ದುಶ್ಚಟಗಳಿಗೆ ಅಂಟಿಕೊಳ್ಳದೆ ಕ್ರೀಡೆಯತ್ತ ಗಮನ ಹರಿಸಿ: ಮಹಮ್ಮದ್ ಯೂಸೂಫ್

KannadaprabhaNewsNetwork |  
Published : Dec 30, 2024, 01:01 AM IST
೨೯ವೈಎಲ್‌ಬಿ೩:ಯಲಬುರ್ಗಾದ ತಾಲೂಕು  ಕ್ರೀಡಾಂಗಣದಲ್ಲಿ ಸರಕಾರಿ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಟೆಸ್ಟ್ ಸೀಜನ್‌೦೬ರ ಕ್ರಿಕೆಟ್ ಅಂತಿಮ ಪಂದ್ಯಾವಳಿಯಲ್ಲಿ ಕಿಂಗ್ ಕೊಹ್ಲಿ ತಂಡ ಪ್ರಶಸ್ತಿ ಗಳಿಸಿಕೊಂಡಿತ್ತು. | Kannada Prabha

ಸಾರಾಂಶ

ಯುವಕರು ದುಶ್ಚಟಗಳಿಗೆ ಅಂಟಿಕೊಳ್ಳದೆ ಕ್ರೀಡೆಯತ್ತ ಹೆಚ್ಚು ಗಮನಹರಿಸಿ ನಿಮ್ಮ ಜೀವನ ರೂಪಿಸಿಕೊಳ್ಳಬೇಕು.

ಕಿಂಗ್ ಕೊಹ್ಲಿ ತಂಡಕ್ಕೆ ಸೀಜನ್-೬ ಚಾಂಪಿಯನ್ ಪಟ್ಟಕನ್ನಡಪ್ರಭ ವಾರ್ತೆ ಯಲಬುರ್ಗಾ

ಯುವಕರು ದುಶ್ಚಟಗಳಿಗೆ ಅಂಟಿಕೊಳ್ಳದೆ ಕ್ರೀಡೆಯತ್ತ ಹೆಚ್ಚು ಗಮನಹರಿಸಿ ನಿಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಿಕ್ಷಕ ಮಹಮ್ಮದ್ ಯೂಸೂಫ್ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಟೆಸ್ಟ್ ಸೀಜನ್‌೦೬ರ ಕ್ರಿಕೆಟ್ ಅಂತಿಮ ಪಂದ್ಯಾವಳಿಯಲ್ಲಿ ಕಿಂಗ್ ಕೊಹ್ಲಿ ತಂಡಕ್ಕೆ ಟ್ರೋಪಿ ವಿತರಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ತಂಡದಲ್ಲಿ ಪಾಲ್ಗೊಂಡು ಎಷ್ಟು ಉತ್ತಮ ಪ್ರದರ್ಶನ ನೀಡಿದ್ದೀನಿ ಎನ್ನುವುದು ಬಹುಮುಖ್ಯ ಎಂದರು.

ಕ್ರಿಕೆಟ್‌ ಇವತ್ತು ಅತೀ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಅದರಂತೆ ಎಲ್ಲಾ ಕ್ರೀಡೆಯಲ್ಲೂ ಇಂತಹ ಆಸಕ್ತಿಯನ್ನು ಕ್ರೀಡಾಪಟುಗಳು ಹೊಂದಬೇಕು. ಅಂದಾಗ ಅಂತಾರಾಷ್ಟ್ರೀಯ, ರಾಜ್ಯ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲು ಅನುಕೂಲವಾಗುತ್ತದೆ. ಯುವಕರು ಹೆಚ್ಚು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ಪ್ರಥಮ ಸ್ಥಾನ ಪಡೆದ ಕಿಂಗ್ ಕೊಹ್ಲಿ ತಂಡ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಾಸ್ಟರ್ ಬ್ಲಾಸ್ಟರ್ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.ಪ್ರಶಸ್ತಿ ವಿತರಣೆ:

ನಾಗರಾಜ ಛಲವಾದಿ (ಪಂದ್ಯ ಹಾಗೂ ಸರಣಿ ಶ್ರೇಷ್ಠ), ಸುರೇಶ್ ಛಲವಾದಿ ಮತ್ತು ರಮೇಶ್ ಸ್ಟಾಂಪಿನ್ (ಉತ್ತಮ ಬಾಲರ್), ಗವಿ ಕುಂಬಾರ (ಉತ್ತಮ ಕೀಪರ್), ಕಿಶೋರ್ ಗದ್ದಿ (ಉತ್ತರ ಪೀಲ್ಡರ್), ಜಾನ್ ಬಣಕಾರ ಮತ್ತು ಶಿವಕುಮಾರ ಸಾದರಖಾನ್ (ಉತ್ತಮ ಬ್ಯಾಟ್‌ಮ್ಯಾನ್), ಪ್ರಕಾಶ ಸಾತನೂರು (ಯುವ ಆಟಗಾರ), ಶಾಹಜಾನ ಅತ್ತಾರ (ಉತ್ತಮ ನಾಯಕ)ಗೆ ಪ್ರಶಸ್ತಿ ನೀಡಲಾಯಿತು.

ಈ ವೇಳೆಯಲ್ಲಿ ಕ್ರೀಡಾಪಟುಗಳಾದ ಪ್ರಕಾಶ ಛಲವಾದಿ, ಬಸವರಾಜ ಅಬ್ಬಿಗೇರಿ, ಸುರೇಶ್ ಛಲವಾದಿ, ಧನಿಯಪ್ಪ ಬಣಕಾರ್, ಮಹಾಂತೇಶ ಛಲವಾದಿ, ಸಿರಾಜ್, ಬಾಬು ಟೆಂಗಿನಕಾಯಿ, ಪ್ರಕಾಶ ಉಂಗ್ರಾಣಿ, ಮಲ್ಲು ಸಾದರಖಾನ, ದೇವಿಶಕ್ತಿ ಪ್ರಸಾದ್ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ