ಜನರ ಮೂಲ ಸೌಕರ್ಯ ನೀಗಲು ಅನುದಾನ ಬೇಡವೆ: ಶಾಸಕ ವಜ್ಜಲ್ ಗರಂ

KannadaprabhaNewsNetwork |  
Published : Nov 25, 2026, 01:30 AM IST
 | Kannada Prabha

ಸಾರಾಂಶ

ಆನರ ಸಮಸ್ಯೆಗಳ ಹೋಗಲಾಡಿಸಲು ಗ್ರಾಮ ಪಂಚಾಯ್ತಿ ಸೇರಿದಂತೆ ಅನೇಕ ಇಲಾಖೆಗಳಿಗೆ ಹಣಕಾಸು ಕೊರತೆ ಆಡಳಿತ ನಡೆಸಲು ಕೈಕಟ್ಟಿ ಹಾಕಿದೆ ಎಂದು ತಾ.ಪಂ ಇಒ ಉಮೇಶರವರ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಮಾನಪ್ಪ ವಜ್ಜಲ್ ಬರಗಾಲದಂತಹ ಭೀಕರ ದುರಿತಕಾಲದಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡದೇ ಹೋದರೆ ಜನರಿಗೆ ಮೂಲ ಸೌಕರ್ಯಗಳ ಒದಗಿಸಲು ಸಾಧ್ಯವೇ ಎಂದು ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ ಹೊರ ಹಾಕಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಆನರ ಸಮಸ್ಯೆಗಳ ಹೋಗಲಾಡಿಸಲು ಗ್ರಾಮ ಪಂಚಾಯ್ತಿ ಸೇರಿದಂತೆ ಅನೇಕ ಇಲಾಖೆಗಳಿಗೆ ಹಣಕಾಸು ಕೊರತೆ ಆಡಳಿತ ನಡೆಸಲು ಕೈಕಟ್ಟಿ ಹಾಕಿದೆ ಎಂದು ತಾ.ಪಂ ಇಒ ಉಮೇಶರವರ ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಮಾನಪ್ಪ ವಜ್ಜಲ್ ಬರಗಾಲದಂತಹ ಭೀಕರ ದುರಿತಕಾಲದಲ್ಲಿ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡದೇ ಹೋದರೆ ಜನರಿಗೆ ಮೂಲ ಸೌಕರ್ಯಗಳ ಒದಗಿಸಲು ಸಾಧ್ಯವೇ ಎಂದು ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ ಹೊರ ಹಾಕಿದರು.

ತಾಲ್ಲೂಕ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಭೀರಕ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಆಡಳಿತಗಳಿಗೆ ಹೆಚ್ಚಿನ ಅನುದಾನ ನೀಡಿದರೆ ಜನರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ಶಿಕ್ಷಣ ಸೆರಿದಂತೆ ಮೂಲ ಸೌಕರ್ಯಗಳು ಒದಗಿಸಲು ಅನುಕೂಲವಾಗುತ್ತದೆ. ಆದರೆ ಬರಗಾಲದಂತಹ ಭೀಕರ ಸ್ಥಿತಿಯಲ್ಲಿ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಅನುದಾನ ನೀಡದೇ ಇದ್ದರೆ ಜನರ ಪರಸ್ಥಿತಿ ಗಂಭೀರವಾಗಲಿದೆ ಎಂದು ತಿಳಿಸಿದರು.

ರಸ್ತೆ ನಿರ್ಮಾಣ ಮಾಡುವ ಪೂರ್ವದಲ್ಲಿ ರಸ್ತೆಗೆ ಕಂಕರ್ ಹಾಕಿ ವರ್ಷಗಟ್ಟಲೆ ಹಾಗೆಯೇ ಬಿಡಲಾಗಿದೆ. ಹೀಗಾದರೆ ಜನರು ಓಡಾಡುವುದು ಹೇಗೆ, ಕಾಮಗಾರಿ ಗುತ್ತಿಗೆ ಪಡೆದ ಗುತ್ತೆದಾರರಿಗೆ ಕೂಡಲೇ ಕಾಮಗಾರಿ ಮಾಡಲು ತಿಳಿಸಿ ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಎಂದು ಅಧಿಕಾರಿ ರಮೇಶ ರವರಿಗೆ ತಾಕೀತು ಮಾಡಿದರು.

ಈಗಾಗಲೇ ಗುತ್ತೆಗೆದಾರರಿಗೆ 8 ಸಲ ನೋಟಿಸ್ ನೀಡಿದರೂ ಕಾಮಗಾರಿ ಆರಂಭಿಸಿಲ್ಲ ಎಂದು ಸಭೆಗೆ ಅಧಿಕಾರಿ ತಿಳಿಸಿದಾಗ 3 ನೋಟಿಸ್ ನೀಡದ ಬಳಿಕ ಗುತ್ತಿಗೆ ದಾರ ಎಚ್ಚೆತ್ತುಕೊಳ್ಳದೇ ಇದ್ದರೆ ಅವರ ಮೇಲೆ ಕ್ರಮ ಜರುಗಿಸಿ ನಿಯಮದಂತೆ 8 ಸಲ ನೋಟಿಸ್ ನೀಡಲು ಬರುವುದಿಲ್ಲ ಎಂದು ಶಾಸಕ ಮಾನಪ್ಪ ವಜ್ಜಲ್ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದರು.

ವಿಂಡ್ ಪವರ್ ಕಂಪನಿಗಳ ಮಾಲೀಕರು ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತದಿಂದ ಯಾವುದೇ ಪರವಾನಗಿ ಪಡೆಯದೇ ವಿಂಡ್ ಪವರ್ ಫ್ಯಾನ್‌ಗಳು ಅಳವಡಿ ಸುತ್ತಿದ್ದಾರೆ. ಪಿಡಿಓಗಳು ಹಣ ಪಡೆದ ಪರವಾನಗಿ ನೀಡುತ್ತಿದ್ದಾರೆ. ವಿಂಡ್ ಫ್ಯಾನ್ ಕಂಪನಿಗಳ ಭಾರಿ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿದೆ. ರೈತರ ಜಮೀನು ಕಡಿಮೆ ಬೆಲೆಗೆ ಖರೀದಿಸಿ ಮೋಸ ಮಾಡುತ್ತಿದ್ದಾರೆ. ದಲ್ಲಾಳಿಗಳ ಮೂಲಕ ಬಡ ರೈತರ ಜಮೀನು ಕಡಿಮೆ ಬೆಲೆಗೆ ಖರೀದಿಸಿ ರೈತರಿಗೆ ಮೋಸ ಮಾಡು ವ ಜಾಲ ಹರಡಿದೆ. ಗ್ರಾಮ ಪಂಚಾಯ್ತಿ ಆಡಳಿತ ಇದರ ಬಗ್ಗೆ ಗಮನ ಹರಿಸದೇ ಅಕ್ರಮ ಹಾಗೂ ಕಂಪನಿಗಳ ಕಾನೂನು ಬಾಹಿರ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಕೆಡಿಪಿ ಸದಸ್ಯರಾದ ಶಿವಣ್ಣ ಗೋಲಪಲ್ಲಿ, ಪರಮೇಶ ಗೋರ್, ನೋಡಲ್‌ ಅಧಿಕಾರಿ ಡಾ.ವಿಜಯ, ತಹಸೀಲ್ದಾರ್‌ ಸತ್ಯಮ್ಮ, ಡಿವೈಎಸ್‌ಪಿ ಸುಲೇಮಾನ್ ತಹಸೀಲ್ದಾರ್‌, ಪಿಐ ಹೊಸಕೇರಪ್ಪ, ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ, ಬಿಇಓ ಸುಜಾತ ಹೂನೂರು, ಸಿಡಿಪಿಓ ನಾಗರತ್ನ ನಾಯಕ, ಅರಣ್ಯಾಧಿಕಾರಿ ಸುಭಾಶ್ಚಂದ್ರ ನಾಯಕ ಸೇರಿದಂತೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳೂ ಸಂವಿಧಾನ ವಿರೋಧಿ: ಎಂ.ಕೃಷ್ಣಮೂರ್ತಿ
ಇಂದು ರೈತರ ಟ್ರ್ಯಾಕ್ಟರ್ ರ್‍ಯಾಲಿಗೆ ಮಹಿಳಾ ಒಕ್ಕೂಟ ಬೆಂಬಲ