯ ವಿರೋಧಿಗಳ ಹೇಳಿಕೆಗಳಿಗೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಕಿವಿಗೊಡದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ಬ್ಯಾಡಗಿ: ನನ್ನ ಆರೋಗ್ಯದಲ್ಲಿ ಸ್ಥಿರತೆ ಬಂದಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್‌ ಅಭ್ಯರ್ಥಿ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅನಾರೋಗ್ಯದ ಕುರಿತು ರಾಜಕೀಯ ವಿರೋಧಿಗಳ ಹೇಳಿಕೆಗಳಿಗೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಕಿವಿಗೊಡದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದು ತಿಂಗಳ ಹಿಂದೆ ನನ್ನ ಅರೋಗ್ಯದಲ್ಲಿ ಏರುಪೇರಾಗಿತ್ತು. ಆದರೆ, ವೈದ್ಯರ ಸಲಹೆ ಮೇರೆಗೆ ಕಳೆದ 1 ತಿಂಗಳ ವಿಶ್ರಾಂತಿ ಪಡೆದುಕೊಂಡಿದ್ದೆ. ಆದರೆ ಚಿಕಿತ್ಸೆ ಬಳಿಕ ನನ್ನ ಆರೋಗ್ಯ ಇನ್ನಷ್ಟು ಸುಧಾರಣೆ ಕಂಡಿದ್ದು ಇನ್ನೂ 20 ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲವೆಂದರು.

ವದಂತಿ ನಂಬಬೇಡಿ: ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯವಿಲ್ಲ, ಇನ್ನೇನು ಬಸವರಾಜ ಶಿವಣ್ಣನವರ ರಾಜಕೀಯ ಭವಿಷ್ಯ ಮುಗಿಯಿತು, ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದೆಲ್ಲಾ ಕೆಲವರು ಭಾಷಣ ಮಾಡಿದ್ದು ನನ್ನ ಗಮನಕ್ಕೆ ಬಂದಿದ್ದು, ಇದು ನನ್ನ ರಾಜಕೀಯ ವಿರೋಧಿಗಳ ಪಿತೂರಿ, ಯಾವುದೇ ಕಾರಣಕ್ಕೂ ಇಂತಹ ಸುಳ್ಳು ನಂಬಬೇಡಿ ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಪಕ್ಷದ ಹಿರಿಯ ಮುಖಂಡರ ಸಹಕಾರದಿಂದ ಪಂಚ ಗ್ಯಾರಂಟಿಗಳ ಅನುಷ್ಠಾನದ ನಡುವೆಯೂ ಬ್ಯಾಡಗಿ ಮತಕ್ಷೇತ್ರದಲ್ಲಿ ₹800 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ, ₹33 ಕೋಟಿ ವೆಚ್ಚದಲ್ಲಿ ಹಿರೇಅಣಜಿಯಲ್ಲಿ ಕಾರ್ಮಿಕರ ಮಕ್ಕಳ ವಸತಿ ಶಾಲೆ, ₹ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆ ಅಗಲೀಕರಣ, ₹25 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಹೀಗಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಜನರು ನನ್ನನ್ನು ಆಶೀರ್ವದಿಸುವ ವಿಶ್ವಾಸವಿದೆ ಎಂದರು.ಮುಖ್ಯರಸ್ತೆ ಅಗಲೀಕರಣ:ಬರುವ 15 ದಿನಗಳಲ್ಲಿ ₹10 ಕೋಟಿ ಹಣ ಬಿಡುಗಡೆಯಾಗಲಿದ್ದು, ಪರಿಹಾರ ಪಡೆಯದೇ ಇರುವವರ ಮೊತ್ತವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮುಂದಿನ ಒಂದು ತಿಂಗಳಲ್ಲಿ ರಸ್ತೆ ಕಾಮಗಾರಿಗೆ ಮುಂದಾಗಲಿದ್ದೇವೆ, ಇದರಲ್ಲಿ ಯಾವುದೇ ಸಂಶಯ ಬೇಡ, ಇದೇ ಕಾರಣಕ್ಕಾಗಿ ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚುವ ಕೆಲಸ ನಿಲ್ಲಿಸಿದ್ದೇವೆ ಎಂದ ಅವರು, ಮುಖ್ಯರಸ್ತೆಯಲ್ಲಿನ ಮಾಲೀಕರ ಸಹಕಾರ ಕೇಳಿದ ಅವರು ಆದಷ್ಟು ಬೇಗನೆ ಪರಿಹಾರದ ಮೊತ್ತವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಬಸ್ ನಿಲ್ದಾಣ ಸ್ಥಳಾಂತರ: ಪಟ್ಟಣದಲ್ಲಿ ಈಗಿರುವ ಬಸ್ ನಿಲ್ದಾಣ ಕಿಷ್ಕಿಂಧೆಯಂತಾಗಿದ್ದು ಸುಮಾರು 2 ಎಕರೆ ಪ್ರದೇಶದಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶ ಹೊಂದಿದ್ದು ಬಸ್ ನಿಲ್ದಾಣ ಸ್ಥಳಾಂತರಕ್ಕೆ ಅನುಮೋದನೆ ದೊರೆತಿದೆ. ಅಲ್ಲದೇ ಬಡವರ ಅನುಕೂಲಕ್ಕಾಗಿ ಅಗಸನಹಳ್ಳಿಯ ಪಾಲಿಟೆಕ್ನಿಕ್ ಕಾಲೇಜಿನಿಂದ ನೆಹರುನಗರದವರೆಗೆ ಹಾಗೂ ಬಸ್ ನಿಲ್ದಾಣದಿಂದ ಸೇಂಟ ಜಾನ್ ಶಾಲೆಯವರೆಗೆ ಪ್ರತ್ಯೇಕ ಸ್ಟೇಜ್ ಮಾಡಿಕೊಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಾನ್ ಮಹಾವೀರರು ತತ್ವಗಳು ಜೀವನ ಉನ್ನತೀಗೇರಿಸುವ ಮಾರ್ಗಗಳು
ಅಕ್ಕಿಆಲೂರಿನಲ್ಲಿ ಹೆಸ್ಕಾಂ ಉಪವಿಭಾಗ ಶೀಘ್ರ ಆರಂಭ