ಕಟ್ಟಿಗೆ ಡಿಪೋ ಸ್ಥಳಾಂತರ ಮಾಡಬೇಡಿ: ಸೂರಜ್ ನಾಯ್ಕ್

KannadaprabhaNewsNetwork |  
Published : Aug 31, 2026, 02:45 AM IST
ಕಟ್ಟಿಗೆ ಡಿಪೋ ಸ್ಥಳಾಂತರ ಮಾಡಬಾರದು ಎಂದು ಜೆಡಿಎಸ್ ತಾಲೂಕ ಘಟಕದ ವತಿಯಿಂದ  ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯ್ತು. | Kannada Prabha

ಸಾರಾಂಶ

ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಪಕ್ಕದಲ್ಲಿರುವ ಕಟ್ಟಿಗೆ ಡಿಪೋ ಸ್ಥಳಾಂತರ ಮಾಡಬಾರದು ಎಂದು ಜೆಡಿಎಸ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾವರ

ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಪಕ್ಕದಲ್ಲಿರುವ ಕಟ್ಟಿಗೆ ಡಿಪೋ ಸ್ಥಳಾಂತರ ಮಾಡಬಾರದು ಎಂದು ಜೆಡಿಎಸ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

70 ವರ್ಷಕ್ಕೂ ಹಿಂದಿನಿಂದ ಪಟ್ಟಣದ ಶವಸಂಸ್ಕಾರಕ್ಕಾಗಿ ನೀಡುವ ಕಟ್ಟಿಗೆ ಡಿಪೋ ಇರುವ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯ ಕೌಂಟರ್ ತೆರೆಯುವುದನ್ನು ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಟಿ.ಟಿ. ನಾಯ್ಕ, ಮಾಜಿ ಪಪಂ ಸದಸ್ಯ ಶ್ರೀಪಾದ ನಾಯ್ಕ, ಮಾಜಿ ಗ್ರಾಪಂ ಸದಸ್ಯರಾದ ರತ್ನಾಕರ ನಾಯ್ಕ, ಸಚೀನ ನಾಯ್ಕ, ಮುಖಂಡರಾದ ಪಿ.ಟಿ. ನಾಯ್ಕ, ಎಸ್.ವಿ. ನಾಯ್ಕ, ಧನಂಜಯ ನಾಯ್ಕ, ಜಗದೀಶ ನಾಯ್ಕ, ನವೀನ ಮೇಸ್ತ, ವಿನಾಯಕ ಆಚಾರಿ, ಆರ್.ಕೆ. ಮೇಸ್ತ, ಉದಯ ಗೌಡ, ದೀಪಕ ಶೇಟ್ ಕರ್ಕಿ ಮತ್ತಿತರರಿದ್ದರು.ಪ್ರವಾಸೊದ್ಯಮ ಇಲಾಖೆಯಿಂದ ನಿರ್ಮಿಸುವ ಕೌಂಟರ್ ಜಾಗ ಸ್ಥಳಾಂತರಿಸಲಿ

ಹೊನ್ನಾವರ ಪಟ್ಟಣದಲ್ಲಿ ಕಟ್ಟಿಗೆ ಡಿಪೋ ಇರುವ ಪ್ರದೇಶದಲ್ಲಿ ಪ್ರವಾಸೊದ್ಯಮ ಇಲಾಖೆಯಿಂದ ಕೌಂಟರ್ ತೆಗೆಯುವ ಜಾಗ ಯಾವುದೇ ಕಾರಣಕ್ಕೂ ನೀಡಲು ಸಾಧ್ಯವಿಲ್ಲ. ಪಟ್ಟಣದ ಬೇರೆ ಸ್ಥಳದಲ್ಲಿ ಬೇಕಿದ್ದರೆ ಕೌಂಟರ್ ತೆರೆಯುವಂತೆ ವಿವಿಧ ಸಂಘಟನೆಯ ಪ್ರಮುಖರು ಒತ್ತಾಯಿಸಿದರು‌.ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರಾವತಿ ಮುಕ್ತಿಧಾಮದ ಅಧ್ಯಕ್ಷ ಜೆ.ಟಿ. ಪೈ, ಕಳೆದ 70 ವರ್ಷದಿಂದ ಕಟ್ಟಿಗೆ ಡಿಪೋ ನಡೆಸುವ ಸ್ಥಳ ಬಿಟ್ಟುಕೊಡಲು ಸಾಧ್ಯವಿಲ್ಲ. ಹಿಂದೂ ಧರ್ಮದ ಪ್ರಕಾರ ಶವಸಂಸ್ಕಾರಕ್ಕೆ ಕಟ್ಟಿಗೆ ಬೇಕೆ ಬೇಕು. ಸಾರ್ವಜನಿಕರ ಗಮನಕ್ಕೂ ತರದೇ ಸ್ಥಳ ಬದಲಾವಣೆ ಮಾಡುವುದು ಖೇದಕರ ಎಂದರು.ಶ್ರೀ ಕುಮಾರ ಸಂಸ್ಥೆಯ ಮಾಲಕ ವೆಂಕ್ರಟಮಣ ಹೆಗಡೆ ಮಾತನಾಡಿ, ಕಟ್ಟಿಗೆ ಡಿಪೋ ಈಗಿರುವ ಸ್ಥಳದಲ್ಲೆ ಮುಂದುವರೆಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸುವುದಾಗಿ ತಿಳಿಸಿದರು.

ಮೀನುಗಾರ ಮುಖಂಡ ಉಮೇಶ ಮೇಸ್ತ, ಪಪಂ ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ಶರಾವತಿ ಮುಕ್ತಿಧಾಮದ ಟ್ರಸ್ಟಿ ಜಿ.ಜಿ. ಶಂಕರ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ನಾಯ್ಕ ಮಾತನಾಡಿದರು. ಈ ಸಂದರ್ಭ ವಿವಿಧ ಸಂಘಟನೆಯ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಖ್ಯಾಬಲ ಕಾಂಗ್ರೆಸ್‌ಗಿದ್ದರೂ ಪಿಕಾರ್ಡ್ ಬ್ಯಾಂಕ್ ಗದ್ದುಗೆ ಬಿಜೆಪಿಗೆ!
ವೈಚಾರಿಕ ಚಿಂತನೆ ಬೆಳೆಸಲು ಅಂಬೇಡ್ಕರ್ ಓದು ಪ್ರೇರಣೆ: ಜಗದೀಶ್